ಗಾಂಜಾ-ಅಫೀಮು ವಶ: ನಾಲ್ವರ ಬಂಧನ
ಚನ್ನಮ್ಮನ ಕಿತ್ತೂರು,ಜು18: ಎಂ.ಕೆ.ಹುಬ್ಬಳ್ಳಿ ಸಮೀಪದ ದಾಬಾವೊಂದರಲ್ಲಿ ರಾಜಸ್ಥಾನ ರಾಜ್ಯದ ಮೂಲದವರಾದ ಸೋಹನಲಾಲ್ ರೇಷ್ಮಾರಾಮ್(28), ಬೀರಬಲ್ ಜಿಡ್ಡಾರಾಮ್ (48), ಅಶೋಕಕುಮಾರ ಮಾಂಗಿಲಾಲ್ ಬಿಷ್ನೋಯಿ (35), ದಿನೇಶಕುಮಾರ್ ಮಾನರಾಮ್ ಬಿಷ್ನೋಯಿ(49) ಇವರು ದಾಬಾದಲ್ಲಿ ಕಳ್ಳತನದಿಂದ ಗಾಂಜಾ ಮತ್ತು 60 ಸಾವಿರ ಬೆಲೆಬಾಳುವ 684 ತೂಕದ ಅಫೀಮ್ ವ್ಯಾಪಾರ ಮಾಡುವ ಸಂದರ್ಭದಲ್ಲಿ ಪೋಲಿಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಕಿತ್ತೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಕಾರ್ಯಾಚರಣೆಯಲ್ಲಿ ನಿಪ್ಪಾಣಿಯ ಠಾಣೆಯ ಸಿಪಿಐ ಬಿ.ಎಸ್. ತಳವಾರ, ಕಿತ್ತೂರು ಪಿಎಸ್‍ಐ ಪ್ರವೀಣ ಗಂಗೋಳ, ಇನ್ನೂಳಿದ ನಿಪ್ಪಾಣಿ-ಕಿತ್ತೂರು ಪೋಲಿಸ್ ಠಾಣೆಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.