ಹಾನಗಲ್ಲು ತಂಡದಿಂದ ಭರ್ಜರಿ ಪ್ರಚಾರ
(ಸಂಜೆವಾಣಿ ವಾರ್ತೆ)
ಬಳ್ಳಾರಿ: ಬರುವ ಭಾನುವಾರ ನಡೆಯಲಿರುವ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಸಮಿತಿಗೆ ನಡೆಯುವ ಚುನಾವಣೆಗೆ  ಇಂದು ಕಮ್ಮಡಚೇಡುವಮೊದಲಾದ  ಗ್ರಾಮದಲ್ಲಿ  ಹಾನಗಲ್ಲು ಕುಮಾರೇಶ್ವರ ವಚನ ವೃಂದದಿಂದ  ಸಂಚರಿಸಿ ಮತಯಾಚನೆ ಮಾಡಲಾಯ್ತು.
ತಂಡದ ನಾಯಕ ಚಾನಾಳ್  ಶೇಖರ್ ನೇತೃತ್ವದಲ್ಲಿ, ಕಾರ್ಯಕಾರಿ ಸಮಿತಿಗೆ ಸ್ಪರ್ಧಿಸಿರುವ ಗಂಗಾವತಿ ವೀರೇಶ್, ಹಲಕುಂದಿ ಮಲ್ಲಿಕಾರ್ಜುನಗೌಡ ಮೊದಲಾದವರು ತಮ್ಮ ತಂಡಕ್ಕೆ ಮತ ನೀಡುವಂತೆ ಮನವಿ ಮಾಡಿ. ಕಳೆದ ಬಾರಿ ತಮ್ಮ ತಂಡ ಸಮುದಾಯದ ಅಭಿವೃದ್ಧಿಗೆ ಕೈಗೊಂಡ ಕಾರ್ಯಗಳನ್ನು ತಿಳಿಸಿ. ಆಗಬೇಕಾಗಿರುವ ಕಾರ್ಯಗಳಿಗಾಗಿ ತಮ್ಮನ್ನು ಬೆಂಬಲಿಸುವಂತೆ ಕೋರಿತು. ಮತದಾರರಿಂದ ಉತ್ತಮ‌ಸ್ಪಂದನೆ ದೊರೆಯಿತು.
One attachment • Scanned by Gmail