ನಾಡಿದ್ದು ಸಂಡೂರಿಗೆ ಬಿ.ವೈ.ವಿಜಯೇಂದ್ರ
(ಸಂಜೆವಾಣಿ ವಾರ್ತೆ)
ಬಳ್ಳಾರಿ : ಜಿಲ್ಲೆಯಸಂಡೂರು ಬಳಿಯ  ವಂಡರ್ ವ್ಯಾಲಿ ರೆಸಾರ್ಟ್ ನಲ್ಲಿ ನಾಡಿದ್ದು ಜು.20 ರ  ಬೆಳಿಗ್ಗೆ 10 ಕ್ಕೆ ನಡೆಯುವ ಜಿಲ್ಲಾ  ವಿಶೇಷ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಗಮಿಸಲಿದ್ದಾರೆ. 
ಅವರಲ್ಲದೆ  *ಬಿಜೆಪಿಯ ರಾಜ್ಯ ಹಿರಿಯ ನಾಯಕರು*  ಭಾಗವಹಿಸಲಿದ್ದು, ಬಳ್ಳಾರಿ ಜಿಲ್ಲೆಯ ಕಾರ್ಯಕರ್ತರ ಸಂಘಟನಾ ಶಕ್ತಿ  ಹೆಚ್ಚಿಸಲು ಮಾರ್ಗದರ್ಶನ  ನೀಡಲಿದ್ದಾರಂತೆ. ಜೊತೆಗೆ ಸಂಡೂರು ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿ ಬಗ್ಗೆ ಸಹ ಚರ್ಚೆ ನಡೆಯಲಿದೆಂದು ಹೇಳಲಾಗಿದೆ.