ಸಿದ್ದಗಂಗಾ ಶ್ರೀಗಳ ತಂಡದಿಂದ ನಗರದಲ್ಲಿ ಬಿರುಸಿನ ಪ್ರಚಾರ
x
(ಸಂಜೆವಾಣಿ ವಾರ್ತೆ)
ಬಳ್ಳಾರಿ ಜು 18 : ನಗರದಲ್ಲಿಂದು
ಅಖಿಲ ಭಾರತ ವೀರಶೈವ ಮಹಾಸಭಾದ  ಚುನಾವಣೆ ಹಿನ್ನೆಲೆಯಲ್ಲಿ  ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ತಂಡ ಪಂಚಾಕ್ಷರಪ್ಪ ಬಿಚ್ಚಗಲ್ ಅವರ ನೇತೃತ್ವದಲ್ಲಿ ನಗರದ ಹಲವಡೆ ಮತ್ತು ಪ್ರಮುಖರ ಮನೆಗಳಿಗೆ ತೆರಳಿ ಮತಯಾಚನೆ ಮಾಡಿತು.
ಇದೇ ಭಾನುವಾರ ಚುನಾವಣೆ ನಡೆಯಲಿದ್ದು ಮತಯಾಚನೆ ಕಾರ್ಯ ಬಿರುಸಿನಿಂದ ಸಾಗಿದೆ.
 ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹಾಗೂ ಎಲ್ಲಾ ಕಾರ್ಯಕಾರಿ ಸಮಿತಿ ಸ್ಥಾನದ ಅಭ್ಯರ್ಥಿಗಳು  ಬಸವೇಶ್ವರನಗರ, ಗಾಂಧಿನಗರ, ನೆಹರು ಕಾಲೋನಿ, ಮುಂತಾದ ಕಡೆಸಂಚರಿಸಿ ತಮಗೆ ಮತ ನೀಡುವಂತೆ ಮನವಿ ಮಾಡಿದರು.
 ಪ್ರಮುಖ ವೀರಶೈವ ಮುಖಂಡರುಳಾದ  ಅಲ್ಲಂ ವೀರಭದ್ರಪ್ಪ, ಬಿ. ವಿ. ಬಸವರಾಜ್  ,  ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗ, ಆರ್‌ಎಚ್ ಎಂ ಚನ್ನಬಸಯ್ಯಸ್ವಾಮಿ, ಮಹಾನಗರ ಪಾಲಿಕೆ ಮಾಜಿ  ಸದಸ್ಯಮಲ್ಲನಗೌಡ, ಕಿರಣ್ ಸ್ವಾಮಿ, ಮಹೇಶ್  ಸ್ವಾಮಿ, ಮಂಜುನಾಥ ಸ್ವಾಮಿ ಮೊದಲಾದವರನ್ನು ಭೇಟಿ  ಮಾಡಿ ತಂಡಕ್ಕೆ ಬೆಂಬಲಿಸಿ ಇನ್ನು ಹೆಚ್ಚಿನ ಮಟ್ಟಿಗೆ ನಮ್ಮ ವೀರಶೈವ ಸಮಾಜದ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಮನವಿ ಮಾಡಿ
ಧೇಯೋದ್ದೇಶಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ, ಬಾಣಾಪುರ್ ನಾಗರಾಜ್ ಗೌಡ, ಜೆ. ವಿ. ಮಂಜುನಾಥ, ಸಿರಿಗೇರಿ ನಾಗರಾಜ ಸ್ವಾಮಿ, ಮದಿರೆ ಕುಮಾರಸ್ವಾಮಿ, ದಾಸಪುರ ಅರುಣ್ ಕುಮಾರ್ , ಶಂಕರಮೂರ್ತಿ, ಕಮ್ಮರಚೇಡು ಮಂಜುನಾಥ, ಶ್ರೀಧರಗಡ್ಡೆ ನಿರಂಜನ, ಕಟ್ಟೆ ಬಸವ, ಜೋಳದ ರಾಶಿ ಲೋಕೇಶ್ ರೆಡ್ಡಿ , ಪ್ರಭುಶೇಕರ ಗೌಡ,  ಹಲಕುಂದಿ ವೀರನಗೌಡ, ಶ್ರೀಧರ್ ಗೌಡ,  ಮೆಡಿಕಲ್ ಸ್ಟೋರ್ ಪ್ರಕಾಶ್, ಶರಣಯ್ಯ ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು,