ವಕೀಲರ ಸಂಘದ ಚುನಾವಣೆ ಪ್ರಕ್ರಿಯೆ ಆರಂಭ ಅಭ್ಯರ್ಥಿಗಳ ಹುಡುಕಾಟ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಇಲ್ಲಿನ ಬಳ್ಳಾರಿ ವಕೀಲರ ಸಂಘಕ್ಕೆ ಬರುವ ಅ.2 ರಂದು ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯತ್ವದ ಚುನಾವಣೆ ಪ್ರಕ್ರಿಯೆ  ಆರಂಭಗೊಂಡಿದೆ.
ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ,  ಜಂಟಿ ಕಾರ್ಯದರ್ಶಿ (ಮಹಿಳೆಗೆ), ಖಜಾಂಚಿ ಹಾಗು 12 ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನಗಳು ಇದರಲ್ಲಿ ಎರೆಡು ಮಹಿಳೆಯರಿಗೆ ಮೀಸಲು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಇಂದು ನಾಮಪತ್ರ ಸಲ್ಲಿಸುವ ಕಾರ್ಯ ಆರಂಭಗೊಂಡಿದ್ದು ಜು. 20 ರ ವರೆಗೆ ನಾಮಪತ್ರಗಳನ್ನು   ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ವರೆಗೆ ಸಲ್ಲಿಸಬಹುದ ಪ್ರಥಮ ದಿನವಾದ ಇಂದು ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಬಹುತೇಕ ನಾಡಿದ್ದು ಸಲ್ಕಿಸುವ ಸಾಧ್ಯತೆ ಇದೆ ಎಂದು  ಚುನಾವಣಾ ಅಧಿಕಾರಿಯಾಗಿರುವ   ವೆಂಕಟೆರಶ್ವರ ರೆಡ್ಡಿ ಅವರು ಹೇಳಿದ್ದಾರೆ.
 ಜ.21 ರಂದು ನಾಮಪತ್ರಗಳ ಪರಿಶೀಲನೆ, ಜು.22 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯದಿನವಾಗಿದೆ. ಅಗತ್ಯ ಬಿದ್ದರೆ ಅ.2 ರಂದು ಮತದಾನ ಬೆಳಿಗ್ಗೆ 9 ರಿಂದ ಸಂಜೆ 5 ರ ವರೆಗೆ ನಡೆಯಲಿದೆ. ಮರುದಿನ‌ ಅ.3 ರಂದು ಮತಗಳ ಎಣಿಕೆ ನಡೆಯಲಿದೆ.
ಸ್ಪರ್ಧೆಗೆ ನಿರಾಸಕ್ತಿ:
ಹಿರಿಯ ವಕೀಲರಲ್ಲಿ ಸ್ಪರ್ಧೆಗೆ ಆಸಕ್ತಿ ಕಂಡು ಬರದೆ. ಯುವಕರು ಗುಂಪುಗಳಾಗಿ ಚರ್ಚೆ ಮಾಡುತ್ತಿದ್ದಾರೆ. ಹಾಲಿ ಅಧ್ಯಕ್ಷ ಎರ್ರೆಗೌಡ ಅವರು ಸ್ಪರ್ಧಿಸುವ ಸಾಧ್ಯತೆ ಕಡಿಮೆ ಇದೆ. ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇತ್ರು. ಅದು ಆಗಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಗುಂಪಿನಿಂದ ಈಗ ರಾಮಬ್ರಹ್ಮಂ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮತ್ತೊಂದು ಗುಂಪಿನಿಂದ ಗೋಟೂರು ರಾಜಶೇಖರ ರೆಡ್ಡಿ, ಹಾಲಿ ಕಾರ್ಯದರ್ಶಿ ಬಣಾಪುರ ರಂವೀಂದ್ರನಾಥ ಇಲ್ಲವೇ ಎಲ್. ಟಿ.ಶೇಕಜರ ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆಗಳು ಶುರು ಆಗಿದೆ. ಬಹುತೇಖ ನಾಳೆ ರಾತ್ರಿ ಅಂತಿಮಗೊಳ್ಳುವ ಸಾಧ್ಯತೆ ಇದೆ.
ಚುನಾವಣೆ ಘೋಷಣೆ ಆಗಿರುವುದರಿಂದ ವಕೀಲರು ಸ್ಪರ್ಧೆಗಾಗಿ  ತಂಡಗಳ ರಚನೆಗೆ ಕಾರ್ಯಪ್ರವೃತ್ತರಾಗಿದ್ದಾರೆ.