ಜಾಲಿಹಾಳ್ ನಲ್ಲಿ ಮೊಹರಂ ಹಬ್ಬದ ಸಂಭ್ರಮಕ್ಕೆ ತೆರೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ತಾಲೂಕಿನ ಜಾಲಿಹಾಳ್ ಗ್ರಾಮದಲ್ಲಿ ಹತ್ತು ದಿನಗಳ ಮೊಹರಂ ಹಬ್ಬದ  ಸಂಭ್ರಮಕ್ಕೆ ನಿನ್ನೆ ತೆರೆ ಬಿದ್ದಿದೆ.
ತಾಲೂಕಿನ ಹಳ್ಳಿಗಳಲ್ಲಿಯೇ ವಿಶಿಷ್ಟವಾಗಿ ಇಲ್ಲಿ ಗ್ರಾಮದ ಜನರೆಲ್ಲ ವಿಶಿಷ್ಟವಾಗಿ ಆಚರಣೆ ಮಾಡುತ್ತಾರೆ. ಹಬ್ಬದ ಹತ್ತು ದಿನಗಳ ಕಾಲ ಚಪ್ಪಲಿ ಧರಿಸದೆ, ಮಧ್ಯ,ಮಾಂಸ ಸೇವನೆ ಮಾಡದೆ ಪೀರಲ ದೇವರ ಪೂಜೆ, ಸವಾರಿ ಮಾಡುತ್ತಾರೆ.
ಇಲ್ಲಿನ ಪೀರಲ ದೇವರುಗಳ ದ ವಿಶೇಷ ಅಲಂಕಾರ ಗಮನ ಸೆಳೆಯುತ್ತದೆ.  ನಿನ್ನೆಯ ದಿನ ಊರು ಸವಾರಿ ಮಾಡಿದ ದೇವರಗಳು ಸರ್ವ ಸಮುದಾಯದ ಭಕ್ತಿಯೊಂದಿಗೆ  ಅಂತ್ಯಕಂಡಿದ್ದಾರೆ‌
One attachment • Scanned by Gmail