ವ್ಯಾಪಾರಿ  ಎರ್ರಂಗಳಿ ತಿಮ್ಮಾರೆಡ್ಡಿ ಅತ್ಯಹತ್ಯೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ ಎರ್ರಂಗಳಿ ಗ್ರಾಮದ ವ್ಯಾಪಾರಿ ಪುಟ್ಟ ತಿಮ್ಮಾರೆಡ್ಡಿ ನಗರದ ಹೊಸ ಬಸ್ ನಿಲ್ದಾಣದ ಬಳಿ ಇರುವ ದ್ವಾರಕ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೊನ್ನೆ ರಾತ್ರಿ ನಡೆದಿದೆ.
ಬಳ್ಳಾರಿ ಮತ್ತು ಎರ್ರಂಗಳಿಯಲ್ಲಿ   ಬಾಲಾಜಿ ಆಗ್ರಿ  ಎಜೆನ್ಸಿ ಎಂಬ  ಕ್ರಿಮಿನಾಶಕ, ರಸಗೊಬ್ಬರ ಮಾರಾಟದ ಅಂಗಡಿ ಹೊಂದಿದ್ದ ಇವರು ರೈತರಿಂದ ಮೆಣಸಿನಕಾಯಿ ಖರೀದಿ ಮಾಡುವ ವ್ಯಾಪಾರವನ್ನು ಸಹ ಮಾಡುತ್ತಿದ್ದರು‌.
ಹೆಚ್ಚಿನ ಧರದಲ್ಲಿ ಖರೀದಿ ಮಾಡಿ, ಕೋಲ್ಡ್ ಸ್ಟೋರೇಜ್ ನಲ್ಲಿಟ್ಟಿದ್ದರು. ಅವಗಳ ಮೇಲೂ ಸಾಲ ಪಡೆದಿದ್ದರಂತೆ. ಮೆಣಸಿನಕಾಯಿ ಬೆಲೆ ಕುಸಿದಿದ್ದು ಒಂದು ಕಡೆ, ಕ್ರಿಮಿನಾಶಕ ಪಡೆದ ರೈತರು ಸಹ ಮರು ಪಾವತಿ ಮಾಡಿರುವುದರಿಂದ. ಮೆಣಸಿನಕಾಯಿ ಪಡೆದವರಿಗೆ ಹಣ ಪಾವತಿ ಮಾಡಲಾಗದೆ. ಸಾಲಗಾರರ ಕಾಟ ಹೆಚ್ಚಾಗಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ.