ಪಂಡರಾಪುರ ವಿಷ್ಣುವಿನ ಆರಾಧನಾ ಕೇಂದ್ರವಾಗಿದೆ-ವೇ.ಜೋಶಿ
ತಾಳಿಕೋಟೆ, ಆಷಾಡ ಏಕಾದಶಿಯನ್ನು ಮಹಾ ಏಕಾದಶಿ ಶಯನಿ ಏಕಾದಶಿ ಎಂದು ಕರೆಯಲಾಗುತ್ತದೆ ಆಷಾಡ ಶುಕ್ಲಪಕ್ಷದ 11ನೇ ದಿನ ಏಕಾದಶಿ ಬರುತ್ತಿದ್ದು ಈ ಏಕಾದಶಿಯು ವಿಷ್ಣುವಿನ ಭಕ್ತರಿಗೆ ಮಹತ್ವದ್ದಾಗಿದೆ ಈ ದಿನದಂದು ವಿಷ್ಣು ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸಲಾಗುತ್ತದೆ ಎಂದು ಸ್ಥಳೀಯ ಜ್ಯೋತಿಷ್ಯ ಶಾಸ್ತ್ರ ಪರಿಣಿತರಾದ ವೇ.ವಸಂತ ಜೋಶಿ ಅವರು ನುಡಿದರು.
ಬುಧವಾರರಂದು ಸ್ಥಳೀಯ ಶ್ರೀ ವಿಠ್ಠಲ ರುಕುಮಾಯಿ ಮಂದಿರದಲ್ಲಿ ಶ್ರೀ ಪಾಂಡುರಂಗ ವಿಠ್ಠಲ ಟ್ರಸ್ಟ ಕಮಿಟಿಯವರ ವತಿಯಿಂದ ಏರ್ಪಡಿಸಲಾದ ಆಷಾಡ ಏಕಾದಶಿ ಮಹಾ ಪೂಜಾ ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯವರೊಂದಿಗೆ ಪಾಲ್ಗೊಂಡು ಪಾಂಡುರಂಗ ವಿಠ್ಠಲ ಅವರ ಭಕ್ತಿಯ ಹಾಡುಗಳನ್ನು ಹಾಡಿ ಮಾತನಾಡಿದ ಅವರು ಆಷಾಡ ಏಕಾದಶಿಯ ದಿನದಂದು ಶ್ರೀ ವಿಠ್ಠಲ ರುಕುಮಾಯಿಗೆ ಭಕ್ತಾಧಿಗಳು ಮಹಾ ಪೂಜೆ ಸಲ್ಲಿಸಿ ಉಪವಾಸ ವೃತ ಆಚರಣೆ ಮಾಡುತ್ತಾರೆ ಮುಂದಿನ 4 ತಿಂಗಳು ಚಾತುರ್‍ಮಾಸದಲ್ಲಿ ಆಚರಿಸಬೇಕಾದ ವೃತಗಳನ್ನು ಇಟ್ಟುಕೊಂಡು ತಮ್ಮ ಬೇಕು ಬೇಡಿಕೆಗಳನ್ನು ಇಡೇರಿಸಿಕೊಳ್ಳುತ್ತಾರೆಂದ ಅವರು ಯಾವುದಾರೂ ಆಹಾರ ತೆಜಿಸುವ ಬಗ್ಗೆ ಹಾಗೂ ಪ್ರತಿ ಏಕಾದಶಿ ಆಚರಣೆಯ ನಿರ್ಧಾರ ಕೈಗೊಳ್ಳುತ್ತಾರೆಂದರು.
ಇನ್ನೋರ್ವ ವೇ.ಶ್ರೀಧರ ಗ್ರಾಂ ಪೊರೊಹಿತ ಅವರು ಮಾತನಾಡಿ ಈ ಆಷಾಡ ಏಕಾದಶಿ ದಿನದಂದು ಪಂಡರಪುರಕ್ಕೆ ಹೆಚ್ಚಿನ ಭಕ್ತರು ಬೆಟ್ಟಿ ನೀಡಿ ಶ್ರೀ ವಿಠ್ಠಲ ರುಕುಮಾಯಿ ದೇವರ ದರ್ಶನ ಪಡೆದುಕೊಳ್ಳುತ್ತಾರೆ ಅವರ ಅನುಕೂಲಕ್ಕೆ ವಿಶೇಷವಾಗಿ ಭಾರತೀಯ ರೈಲ್ವೆ ಇಲಾಖೆ ರೈಲನ್ನು ಓಡಿಸುತ್ತದೆ ಈ ಸಂದರ್ಬದಲ್ಲಿ ಭಕ್ತರು ಪಂಡರಾಪುರಕ್ಕೆ ಹೋಗಲು ಯಾತ್ರೆ ಕೈಗೊಳ್ಳುತ್ತಾರೆ ಕಾರಣ ಪಂಡರಾಪುರವು ವಿಷ್ಣುವಿನ ಆರಾಧನಾ ಕೇಂದ್ರವಾಗಿದೆ ಎಂದರು.
ಇನ್ನೋರ್ವ ಸ್ಥಳೀಯ ಶ್ರೀ ಪಾಂಡು ರಂಗ ವಿಠ್ಠಲ ಟ್ರಸ್ಟ ಅಧ್ಯಕ್ಷರಾದ ಸಂಭಾಜಿ ವಾಡಕರ ಅವರು ಮಾತನಾಡಿ ಪ್ರತಿವರ್ಷದಂತೆ ಶ್ರೀ ವಿಠ್ಠಲ ರುಕುಮಾಯಿ ಮಂದಿರದಲ್ಲಿ ಈ ಹಿಂದಿನಿಂದಲೂ ಆಷಾಡ ಏಕಾದಶಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಮಹತ್ವದ ಸ್ಥಾನಮಾನ ಹೊಂದಿದ ಈ ಮಂದಿರ ಜೀರ್ಣೋದ್ದಾರ ಕಾರ್ಯ ಈ ಹಿಂದಿನ ಟ್ರಸ್ಟ ಅಧ್ಯಕ್ಷರಾದ ದಿ.ವಿಠ್ಠಲಸಿಂಗ್ ಹಜೇರಿ ಅವರ ನೇತೃತ್ವದಲ್ಲಿ ಪೂರ್ಣಗೊಂಡಿದೆ ಅವರು ವಿಠ್ಠಲ ರುಕುಮಾಯಿ ಅವರ ಮೇಲಿಟ್ಟ ಶ್ರದ್ದಾ ಭಕ್ತಿಯೇ ತಾಳಿಕೋಟೆಯಲ್ಲಿಯ ಶ್ರೀ ವಿಠ್ಠಲ ಮಂದಿರವು ಉನ್ನತ ಸ್ಥಾನಮಾನಕ್ಕೇರಿದಂತಾಗಿದೆ ಎಂದರು.
ಈ ಮಹಾ ಪೂಜೆ ಹಾಗೂ ಭಜನಾ ಕಾರ್ಯಕ್ರಮದಲ್ಲಿ ಶ್ರೀ ಪಾಂಡುರಂಗ ವಿಠÀ್ಠಲ ಟ್ರಸ್ಟಿನ ಉಪಾಧ್ಯಕ್ಷರಾದ ನಾಗನಾಥ ದೇಶಪಾಂಡೆ, ಕಾರ್ಯದರ್ಶಿ ಅಮರಸಿಂಗ್ ಹಜೇರಿ(ಬಾಬು), ಖಜಾಂಚಿ ವಾಸುದೇವ ಹೆಬಸೂರ, ಶಾಮ ಹಂಚಾಟೆ, ಮದುಕರ ಉಭಾಳೆ ಉಪಸ್ಥಿತರಿದ್ದರು.
ವೇ.ಪ್ರತಿಕಬಟ್ ಆಚಾರ್ಯರು ಮಹಾ ಪೂಜಾ ಕಾರ್ಯಕ್ರಮವನ್ನು ನೇರವೇರಿಸಿದರು.
ಭಜನಾ ಕಾರ್ಯಕ್ರಮದಲ್ಲಿ ಆನಂದ ಕುಲಕರ್ಣಿ, ಸಚೀನ ಗ್ರಾಂಪೊರೊಹಿತ, ಅನ್ನಪೂರ್ಣಾ ಭಜನಾ ಮಂಡಳಿ, ಗಾಯಿತ್ರಿ ಭಜನಾ ಮಂಡಳಿ ಹಾಗೂ ಶ್ರೀ ಲಕ್ಷ್ಮೀದೇವಿ ಭಜನಾ ಮಂಡಳಿ ಅವರು ಪಾಲ್ಗೊಂಡು ವಿವಿಧ ಶ್ರದ್ದಾಭಕ್ತಿಯ ಹಾಡುಗಳನ್ನು ಹಾಡಿ ಭಕ್ತಿ ಸಮರ್ಪಿಸಿದರು.