ಜು.22ರಂದು ಬೀದಿಬದಿ ವ್ಯಾಪಾರಿಗಳ ಬೃಹತ ರ್ಯಾಲಿ, ಪಾಲಿಕೆಗೆ ಮುತ್ತಿಗೆ: ಸೂರ್ಯವಂಶಿ
ಕಲಬುರಗಿ, ಜು.18- ಮಹಾನಗರದ ಬೀದಿ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರನ್ನು ಈಗಾಗಲೇ ಪಾಲಿಕೆಯಿಂದ ನೀಡಿಲಾದ ಗೂಡಂಗಡಿ ಸ್ಥಳದಲ್ಲಿಯೇ ವ್ಯಾಪಾರ ಮಾಡಲು ಹಾಗೂ 2014, 2019 ಕಾಯ್ದೆಯನ್ವಯ ಬೀದಿಬದಿ ವ್ಯಾಪಾರಿಗಳ ಅಂಗಡಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಆಗ್ರಹಿಸಿ ಜು.22ರಂದು ಬೃಹತ ರ್ಯಾಲಿಯ ಮೂಲಕ ತೆರಳಿ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದು
ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂತಿ ಮತ್ತು ಮುಖಂಡರಾದ ಮಂಜುನಾಥ ನಾಲವಾರಕರ್ ಅವರು ಹೇಳಿದರು.
ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು,
ಡೇ-ನಲ್ಕ್ ಯೋಜನೆ ಆಯುಕ್ತಾಲಯ ಉದ್ಯಮಶೀಲತೆ ಮತ್ತು ಜೀವನೋಪಾಯ ಅಭಿಯಾನ ನಿರ್ದೇಶಕರು ದಿನಾಂಕ: 08.01.2019ರಂದು ದೀನದಯಾಳ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ನಗರದ ಬೀದಿ ವ್ಯಾಪಾರಸ್ಥರ ಬೆಂಬಲ ಉಪಘಟಕದಡಿ ಬೀದಿಬದಿ ವ್ಯಾಪಾರಸ್ಥರ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನವನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಕಲಬುರಗಿ ಮಹಾನಗರ ಪಾಲಿಕ ವ್ಯಾಪ್ತಿಯಲ್ಲಿನ ಎಲ್ಲ ಬೀದಿ ವ್ಯಾಪಾರಿಗಳಿಗೆ ಪರವಾನಿಗೆ ನೀಡಬೇಕು ಮತ್ತು ಬೀದಿ ವ್ಯಾಪಾರಿಗಳ ಅಭಿವರದಿಗಾಗಿ ಮಿಸಲಿಟ್ಟ 50 ಲಕ್ಷ ರೂ.ಗಳ ಅನುದಾನವನ್ನು ಬಳಕೆ ಮಾಡಬೇಕು.
ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಿಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಾರ್ಯಲಯದ ಜಿಲ್ಲಾ ನಗರಾಭಿವೃದ್ಧಿ ಕೋಶ, ಕಲಬುರಗಿ ವತಿಯಿಂದ ಕೂಡ ಸೂಕ್ತವಾದ ನಿರ್ದೇಶನ ಬಂದಿದ್ದರೂ ಕೂಡ ಯಾವುದೇ ರೀತಿಯ ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲಗಳನ್ನು ಮಾಡಿಕೊತಿಡುವಲ್ಲಿ ಮಹಾನಗರ ಪಾಲಿಕೆ ಮತ್ತು ಪೆÇಲೀಸ್ ಆಯುಕ್ತರು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಅವರು ಆರೋಪಿಸಿದರು.
ಕಲಬುರಗಿ ಸುಪರ ಮಾರ್ಕೇಟ ಚೌಪಟ್ಟಿ, ಹಳೇ ಜೈಲ್‍ದಲ್ಲಿ ಈಗಾಗಲೇ 250 ಜನರ ಬೀದಿ ವ್ಯಾಪಾರಿಗಳಿಗೆ ಸ್ಥಳಗಳನ್ನು ನಿಗಧಿಪಡಿಸಿದು ಆದರೆ, ಈ ಸ್ಥಳದಲ್ಲಿ ಯಾವುದೇ ರೀತಿ ಮೂಲಭೂತ ಸೌಕರ್ಯ ವ್ಯವಸ್ಥೆ ಇರದ ಕಾರಣ ಅಲ್ಲಿ ಬೀದಿ ವ್ಯಾಪಾರಿಗಳು ತಮ್ಮ ವ್ಯಾಪಾರ ಪ್ರಾರಂಭ ಮಾಡುತ್ತಿಲ್ಲ. ಅಲ್ಲದೆ, ಕಲಬುರಗಿ ನಗರದ ಕಣ್ಣಿ ಮಾರ್ಕೇಟ್, ಕೆ.ಎಂ.ಎಫ್, ಡೈರಿ, ರಾಮಮಂದಿರ, ಶಹಾಬಜಾರ, ಖರ್ಗೆ ಬಂಕ್, ಈ ಪ್ರದೇಶಗಳಲ್ಲಿನ ಮಂದಿರ ಈ ಪ್ರದೇಶದಲ್ಲಿ ರಸ್ತೆ ಮದ್ಯದಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರನ್ನು ಪ್ರತ್ಯೇಕವಾಗಿ ಸ್ಥಳಗಳನ್ನು ನಿಗಧಿಪಡಿಸಿ, ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಬೇಕು.
ಪೆÇಲೀಸ್ ಆಯುಕ್ತರು ಮತ್ತು ಮಹಾನಗರ ಪಾಲಿಕೆ ಆಯುಕ್ತರು, ಸಂಬಂಧಪಟ್ಟ ಅಧಿಕಾರಿಗಳು ಈ ಪ್ರದೇಶದಲ್ಲಿ ಭೇಟಿ ಕೊಟ್ಟು ರಸ್ತೆ ಮೇಲೆ ಕುಳಿತಿರುವ ವ್ಯಾಪಾರಸ್ಥರನ್ನು ಸುಪರ ಮಾರ್ಕೇಟ ಚೌಪಟ್ಟಿ, ಹಳೇ ಜೈಲ್‍ನಲ್ಲಿ ಈಗಾಗಲೇ ಪಾಲಿಕೆಯಿಂದ ಗುರುತಿಸಲಾಗಿರುವ ನಿಗದಿತ ಈ ಸ್ಥಳದಲ್ಲಿ ವ್ಯಾಪಾರಾ ಪ್ರಾರಂಭ ಮಾಡುವಂತೆ ಕ್ರಮಕೈಗೊಳ್ಳಬೇಕು.
ದಸರಾ, ದೀಪಾವಳಿ, ಗಣೇಶ ಚತುರ್ತಿ, ರಮಜಾನ್ ಇತರ ಧಾರ್ಮಿಕ ಹಬ್ಬಗಳಲ್ಲಿ ಮಹಿಳೆಯರು ಪೂಜಾ ಸಾಮಾನುಗಳು ಆಗಿರಬಹುದು, ಅಥವಾ ಯಾವುದೇ ವಸ್ತು ಖರೀದಿ ಮಾಡಲು ಆಗಮಿಸಿದಾಗ ಆಗುತ್ತಿರುವ ಕಳ್ಳತನ, ಮೋಬೈಲ್ ಮತ್ತು ಹಣದ ಕಳ್ಳತನ, ಸೇರಿದಂತೆ ವಂಚನೆಗಳನ್ನು ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬೇಕು.
ಈ ಎಲ್ಲ ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಇದೇ ದಿನಾಂಕ: 22-07-2024 ಸೋಮವಾರ ಬೆಳಿಗ್ಗೆ 11:30 ಗಂಟೆಗೆ ಕಲಬುರಗಿ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಕನ್ನಡ ಪರ ಸಂಘಟನೆಯ ಹೋರಾಟಗಾರರು ಮತ್ತು ನಗರದ ಚಪ್ಪಲ ಬಜಾರ, ಸರಾಫ್ ಬಜಾರ, ಕಿರಾಣ ಬಜಾರ, ಕಪಡಾ ಬಜಾರ, ದತ್ತ ಮಂದಿರ ಜನತಾ ಬಜಾರ, ಸಿಟಿ ಬಸ್ ಸ್ಟ್ಯಾಂಡ್ ರಸ್ತೆಗಳ ಮತ್ತು ಪುಟ್-ಪಾಥ ಬಿದಿ ವ್ಯಾಪಾರಿಗಳು ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮÁಡಿದರು.
ಸುದ್ದಿಗೋಷ್ಠಿಯಲ್ಲಿ ಚಂದ್ರಾಹಾಸ ಜಿತ್ರೆ ಅಶೋಕರೆಡ್ಡಿ, ಲಿಂಗರಾಜ ಕಡೆ ಮತ್ತು ಕನ್ನಡಪರ ಹೋರಾಟಗಾರರಾದ ಸಚೀನ್ ಫರಹತಾಬಾದ, ದತ್ತು ಭಾಸಗಿ, ಮಂಜುನಾಥ ನಾಲವಾರಕ, ವಿಎಚ್ ವಾಲಿಕಾರ, ವೆಂಕಟೇಶ ಕಾಂಬಳೆ, ಬಾಬು ಪರೀಟ ಸೇರಿದಂತೆ ಹಲವರಿದ್ದರು.