ಹೋಟೆಲ್, ಡಾಬಾಗಳಲ್ಲಿ ರಾಜರೋಷವಾಗಿ ಮದ್ಯ ಮಾರಾಟ: ಕ್ರಮ ವಹಿಸುವಂತೆ ನಿಜಗುಣರಾಜು ಜಿಲ್ಲಾಧಿಕಾರಿಗೆ ಮನವಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.18- ಜಿಲ್ಲೆಯ ವ್ಯಾಪ್ತಿಯಲ್ಲಿ ಸಿಎಲ್ -7 ಲೈಸನ್ಸ್ ಇಟ್ಟುಕೊಂಡು ಹೋಟೆಲ್ ಹಾಗು ಡಾಬಾಗಳಲ್ಲಿ ರಾಜರೋಷವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಇಂಥ ಹೋಟೆಲ್ ಹಾಗು ಡಾಬಾಗಳ ಮೇಲೆ ದಾಳಿ ಮಾಡಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು ಹಾಗು ಬಿಜೆಪಿ ಮುಖಂಡರು ಜಿಲ್ಲಾಧಿಕಾರಿ ಹಾಗೂ ಅಬಕಾರಿ ಉಪ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಅಕ್ರಮ ಮದ್ಯಮಾರಾಟದ ಬಗ್ಗೆ ಸಾರ್ವಜನಿಕರು ದೂರುತ್ತಿದ್ದು, ಇದರ ವಿರುದ್ದ ನಿರ್ದಾಕ್ಷಣ್ಯ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಶಿಲ್ಪನಾಗ್ ಹಾಗೂ ಅಬಕಾರಿ ಇಲಾಖೆಯ ಉಪ ಆಯುಕ್ತ ನಾಗಶಯನ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮದ್ಯ ಅಕ್ರಮ ಮಾರಾಟ, ಇತರೇ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಚಾಮರಾಜನಗರದಲ್ಲಿ ಇರುವ ಸಿಎಲ್- 7 ಸನ್ನದುಗಳಲ್ಲಿ ರಾಜರೋಷÀವಾಗಿ ಪಾರ್ಸಲ್ ಮದ್ಯ ಮಾರಾಟ ನಡೆಯುತ್ತಿದೆ, ಸರ್ಕಾರಕ್ಕೆ ತೆರಿಗೆಯನ್ನು ವಂಚನೆ ಮಾಡಲಾಗುತ್ತಿದೆ. ಇದರ ವಿರುದ್ದ ಕ್ರಮವಾಗಬೇಕು ಎಂದು ಒತ್ತಾಯಿಸಿದರು.
ನಗರದ ಹೊರ ವಲಯದಲ್ಲಿರುವ ಮಕವ್ ಡಾಬಾ, ಅಮೂಲ್ಯ ಡಾಬಾ, ಮಾಯ ಡಾಬಾ ಹಾಗೂ ಜಿಲ್ಲೆಯಾದ್ಯಂತ ಕಮಾತ್ ವಿಲೇಜ್ ರೆಸಾರ್ಟ್, ಇನ್ನಿತರ ಡಾಬಾ ಮತ್ತು ಕ್ಲಬ್‍ಗಳಲ್ಲಿ ಯಾವುದೇ ಸನ್ನದನ್ನು ಪಡೆಯದೆ ದಿನನಿತ್ಯ ರಾಜರೋಷÀವಾಗಿ ಮದ್ಯ ಸರಬರಾಜು ಮಾಡುತ್ತಿದ್ದಾರೆ. ಈ ಬಗ್ಗೆ ನನ್ನ ಬಳಿ ವಿಡಿಯೋ ಚಿತ್ರಿಕರಣವಿದ್ದು, ಅಗತ್ಯ ಬಿದ್ದರೆ ನಾವು ನೀಡಲು ಸಿದ್ದರಿದ್ದೇವೆ. ಜಿಲ್ಲೆಯಸಿಎಲ್- 7 ಸನ್ನದುಗಳು ಎಷ್ಠಿವೆ ಅವುಗಳಲ್ಲಿ ಇರುವ ಕೊಠಡಿಗಳು ಎಷ್ಟು ಅವರ ವರ್ಷ ವಹಿವಾಟು ಎಷ್ಟು ಎಂಬುದನ್ನು ತನಿಖೆ ನಡೆಸಿದರೆ ಸತ್ಯ ಅಸತ್ಯತೆ ಹಾಗೂ ಇಲಾಖೆಯ ಪಾರದರ್ಶಕತೆ ಬಯಲಿಗೆ ಬರುತ್ತದೆ ಎಂದು ದೂರಿದರು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಸಿಎಲ್- 2 ಸನ್ನದುಗಳಲ್ಲಿ ಮದ್ಯವನ್ನು ಚಿಲ್ಲರೆ ಮಾರಾಟ ಹಾಗೂ ಎಂಆರ್‍ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು, ಅ ಬ್ಯಾಚ್ ನಂಬರ್‍ಗಳ ಮದ್ಯವು ಡಾಬಾಗಳಲ್ಲಿ ಮಾರಾಟವಾಗುತ್ತಿದೆ, ಇದನ್ನು ತನಿಖೆ ನಡೆಸಿ ಕಾನೂನಾತ್ಮಕವಾಗಿ ಮಾರಾÀಟವಾಗುವಂತೆ ಮಾಡಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಮೂಡಹಳ್ಳಿ ಮೂರ್ತಿ, ಯುವ ಮೋರ್ಚಾ ಅಧ್ಯಕ್ಷ ಸೂರ್ಯ ಬಾಲರಾಜು, ಚಾಮುಲ್ ಮಾಜಿ ನಿರ್ದೇಶಕ ಕಿಲಗೆರೆ ಬಸವರಾಜು ಇದ್ದರು.