ಪೆÇಲೀಸರ ನಿರ್ಲಕ್ಷ್ಯಕ್ಕೆ ಅಸಮಧಾನ: ಅಫ್ಸರ್‍ಪಾಷ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಜು.18:- ಕಳೆದ ಮೂರು ತಿಂಗಳ ಹಿಂದೆ ನಮ್ಮ ಸಹವರ್ದಿ ಮದರಿ ಆಸ್ತಾನೆಯಲ್ಲಿ ಲಕ್ಷತಾಂತರ ನಗದು ಮತ್ತು ಚಿನ್ನ ದೊಚಿ ಪರಾರಿಯಾಗಿರುವು ಘಟನೆ ಜರುಗಿತು ಆದರೆ ಪೆÇಲೀಸರು ಪ್ರಕರಣ ಮಾತ್ರ ದಾಖಲಿಕೊಂಡಿದ್ದೆ ಆಷ್ಟೆ ಯಾವುದೆ ನನ್ನ ವಸ್ತುವಾಗಲಿ, ನಗದಾಗಲಿ ಪತ್ತೆ ಹಚ್ಚಾಲಿಲ್ಲ ಎಂದು ಮದರಿ ಆಸ್ತಾನೆ ಗುರುಗಳಾದ ಅಫ್ಸರ್ ಪಾಷ(ಮುನವಾರ್ ಷಾ)ಪೆÇಲೀಸರ ವಿರುದ್ದ ಅಸಮಾಧನ ವ್ಯಕ್ತ ಪಡಿಸಿದರು.
ಪಟ್ಟಣದ ಮುಸ್ಲಿಂ ಬಡಾವಣೆಯ ಸಹವರ್ದಿ ಮದರಿ ಆಸ್ತಾನೆಯಲ್ಲಿ ಮೊಹರಂ ಕಡೆದಿನದ ಅಂಗವಾಗಿ ಪಾನಕ ವಿತರಿಸಿ ಮಾತನಾಡಿದ ಅವರು ಮೇ 7 ಮಧ್ಯ ರಾತ್ರಿ ಮನೆಗೆ ನುಗ್ಗಿದ ಕಳ್ಳರು ತಮ್ಮ ಚಾಣಕ್ಷತೆಯಿಂದ ನಕಲಿ ಕೀಗಳ ಮೂಲಕ ಬೀಗ ತೆಗೆದು ಒಳಗೆ ನುಗ್ಗಿ ಬೀರುವಿನಲ್ಲಿದ್ದ 25ಲಕ್ಷ ರೂಗಳು ಮತ್ತು ಗುರುಗಳು ಹಾಗೂ ಪತ್ನಿಯ ಒಡವೆಗಳನ್ನ ಕಳ್ಳತನ ಮಾಡಿಕೊಂಡು ಹೋರಗೆ ಬಂದ ಕಳ್ಳ ಮತ್ತೊಬ್ಬನಿಗೆ ಕಳ್ಳತನ ಮಾಡಿದ್ದ ಬ್ಯಾಗನ್ನು ನೀಡಿ ಮತ್ತೆ ವಾಪಸ್ಸ್ ಬಂದು ಯತಾಸ್ಥಿತಿ ಬೀಗವನ್ನ ಲಾಕ್ ಮಾಡಿದ್ದಾರೆ ಸಂಭಂದಿಸಿದಂತೆ ಕಳ್ಳತನ ಮಾಡಿರುವುದು ಸಿಸಿಟಿವಿಯಲ್ಲಿ ದೃಷ್ಯಗಳು ಸೇರೆಯಾಗಿದೆ.
600ಗ್ರಾಂ ಚಿನ್ನ ಹಾಗೂ 25ಲಕ್ಷ ನಗದು ಹಣವನ್ನು ಕಳ್ಳರು ದೊಚಿ ಪರಾರಿಯಾಗಿ ಇದಕ್ಕೆ ಸಂಬಂದಿಸಿದಂತೆ 3 ತಿಂಗಳು ಕಳೆದರು ಪೆÇಲೀಸರಿಂದ ನನ್ನ ವಸ್ತುವಿನ ಪತ್ತೆ ಮಾಡಲಿಲ್ಲ ಹಾಗಾಗಿ ಪೆÇಲೀಸ್ ಇಲಾಖೆಯ ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ರಾಜ್ಯ ಉನ್ನತಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಬೇಸರ ವ್ಯಕ್ತ ಪಡಿಸಿದರು.
ನಾನು ಅನುಮಾನಸ್ಪದ ವ್ಯಕ್ತಿಗಳಾದ ಅಫ್ಜಲ್ ಮತ್ತು ಸಂತೋಷ್ ಎಂಬ ಇಬ್ಬರ ಮೇಲೆ ಅನುಮಾನವಿದೆ ಎಂದು ತಿಳಿಸಿದ್ದು ಕಳ್ಳರ ಬಗ್ಗೆ ಒಂದಿಷ್ಟು ಸುಳಿವು ನೀಡಿದ್ದು ಅವರನ್ನು ಸಹ ಪೆÇಲೀಸರು ಪತ್ತೆ ಹಚ್ಚಿ ಪ್ರಕರಣವನ್ನು ದಾಖಲಿದ್ದು ನಂತರ ಜೈಲಿನಿಂದ ಬಿಡುಗಡೆಗೊಂಡು ಆರಾಮವಾಗಿ ತಿರುಗಡುತ್ತಿದ್ದು ಇವರು ವಿವಿಧ ಜಿಲ್ಲೆಗಳ ಠಾಣೆಗಳಲ್ಲಿ ಹಲವು ಪ್ರಕರಣಗಳು ಸಹ ವಿದ್ದು ಇದೆ ಇವರ ದೈನಂದಿನ ವೃತ್ತಿಯಾಗಿದ್ದು ಎಂದು ತಮ್ಮ ಆಕ್ರೋಶವನ್ನು ಹೋರಹಾಕಿದರು.