ಎಎಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ: ಎಲ್.ರಂಗಯ್ಯ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಜು.18:- ಆಂದೋಲನದ ಹಾದಿಯ ರಾಷ್ಟ್ರೀಯ ಪಕ್ಷವಾಗಿ ಹೊರಹೊತ್ತಿರುವ ಆಮ್ ಆದ್ಮಿ ಪಕ್ಷ ಕರ್ನಾಟಕದಲ್ಲಿಯೂ ಸಹ ವೇಗವಾಗಿ ಬೆಳೆಯುತ್ತಿದೆ ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡು ನಮ್ಮೊಂದಿಗೆ ಕೈಜೋಡಿಸಿ ಎಂದು ಆಮದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಎಲ್.ರಂಗಯ್ಯ ಹೇಳಿದರು.
ಪಟ್ಟಣದ ಗರುಡಗಂಭ ವೃತ್ತ ದಲ್ಲಿ ಆಮ್ ಆದ್ಮಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜನಸೇವೆಗೆ ಹಣ, ಜಾತಿ ಮುಖ್ಯವಲ್ಲ ರಾಜಕಾರಣ ಹಾಗೂ ಸಾಮಾಜಿಕ ಬದಲಾವಣೆಗೆ ನಾವು ಬದ್ಧರಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಅನಿವಾರ್ಯವಿದೆ ಎಂದರು.
ನಿಮ್ಮಲ್ಲಿ ನಾಯಕತ್ವದ ಗುಣವಿದ್ದರೆ ಇಂಥಹ ಕೆಟ್ಟ ವ್ಯವಸ್ಥೆಯಲ್ಲಿ ಬಲವಂತದಿಂದ ವಿಧಿ ಇಲ್ಲದೆ ಪರ್ಯಾಯ ರಾಜಕೀಯದ ಅರಿವಿಲ್ಲದೆ ಇದ್ದರೆ ನಿಮಗಿದು ಸರಿಯಾದ ಆಯ್ಕೆ ಮಾಡುವ ಸಮಯ! ನೀವು ಆಮ್ ಆದ್ಮ ಪಕ್ಷ ಸೇರಿ. ನಿಮ್ಮ ತಾಲ್ಲೂಕಿನಲ್ಲಿ ಆಮ್ ಆದ್ಮ ಪಕ್ಷದ ನಾಯಕರಾಗಿ ನಿಮ್ಮ ನಾಯಕತ್ವದಲ್ಲಿ ಚುನಾವಣೆ ಗೆದ್ದು ಕ್ರಾಂತಿ ಮೊಳಗಿಸಿ ಎಂದು ಕರೆ ನೀಡಿದರು.
ಸ್ವಚ್ಛ ರಾಜಕಾರಣ ಮಾಡಲು ಮನಸ್ಸಿರುವ ನಿಮಗೆ ಆಮ್ ಆದಿ ಪಕ್ಷ ಇನ್ನಷ್ಟು ಶಕ್ತಿ ಕೊಡುತ್ತದೆ. ಅಸಾಧ್ಯ ಅನ್ನೋ ಮಾತೇ ಇಲ್ಲಾ ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ನಮ್ಮ ಪಕ್ಷಕ್ಕೆ ದಾರಿ ಸ್ಪಷ್ಟವಾಗಿದೆ ಎಂದರು.
ರಾಜ್ಯಾದ್ಯಂತ ನಡೆಯುತ್ತಿರುವ ಲಂಚಮುಕ್ತ ಕರ್ನಾಟಕ ಅಭಿಯಾನದ ಫಲವಾಗಿ ಅನೇಕ ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರಿಗೆ ಲಂಚವಿಲ್ಲದೇ ಕೆಲಸವಾಗುವಂತಾಗಿದೆ ಆದ್ದರಿಂದ ನಮ್ಮ ಪಕ್ಷಕ್ಕೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಈ ಪಕ್ಷ ಸದಸ್ಯತ್ವ ಅಭಿಯಾನದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಉಷಾಸಂಪತ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐಶ್ವರ್ಯ, ತಾಲ್ಲೂಕು ಅಧ್ಯಕ್ಷ ಕನುಗನಹಳ್ಳಿ ಎಂ.ಜೆ.ನಾಗರಾಜೇಗೌಡ, ಕಾರ್ಯದರ್ಶಿ ಕಾಳಪ್ಪ, ಮುಖಂಡರುಗಳಾದ ಲಿಂಗಮ್ಮ, ರಾಣಿ, ಕಾಳಿ, ಲಲಿತ, ಪಾರ್ವತಿ ಸೀತೆ, ಕಾಳಮ್ಮ ಸೇರಿದಂತೆ ಇನ್ನಿತರರು ಈ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.