ಪ್ರಾಕೃತಿಕ ಸಂಪತ್ತು ಸಂರಕ್ಷಣೆಯಾದರೆ ಭಾರತ ದೇಶ ಸಂಪತ್‍ಭರಿತ: ಬಂತೇಜಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.18- ಪಾಕೃತಿಕ ಸಂಪತ್ತನÀ್ನು ಸಂರಕ್ಷಣೆ ಮಾಡಿ, ಉತ್ತಮ ಹಸಿರು ವಾತಾವರಣ ನಿರ್ಮಾಣ ಮಾಡಿದ್ದಲ್ಲಿ ಭಾರತ ದೇಶದ ಹೆಚ್ಚು ಸಂಪತ್ಭ್ಬರಿತ ರಾಷ್ಟ್ರವಾಗಲಿದೆ ಎಂದು ಕೊಳ್ಳೇಗಾಲದ ಭೌದ್ದ ಚೇತನ ವನದ ಮನೋರಖ್ಖಿತ ಬಂತೇಜಿ ತಿಳಿಸಿದರು.
ನಗರದ ಹೊರ ವಲಯದದಲ್ಲಿರುವ ಸುವರ್ಣ ಗಂಗ್ರೋತಿ ವಿಶ್ವವಿದ್ಯಾನಿಯಲದ ಪ್ರಾಂಗಣದಲ್ಲಿ 2ನೇ ಹಂತದಲ್ಲಿ 100 ಸಸಿಗಳನ್ನು ನೆಟ್ಟು ನೀರೇರೆದು ಸಂರಕ್ಷಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದರು.
ಭಾರತ ದೇಶವನ್ನು ಪ್ರಾಕೃತಿಕ ಸಂಪತ್ ಭರಿತರಾಷ್ಟ್ರವಾಗಬೇಕಾದರೆ, ಉತ್ತಮ ಪರಿಸರ ಸಂಪತ್ತನ್ನು ಉಳಿಸಿಕೊಳ್ಳಬೇಕು. ಭಾರತ ವಿಶ್ವದ ಕೇಂದ್ರಸ್ಥಾನವಾಗಿದೆ. ಮಾನವ ಸಂಪನ್ಮೂಲಗಳನ್ನು ಹೆಚ್ಚು ಬಳಸಿಕೊಂಡು ಅರಣ್ಯ ಮತ್ತು ಗಿಡ ಮರಗಳನ್ನು ಬೆಳೆಸಿ, ಪರಿಸರವನ್ನು ಕಾಪಾಡಿಕೊಂಡರೆ ವಿಶ್ವ ಮಟ್ಟದಲ್ಲಿ ದೇಶವನ್ನು ಪ್ರಾಕೃತಿಕವಾಗಿ ಸಂಪತ್ತನ್ನು ಹೊಂದಿರುವ ಭಾರತ ಎಂದು ಗುರುತಿಸಿಕೊಳ್ಳುವ ಮಟ್ಟದಲ್ಲಿ ನಾವೆಲ್ಲರು ಶ್ರಮಿಸೋಣ ಎಂದರು.
ಗಿಡ ಮರಗಳನ್ನು ಹೆಚ್ಚು ಹೆಚ್ಚು ಬೆಳೆಸುವುದರಿಂದ ಮಳೆ, ಉತ್ತಮ ಗಾಳಿ ದೊರೆಯುತ್ತದೆ. ಉತ್ತಮ ಫಸಲು ಬೆಳೆದು ದೇಶ ಸುಭಿಕ್ಷೆಯಾಗುತ್ತದೆ, ಪ್ರಾಣಿ, ಪಕ್ಷಿಗಳು, ಜೀವ ಸಂಕುಲಗಳನ್ನು ಬದುಕಲು ಸಾಧ್ಯವಾಗುತ್ತದೆ. ಇಂಥ ವಾತಾವರಣವನ್ನು ಸೃಷ್ಟಿಸುವಲ್ಲಿ ಪರಿಸರ ಪ್ರೇಮಿ ಸಿ.ಎಂ. ವೆಂಕಟೇಶ ಅವರು ಮಾಡುತ್ತಿರುವ ಸಾರ್ಥಕ ಸೇವೆಯನ್ನು ಬಂತೇಜಿ ಪ್ರಶಂಸಿಸಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ದಾನೇಶ್ವರಿ ಅವರು ಮಾತನಾಡಿ, ಪರಿಸರವು ನಮಗೆ ವೃಕ್ಷವು ಹುಟ್ಟಿನಿಂದ ಸದಾ ಕಾಲ ದೇಹ ಬಿಡುವ ತನಕ ಸದಾಕಾಲ ಕೊಡುವವಂತಹ ಗುಣವನ್ನು ಹೊಂದಿರುತ್ತದೆ. ಹೂವು, ಹಣ್ಣು, ಶುದ್ದ ಗಾಳಿ, ನೆರಳು, ಎಲ್ಲವನ್ನು ನೀಡುತ್ತದೆ. ಅದನ್ನು ರಕ್ಷಿಸಬೇಕಾದದ್ದು, ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಈಶ್ವರಿ ಸೋಷಿಯಲ್ ಟ್ರಸ್ಟ್‍ನ ಸಂಸ್ಥಾಪಕ ಸಿ.ಎಂ. ವೆಂಕಟೇಶ್ ಮಾತನಾಡಿ, ಮಾಜಿ ಸಚಿವರಾದ ದಿ. ಎಚ್.ಎಸ್. ಮಹದೇವಪ್ರಸಾದ್ ಅವರ ಸ್ಮರಣಾರ್ಥ 250 ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಕೆಲಸವನ್ನು ಕಳೆದ ವರ್ಷ ಮಾಡಿದ್ದೆವು. ಮುಂದುವರಿದು ಎರಡನೇ ಹಂತವಾಗಿ 100 ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯಕ್ಕೆ ಇಂದು ಗಣ್ಯರು ಚಾಲನೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಲಯನ್ಸ್ ಅಧ್ಯಕ್ಷ ಡಾ. ಬಸವರಾಜೇಂದ್ರ, ಡಾ. ಶ್ವೇತಾ, ಜಯಲಕ್ಷ್ಮಿ, ಮಂಜುನಾಥ ಆರಾಧ್ಯ, ಕಲಾವಿದರುಗಳಾದ ಸಿ.ಎಂ. ನರಸಿಂಹಮೂರ್ತಿ, ಮುಡಿಗುಂಡ ಜೆ.ಎಂ. ಮೂರ್ತಿ ಮೊದಲಾದವರು ಇದ್ದರು.