ದೇಶದ ಭವಿಷ್ಯ ಯುವ ವಿದ್ಯಾರ್ಥಿಗಳ ಮೇಲೆ ಅವಲಂಬಿತವಾಗಿದೆ : ಎಲ್.ಹೆಚ್. ಅರುಣ್‌ಕುಮಾರ್
ಸಂಜೆವಾಣಿ ವಾರ್ತೆ
ದಾವಣಗೆರೆ, ಜು.17; ದೇಶದ ಭವಿಷ್ಯ ಯುವ ವಿದ್ಯಾರ್ಥಿಗಳ ಮೇಲೆ ಅವಲಂಬಿತವಾಗಿದ್ದು, ಇಂದಿನ ಯುವಕರನ್ನು ನೈತಿಕ ಶಿಕ್ಷಣ, ಸಂಸ್ಕಾರ ಮತ್ತು ಸಂಸ್ಕೃತಿಯೊಡನೆ ಹೊಣೆಗಾರಿಕೆಯಿಂದ ರೂಪಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ. ಅದೇ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಆಡಳಿತವಿದ್ದು, ನಾವೆಲ್ಲರೂ ಕಾನೂನನ್ನು ಪಾಲಿಸುವಲ್ಲಿ ಬದ್ಧರಾಗಿರಬೇಕು. ಸಂವಿಧಾನದ ಆಶಯಗಳಂತೆ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಬೇಕೆಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್.ಹೆಚ್. ಅರುಣ್‌ಕುಮಾರ್ ಪ್ರತಿಪಾದಿಸಿದರು. ಅವರು ಕುವೆಂಪು ಕನ್ನಡಭವನದಲ್ಲಿ ನಡೆದ ಭದ್ರಾ ಪದವಿ ಕಾಲೇಜು ಹಾಗೂ ಭದ್ರಾ ಸ್ನಾತಕೋತ್ತರ ಕೇಂದ್ರದ ವಾರ್ಷಿಕೋತ್ಸವ ಹಾಗೂ “ಸಾಂಸ್ಕೃತಿಕ ಕಾರ್ಯಕ್ರಮ”ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, 12ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ನ್ಯಾಯದ ಸಮಾನತೆಯ ಚಳುವಳಿಯನ್ನು ಆರಂಭಿಸಿದ್ದರು. ಮಹಿಳೆಯರಿಗೆ ಮತ್ತು ಶೋಷಿತರಿಗೆ ಸಮಾನ ಅವಕಾಶವನ್ನು ನೀಡಿ ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಸಮಾನತೆಯ ಸಮಾಜದ ಕನಸನ್ನು ನನಸು ಮಾಡಿದರು. ಮಾನವ ಹಕ್ಕುಗಳನ್ನು ಪ್ರತಿಪಾದಿಸಿ ಮಾನವತೆಯ ಸಮಾಜದ ಕನಸನ್ನು ಬಸವಣ್ಣನವರು ಕಂಡಿದ್ದರು. 1948ರಲ್ಲಿ ಜಾರಿಗೆ ಬಂದ ಮಾನವ ಹಕ್ಕುಗಳು ಪ್ರಪಂಚದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಸಹಕಾರಿಯಾಗಿದ್ದು, ಮಾನವ ಹಕ್ಕುಗಳು ಜಾರಿಗೆ ಬಂದÀ ಮೇಲೆ ಅಂತರಾಷ್ಟಿçÃಯ ಮಟ್ಟದಲ್ಲಿ ಜನಾಂಗೀಯ ಹೋರಾಟ, ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಭ್ರೂಣ ಹತ್ಯೆ ಅಂತಹ ಕ್ರೌರ್ಯಗಳನ್ನು ನಿಷೇಧಿಸಿ, ಜನಾಂಗಗಳ ಏಳಿಗೆಗೆ ನೆರವು ಮತ್ತು ಸಹಕಾರ ನೀಡುತ್ತಿದೆ ಎಂದು ತಿಳಿಸಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಸಾಮಾಜಿಕ ಹೋರಾಟಗಾರ ಹಾಗೂ ಹಿರಿಯ ವಕೀಲ ಬಿ.ಎಂ. ಹನುಮಂತಪ್ಪ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆಧುನಿಕ ಯುವಕರಿಗೆ ಸರಳ ಜೀವನ ಅವಶ್ಯಕವಿದ್ದು, ದೈನಂದಿನ ಜೀವನದ ಕರ್ತವ್ಯಗಳನ್ನ ಅರಿತು ಬಾಳಬೇಕಾಗಿದೆ. ಶಿಕ್ಷಣ ಬದುಕನ್ನ ಹಸನ ಮಾಡುವಂತಿರಬೇಕು. ಇಂದಿನ ಸಮಾಜಕ್ಕೆ ಸಂವಿದಾನದ ಜ್ಞಾನ ಬೇಕಾಗಿದ್ದು, ಅದರ ಮಹತ್ವವನ್ನು ಎಲ್ಲರು ಅರಿಯಬೇಕಾಗಿದೆ. ಭಾರತ ಸಂವಿಧಾನವು ಭಾರತೀಯರನ್ನ ಸಮಾನತೆಯಿಂದ ಕರೆದುಕೊಂಡು ಹೋಗುವ ಗ್ರಂಥವಾಗಿದೆ ಎಂದು ಹೇಳಿದರು. ಎಲ್ಲಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ ಆರೋಗ್ಯ ಮತ್ತು ಚಾರಿತ್ರö್ಯ ತುಂಬಾ ಅವಶ್ಯಕವೆಂದರು.ಸಮಾರAಭದ ಮತ್ತೋರ್ವ ಮುಖ್ಯ ಅತಿಥಿಗಳಾದ ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟ ಮಾಜಿ ಅಧ್ಯಕ್ಷರಾದ ಪ್ರೊ. ಸಿ ಹೆಚ್ ಮುರಿಗೇಂದ್ರಪ್ಪ, ಇವರು ವಿದ್ಯಾರ್ಥಿಗಳಲ್ಲಿ ಸೃಜನಶೀಲ ಮನೋಭಾವನೆ ಅತ್ಯಾವಶ್ಯಕವೆಂದು ಹೇಳುವುದರ ಮೂಲಕ ಬರಿ ಹಕ್ಕುಗಳಿಗೆ ಮಾತ್ರ ಮಹತ್ವ ಕೊಡದೆ, ಕರ್ತವ್ಯಗಳಿಗೂ ಮಹತ್ವ ನೀಡಬೇಕು. ಸಂಕುಚಿತ ಮನೋಭಾವನೆ ಬಿಟ್ಟು ವಿಶಾಲ ಮನೋಭಾವದ ಅಡಿಯಲ್ಲಿ ಹೋರಾಟದ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.