ಕೆಐಎಡಿಬಿ ಜಮೀನಿನಿಗೆ ಪರಿಹಾರ; ವೆಂಕಟಲಕ್ಷ್ಮಿ ಭರವಸೆ
ಕೋಲಾರ, ಜು,೧೮ – ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಜಮೀನು ಕಳೆದುಕೊಂಡ ರೈತರಿಗೆ ರೈತರ ಹಣವನ್ನು ರೈತರ ಖಾತೆಗೆ ಜಮಾ ಮಾಡಿ ಭೂ-ಸ್ವಾಧೀನ ಅಧಿಕಾರಿಗಳಾದ ವೆಂಕಟಲಕ್ಷ್ಮಿ ರವರಿಗೆ ಬೆಂಗಳೂರಿನ ಕೆ.ಐ.ಎ.ಡಿ.ಬಿ. ಕಚೇರಿಯಲ್ಲಿ ಮನವಿ ಸಲ್ಲಿಸಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ನಾರಾಯಣಸ್ವಾಮಿ ಒತ್ತಾಯ ಮಾಡಲಾಯಿತು.
ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಜಮೀನು ಕಳೆದುಕೊಂಡ ರೈತರ ಸಮಸ್ಯೆಗಳು ಮೊದಲನೇ ಹಂತದಲ್ಲಿ ಜಮೀನು ಕಳೆದುಕೊಂಡ ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕು. ಎರಡನೇ ಹಂತದಲ್ಲಿ ಜಮೀನು ಕಳೆದುಕೊಂಡ ರೈತರ ಸಮಸ್ಯೆಗಳು ಬಾಕಿ ಇರುವಾಗ ಮೂರನೇ ಹಂತದಲ್ಲಿ ಜಮೀನನ್ನು ವಶಪಡಿಸಿಕೊಳ್ಳುತ್ತಿದ್ದೀರಿ. ಅಭಿವೃದ್ಧಿಯ ಹೆಸರಿನಲ್ಲಿ ರೈತರ ಜಮೀನನ್ನು ತೆಗೆದುಕೊಳ್ಳುತ್ತಿದ್ದೀರಿ, ಆದರೆ ರೈತರ ಪರಿಹಾರ ಹಣವನ್ನು ಮಾತ್ರ ನೀಡದೆ ಕಚೇರಿಗೆ ಅಲೆದಾಡಿಸುತ್ತಿದ್ದೀರಿ. ಇದು ನಿಮಗೆ ನ್ಯಾಯವೇ ಎಂದು ಕೇಳಲಾಗಿ ಸರ್ಕಾರ ಜೊತೆ ಮಾತನಾಡಿ ಭೂ ಸ್ವಾಧೀನ ಅಧಿಕಾರಿ ವೆಂಕಲಕ್ಷ್ಮೀರವರು ರೈತರಿಗೆ ಆದಷ ಬೇಗ ಪರಿಹಾರ ಹಣವನ್ನು ನೀಡುವುದಾಗಿ ತಿಳಿಸಿದರು.
೫ ರಿಂದ ೧೦ ಲಕ್ಷ ಮಧ್ಯವರ್ತಿಗಳ ಪಾಲಾಗುತ್ತಿದ್ದು ನಮ್ಮ ಗಮನಕ್ಕೆ ಬಂದಿದೆ. ಮಧ್ಯವರ್ತಿಗಳ ಮೇಲೆ ತೀರ್ವ ನಿಗಾ ಇಟ್ಟು ನೋಡುತ್ತಿದ್ದೇವೆ. ತಪ್ಪು ಕಂಡು ಬಂದಲ್ಲಿ ಯಾರೇ ಆದರೂ ಸರಿಯೇ ಮಧ್ಯವರ್ತಿಗಳ ಮೇಲೆ ಕೇಸನ್ನ ದಾಖಲಿಸಲಾಗುವುದು. ರೈತರನ್ನು ರಕ್ಷಣೆ ಮಾಡುವುದಕ್ಕೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಭೂ ಸ್ವಾಧೀನ ಅಧಿಕಾರಿಗಳಾದ ವೆಂಕಟಲಕ್ಷ್ಮಿ ರವರು ತಿಳಿಸಿದರು.
ರೈತರ ಅನುಮತಿ ಪಡೆದ ರೈತರ ಜಮೀನಿನ ವಶಪಡಿಸಿಕೊಳ್ಳಬೇಕು. ಬೆಂಗಳೂರಿನ ಕೆ.ಐ.ಎ.ಡಿ.ಬಿ. ಕಚೇರಿಗೆ ರೈತರನ್ನು ಅಲೆದಾಡಿಸಬಾರದು ಪಹಣಿದಾರ ರೈತನ ಖಾತೆಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು. ಒಂದು ಎಕರೆ ರೈತನ ಭೂಮಿಗೆ ಮೂರು ಕೋಟಿ ಹಣ ಪರಿಹಾರ ನೀಡಬೇಕು. ಮೊದಲನೇ ಹಂತದಲ್ಲಿ ಹಾಗೂ ಎರಡನೇ ಹಂತದಲ್ಲಿ ಜಮೀನು ಕಳೆದುಕೊಂಡ ರೈತರ ಸಮಸ್ಯೆಗಳನ್ನ ಕೂಡಲೇ ಬಗೆಹರಿಸಬೇಕು. ಜಮೀನು ಕಳೆದುಕೊಂಡ ರೈತರ ಕುಟುಂಬಕ್ಕೆ ಒಂದು ಪರಮನೆಂಟ್ ಉದ್ಯೋಗ ನೀಡಬೇಕು.
ಎರಡನೇ ಹಂತದಲ್ಲಿ ಸುಮಾರು ೪೫೭ ಎಕರೆ ಜಮೀನುಗಳು ೨೦೨೩ ಮತ್ತು ೨೦೨೪ರಲ್ಲಿ ಭೂಸ್ವಾಧೀನವಾಗಿದ್ದು, ಸುಮಾರು ಒಂದು ವಷದಿಂದ ೧೧೦ ರಿಂದ ೧೧೫ ಎಕರೆ ಜಮೀನುಗಳಿಗೆ ಮಾತ್ರ ಭೂ ಪರಿಹಾರವನ್ನು ನೀಡಿದ್ದು, ಇನ್ನೂ ಉಳಿಕೆ ೩೪೦ಕ್ಕೂ ಹೆಚ್ಚು ಜಮೀನುಗಳಿಗೆ ಭೂ ಪರಿಹಾರ ನೀಡಬೇಕಾಗಿದ್ದು, ಹಾಗೂ ರೈತರ ಜಮೀನಲ್ಲಿರುವ ಕೃಷಿ ಹೊಂಡ, ಬಾವಿ, ಬೋರ್‌ವೆಲ್, ಮಾವು, ತೆಂಗು, ಹುಣಿಸೆ, ಹಲಸು, ಹುಂಗೆ, ಇನ್ನಿತರ ಮರ-ಗಿಡಗಳಿಗೆ ಒಂದು ಮರಕ್ಕೆ ಒಂದು ಲಕ್ಷ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಲಾಯಿತು.