ಕೆರೆ ನೀರು ಶೇಖರಿಸುವ ಮಹತ್ವದ ಕಾರ್ಯಕ್ಕೆ ಗ್ರಾಮಸ್ಥರು ಕೈಜೋಡಿಸಿ
ಕೋಲಾರ,ಜು.೧೮- ಐಐಎಫ್‌ಎಲ್ ಸಮಸ್ಥ ಪೈನಾನ್ಸ್ ಲಿಮಿಟೆಡ್ ಮತ್ತು ಗ್ರಾಮ ವಿಕಾಸ ಆಯೋಜನೆಯಲ್ಲಿ ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ, ದಂಡಿಗಾನಹಳ್ಳಿ ಗ್ರಾಮಸ್ಥರು ಸಂಯೋಜನೆಯಲ್ಲಿ ತಾಲೂಕಿನ ದಂಡಿಗಾನಹಳ್ಳಿ ಗ್ರಾಮದ ಕೆರೆ ಪುನಶ್ಚೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸೀನಿಯರ್ ಜೊನಲ್ ಹೆಡ್ ದೀಪಕ್ ಅಯತಿರವರು ಮಾತಾನಾಡಿ, ಐಐಎಫ್‌ಎಲ್ ಸಮಸ್ಥ ಪೈನಾನ್ಸ್ ಲಿಮಿಟೆಡ್ ಕೆರೆ ಪುನಶ್ಚೇತನ ಕೆಲಸಕ್ಕೆ ಸಹಾಯ ಮಾಡಿ ಗ್ರಾಮದಲ್ಲಿ ಕೆರೆ ನೀರು ನಿಲ್ಲಿಸುವ ಮಹತ್ವದ ಕಾರ್ಯಕ್ಕೆ ನಮ್ಮ ಕಂಪನಿ ಮುಂದೆ ಬಂದು ಹೂಳು ತೆಗೆಯುವ ಯೋಜನೆಗೆ ಗ್ರಾಮಸ್ಥರೊಂದಿಗೆ ಕೈಜೊಡಿಸಿರುವುದು ನಮ್ಮ ಪುಣ್ಯದ ಕೆಲಸವೆಂದು ತಿಳಿಸಿ ಅದರ ಜೊತೆಗೆ ಶಿಕ್ಷಣಕ್ಕೂ ಅಧ್ಯತೆ ನೀಡುತ್ತಾ ಬರುತ್ತಿದ್ದೇವೆ. ಅಷ್ಟೆ ಅಲ್ಲದೆ ಹತ್ತು ಸಾವಿರ ಗ್ರಾಮೀಣ ಯುವಜನರಿಗೆ ಕೆಲಸ ನೀಡುವ ಮೂಲಕ ನಗರಗಳಿಗೆ ವಲಸೆ ಹೋಗುವುದು ತಪ್ಪಿಸುತ್ತಿದ್ದೇವೆ ಇದರಿಂದ ಗ್ರಾಮದ ಅಭಿವೃದ್ದಿಗೆ ನಾವು ಸಣ್ಣದಾಗಿ ಕರ್ತವ್ಯ ಮಾಡುತ್ತಿದ್ದೇವೆಂದು ತಿಳಿಸಿದರು.
ಗ್ರಾಮವಿಕಾಸ ಸಂಸ್ಥೆಯು ೪೦ ವರ್ಷಗಳಿಂದ ಕೋಲಾರ ಜಿಲ್ಲೆಯಲ್ಲಿ ಮಕ್ಕಳು, ಮಹಿಳೆ ಮತ್ತು ಕೆರೆಗಳ ಪುನಶ್ವೇತನ ಮಾಡುತ್ತಾ ಸುಮಾರು ಇನ್ನೂರಿಂದ ಮೂನ್ನೂರು ಕೆರೆಗಳ ಪುನಶ್ವೇತನ ಮಾಡಿ ಮಾದರಿಯಾಗಿದೆ. ನಮ್ಮ ಕಂಪನಿ ಅವರೊಂದಿಗೆ ಇನ್ನಷ್ಟು ಕೆರೆಗಳ ಪುನಶ್ಚೇತನ ಕೆಲಸ ಮಾಡಬೇಕೆಂದು ಅವರೊಂದಿಗೆ ಸೇರಿ ಕೆಲಸ ಮಾಡುತ್ತಿದ್ದೇವೆ. ಈ ಗ್ರಾಮದಲ್ಲಿ ನಮ್ಮ ಕೆರೆ ಪುನಶ್ವೇತನಕ್ಕೆ ಕೈಜೊಡಿಸುತ್ತಿದ್ದೇವೆ ಇದು ಯಶಸ್ವಿಯಾದರೆ ಬೇರೆ ಗ್ರಾಮಗಳಲ್ಲಿ ಮಾಡಿ ಕೆರೆಗಳ ಪುನಶ್ವೇತನ ಮಾಡಬೇಕೆಂದುಕೊಂಡಿದ್ದೇವೆ ಎಂದು ಐಐಎಫ್‌ಎಲ್ ಸಮಸ್ಥ ಪೈನಾನ್ಸ್ ಲಿಮಿಟೆಡ್‌ನ ಎಜಿಎಂ ಸಿ.ಎಸ್.ಆರ್ ಶಂಬುಲಿಂಗ ಖೋಟ್ ತಿಳಿಸಿದರು.
ಕೋಲಾರ ಜಿಲ್ಲೆ ಕೆರೆಗಳ ತವರೂರು ಅದು ನಮ್ಮೆಲ್ಲರ ಜೀವಾಳ ಇವುಗಳನ್ನು ಕಪಾಡಿಕೊಂಡಿಲ್ಲ ಅಂದರೆ ನಮ್ಮಗೆ ಉಳಿಗಾಲವಿಲ್ಲ ಅದರಿಂದ ಗ್ರಾಮಸ್ಥರು ಒಂದಾಗಿ ಕೆರೆಗಳಲ್ಲಿ ಹೂಳು ಮಣ್ಣುಗಳನ್ನು ತೆಗದು ಸ್ವಹಿಚ್ಚೆಯಿಂದ ಹೊಲ ತೋಟಗಳಿಗೆ ಹಾಕಿಕೊಳ್ಳಬೇಕು ಮತ್ತು ಕೆರೆಯಲ್ಲಿ ನೀರು ಶೇಖರಣೆಯಾಗಲು ವ್ಯವಸ್ಥೆ ಮಾಡಬೇಕೆಂದು ಮುದುವತ್ತಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರವಿಕುಮಾರ್ ಕಿವಿ ಮಾತು ಹೇಳಿದರು.
ವೇದಿಕೆಯಲ್ಲಿ ಗ್ರಾಮವಿಕಾಸ ಆಡಳಿತಾಧಿಕಾರಿ ಗಿರಿಜಾ, ಸಂಯೋಜಕ ರಾಮಕೃಷ್ಣಗೌಡ, ಪಂಚಾಯಿತಿ ಸದಸ್ಯರಾದ ದಂಡಿಗಾನಹಳ್ಳಿ ಅನಂದಕುಮಾರ್, ಅಶ್ವತ್ ರಾಮ್, ವೆಂಕಟರಾಮ, ಗ್ರಾಮದ ಹಿರಿಯರಾದ ನಾರಾಯಣಪ್ಪ, ಶಂಬಣ್ಣನವರ ಮುನಿಯಪ್ಪ, ಗ್ರೀನ್ ವಾರಿಯರ್ಸ್ ಶ್ಯಾಮಲ, ಆನಂದ ಮಹಾರಾಜ್, ತೇಜು, ರೈತರು, ಊರಿನ ಗ್ರಾಮಸ್ಥರು ಭಾಗವಹಿಸಿದರು.