ಅಟ್ಟೂರು ದರ್ಗಾದಲ್ಲಿ ಭಾವೈಕ್ಯತೆಯ ಮೊಹರಂ
ಹೊಸಕೋಟೆ.ಜು.೧೮-ದೇವನೊಬ್ಬ ನಾಮ ಹಲವು ಆಚರಣೆಗಳು ಬೇರೆ ಆದರೆ ಭಕ್ತಿಯೊಂದೆ ಆಗಿದೆ ಎಂದು ಹಜರತ್ ಸೈಯದ್ ಮೊಹಿದ್ದೀನ್ ? ವಲಿ ದರ್ಗಾದ ಧರ್ಮದರ್ಶಿಗಳಾದ ಶೇಕ್ ಮೊಹಿದ್ದೀನ್
ರವರು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ೭೫ ರ ಅಟ್ಟೂರು ನಿಡಗಟ್ಟ ಬಳಿಯಿರುವ ದರ್ಗಾದಲ್ಲಿ ೩೩೮ ವ?ಗಳ ಹಿಂದೆ ಮದೀನಾ ದಿಂದ ಆಗಮಿಸಿದ ಪಕೀರರು ಬೇಡಿ ಭಕ್ತರ ಕ?ಗಳನ್ನು ಪರಿಹರಿಸುತ್ತಾ ಪವಾಡಗಳ ಮೂಲಕ ರಾಜ್ಯ ಸೇರಿದಂತೆ ತಮಿಳುನಾಡು ಕೇರಳ ಆಂಧ್ರ ಅಲ್ಲದೆ ವಿದೇಶಗಳಲ್ಲೂ ಎಲ್ಲಾ ಧರ್ಮದವರು ಕೂಡ ಆಗಮಿಸಿ ಪ್ರತಿ ಉತ್ಸವ ಹಬ್ಬ ಹರಿದಿನಗಳಲ್ಲಿ ಭಾಗವಹಿಸುತ್ತಾರೆ ೧೭ ನೇ ತಾರೀಖಿನಿಂದ ಇಂದಿನವರಗೆ ಏಳುದಿನಗಳ ಭಗವಂತನ ಹಸ್ತಗಳನ್ನು ಪ್ರತಿಷ್ಠಾಪಿಸಿ ಪೂಜಿಸಿ ಮೊಹರಂ ಕೊನೆಯದಿನದಂದು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ ಎಂದರು
ನಂತರ ನಂದಗುಡಿ ಶಿವದೇವಾಲಯದ ಅರ್ಚಕರಾದ ಆಂಜಿನಪ್ಪ ಪೂಜಾರ್ ರವರು ಮಾತನಾಡಿ ಎಲ್ಲಾ ಧರ್ಮಗಳ ಉದ್ದೇಶ ಮುಕ್ತಿ ಮಾರ್ಗವಾಗಿದ್ದು ಅನುಸರಿಸುವ ರೀತಿಗಳು ಆಚರಣಾ ಪದ್ದತಿಗಳು ಬೇರೆಯಾಗಿವೆ, ಯಾರಿಗೆ ಎಲ್ಲಿ ಭಗವಂತನ ಅನುಗ್ರಹವಾಗುತ್ತದೋ ಅಲ್ಲಿಗೆ ಭಕ್ತರು ಆಗಮಿಸುತ್ತಾರೆ ಅದೇ ರೀತಿ ಅಟ್ಟೂರು ಬಳಿಯ ದರ್ಗಾದಲ್ಲೂ ಕೂಡ ಸುತ್ತಮುತ್ತಲಿನ ಗ್ರಾಮಸ್ಥರು ಜಾತಿ ಧರ್ಮಬೇಧ ಮರೆತು ಮೊಹರಂ ಆಚರಿಸುವುದು ಶಾಂತಿ ಭಾವೈಕ್ಯತೆಯ ಸಂಕೇತವಾಗಿದೆ ಎಂದರು.