ಭಾವಸಾರ ಕ್ಷತ್ರೀಯ ಭಜನಾ ಮಂಡಳಿಯಿಂದ ಆಷಾಢ ಏಕಾದಶಿ
ಸಂಜೆವಾಣಿ ವಾರ್ತೆ
ದಾವಣಗೆರೆ: ನಗರದ ಮಹಾರಾಜಪೇಟೆಯಲ್ಲಿರುವ ಶ್ರೀ ಭಾವಸಾರ ಕ್ಷತ್ರೀಯ ಭಜನಾ ಮಂಡಳಿಯ ವತಿಯಿಂದ ಬುಧವಾರ ಆಷಾಢ ಪಂಡರಾಪುರ ವಾರಿ ಬ್ರಹ್ಮ ರಥೋತ್ಸವದ ಪ್ರಯುಕ್ತ ಸ್ವಾಮಿಗೆ ಅಭಿಷೇಕ, ಕಾಕಡಾರತಿ, ಭಜನೆ ಮತ್ತು ಪಲ್ಲಕ್ಕಿ ಉತ್ಸವ ನೆರವೇರಿತು.ಭಜನಾ ಮಂಡಳಿ, ದೈವ ಮಂಡಳಿ, ಮಹಿಳಾ ಮಂಡಳಿ, ತರುಣ ಮಂಡಳಿಯ ಇತರೆ ಅಂಗ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಜ್ಞಾನೇಶ್ವರಿ (ಭಗವದ್ಗೀತೆ) ಪಾರಾಯಣ, ಹರಿಪಾಠ ಮತ್ತು ಕಲಾವತಿ ಮಹಿಳಾ ಮಂಡಳಿ ಇವರಿಂದ ಭಜನೆ ಹಾಗೂ ರಾತ್ರಿ ಹ.ಭ.ಪ. ರಾಮಕೃಷ್ಣರಾವ್ ನವಲೆ ಇವರಿಂದ ಕೀರ್ತನ ಮತ್ತು ಅಖಂಡ ಜಾಗರಣೆ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಪ್ರಮುಖರಾದ ಭಜನಾ ಮಂಡಳಿ ಅಧ್ಯಕ್ಷರಾದ  ನಿಂಗಸ್ವಾಮಿರಾವ್ ಖಮಿತ್ಕರ್, ಚಂದ್ರಕಾಂತ್ ವಾದೋನೆ ಮತ್ತು ವಿನಯ್ ಜಿಂಗಾಡೆ, ವಿನಾಯಕ್ ಟಿಕಾರೆ ಇತರರು ಉಪಸ್ಥಿತರಿದ್ದರು.