ಎನ್.ಎಸ್.ಎಸ್. ಶಿಬಿರ : ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೧೭: ಗುಡ್ಡದರಂಗವ್ವನಹಳ್ಳಿ ಜ್ಞಾನ ಗಂಗೋತ್ರಿ ದಾವಣಗೆರೆ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ರಾಷ್ಟಿçÃಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರವು ಮಾಡನಾಯಕನಹಳ್ಳಿಯಲ್ಲಿ ನಡೆಯುತ್ತಿದೆ. ಇದರ ಅಂಗವಾಗಿ ಮಂಗಳವಾರ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ವೈದ್ಯಕೀಯ ಕಾಲೇಜಿನ ಡಾ.ರಾಜೇಶ್.ಎಂ.ಎಸ್ ಹಾಗೂ ಡಾ.ನಾಗೇಂದ್ರÀ್ರಗೌಡ ಸಿಬ್ಬಂದಿ ಶಿಬಿರಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ವೈದ್ಯಕೀಯ ತಪಾಸಣೆ ನಡೆಸಿದರು. ಶಿಬಿರದಲ್ಲಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಸತ್ಯನಾರಾಯಣ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಡಾ. ಸುಂದರA.ಎA, ನಿವೇದಿತ.ಬಿ.ಟಿ, ಗ್ರಾ.ಪಂ. ಸದಸ್ಯರುಳಾದ ಗೀತಾ.ವಿ.ಎನ್, ಎ.ರಾಘವೇಂದ್ರಸ್ವಾಮಿ, ಬಸವರಾಜಪ್ಪ, ಹನುಮಂತಪ್ಪ.ಸಿ ಪಾಲ್ಗೊಂಡಿದ್ದರು.