ಜಗಳೂರಿನ ತಾಯಿಟೋಣಿ  ಗ್ರಾಮದಲ್ಲಿ  ಹಿಂದೂ-ಮುಸ್ಲಿಂ ಜನಾಂಗದವರಿಂದ ಮೊಹರಂ ಹಬ್ಬ ಆಚರಣೆ…!
ಸಂಜೆವಾಣಿ ವಾರ್ತೆ
ಜಗಳೂರು.ಜು.೧೭; ಪಟ್ಟಣದಿಂದ 18 ಕಿಲೋಮೀಟರ್ ಕೂಗಳತೆ ದೂರದಲ್ಲಿರುವ ತಾಯಿಟೋಣಿ ಗ್ರಾಮದಲ್ಲಿ ಸರ್ವ ಜನಾಂಗದವರು ಮೊಹರಂ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುತ್ತಾರೆಮೊಹರಂ ಹಬ್ಬವನ್ನು ವರ್ಷದಲ್ಲಿ 12-ಹುಣ್ಣಿಮೆ 12 ಅಮಾವಾಸ್ಯೆ ಆದ ಮೂರನೇ ದಿನದಂದು ಗ್ರಾಮಸ್ಥರು ಗುದ್ದಲಿ ಹಾಕಿ ಐದನೇ ದಿನಕ್ಕೆ ದೇವರ ವಿಗ್ರಹಗಳನ್ನು ಮತ್ತು “ಹೊನ್ನೂರ್ ಸ್ವಾಮಿಯ ಗುಮ್ಮಟ” ಕೂರಿಸಿ ಅಲಾಯಿ ಕುಣಿ ತೆಗೆಯಲಾಗುತ್ತದೆಏಳನೇ ದಿನ ದಂದು ಕ್ರಮವಾಗಿ ಮೂರು ದಿನಗಳ ಕಾಲ ಫಕೀರರಾಗುತ್ತಾರೆ.ಮುಸ್ಲಿಂಬಾಂಧವರೊಂದಿಗೆ ಹಿಂದೂಗಳೂ ಕೂಡ ಲಾಡಿ ಹಾಕಿಸಿಕೊಂಡು ಫಕೀರರಾಗು ತ್ತಾರೆ.ಎಂಟನೇ ದಿನ ಬಿಡುವು ಮಾಡಿಕೊಂಡು ಒಂಬತ್ತನೇ ದಿನ ಕತ್ತಲು ರಾತ್ರಿ ಎಂದು ಅಲ್ಲಿನ ಗ್ರಾಮಸ್ಥರು ಕುಣಿಯುವುದು ವಿಶೇಷವಾಗಿದ ಆ ದಿನದಂದು ತಾಯಿಟೋಣಿ ಗ್ರಾಮದಲ್ಲಿರುವ ಎಲ್ಲಾ ಎತ್ತಿನ ಬಂಡಿ ಮತ್ತು ಟ್ಯಾಕ್ಟರ್ ಗಳ ಸಹಾಯದಿಂದ ಸೌದೆಗಳನ್ನು ತಂದು ಕೊಡುವುದು ಇಲ್ಲಿ ವಾಡಿಕೆ ಯಾಗಿದೆ ಆಸೆಗಳನ್ನು ಅಲೆಕುಣಿ ಎಲ್ಲಿ ಮಂಟಪದ ರೀತಿಯಲ್ಲಿ ಹೊಂದಿಸಿ ಒಂಬತ್ತು ತುಂಬಿದ ಕೊಡದಿಂದ ನೀರನ್ನು ಪ್ರಾರ್ಥನೆ ಮಾಡಿಸಿಕೊಂಡು ಗುಂಡಿಯ ಸುತ್ತ ಹಾಕಿ ಗ್ರಾಮದಲ್ಲಿ ಅತಿ ಶುದ್ದವಾದ ಮೂರು ವ್ಯಕ್ತಿಗಳನ್ನು ಗುರುತಿಸಿ ಆಸೆಗಳಿಗೆ ಅಗ್ನಿಸ್ಪರ್ಶ ಮಾಡಿದ ನಂತರ ದೇವಸ್ಥಾನದ ಒಳಗೆ ಇರುವ ಹುಸೇನಿ ಕೋಲು. ಉದಣಿ. ವಿಗ್ರಹಗಳನ್ನು ಎರಡು ತುರಾಯಿಗಳನ್ನು ಹೊರಗಡೆ ತೆಗೆದುಕೊಂಡು ಗ್ರಾಮದ ಕೆಲವರು ಮನೆಗಳಿಗೆ ತೆರಳಿ ಆ ಮನೆಯವರಿಂದ ಸಕ್ಕರೆ. ಬೆಲ್ಲ .ಮಂಡಕ್ಕಿ ಇಂದ ನೈವೇದ್ಯ ಮಾಡಿಕೊಂಡು ನಂತರ ತಣ್ಣೀರನ್ನು ವಿಗ್ರಹಗಳಿಗೆ ಹಾಕುವ ಮುಖಾಂತರ ಗ್ರಾಮದಿಂದ ಹೊರಗೆ ಇರುವ ಹಳೆ ಊರು ( ಹೂರ ಮಠಕ್ಕೆ ) ಹೋಗಿ ವಿಗ್ರಹಗಳಿಗೆ ಪ್ರಾರ್ಥನೆ ಮಾಡಿಕೊಂಡು ನಂತರ ಊರಿನ ಒಳಗೆ ಬಂದು ಕುರುಹುಗಳನ್ನು ಕೇಳಲು ಹೊನ್ನೂರು ಸ್ವಾಮಿ ಮರೆಹೋಗುವುದು ಸಾಮಾನ್ಯ ವಾಗಿದೆ ಹಲವಾರು ಚರ್ಮವ್ಯಾಧಿ ಕಾಯಿಲೆಗಳಿಗೆ ಹುರುಳಿ ಕಾಳು ಉಪ್ಪು ಮತ್ತು ಮೆಣಸು ಕೆಂಡಕ್ಕೆ ಹಾಕಿದರೆ ಮಾಯ ಮೆಣಸು.ಉಪ್ಪು.ಹುರುಳಿ ಕಾಳು. ಹೊನ್ನೂರ್ ಸ್ವಾಮಿಯ ಅಲಾಯಿ ಕುಣಿ ಕೆಂಡಕ್ಕೆ ಭಕ್ತಿ ಪೂರ್ವಕವಾಗಿ ಹಾಕಿದರೆ ಚರ್ಮವ್ಯಾಧಿ ಕಾಯಿಲೆ.ನಾರುಗುಳ್ಳೆ. ಮುಖದ ಮೇಲೆ ಮೊಡವೆಗುಳ್ಳೆ ವಾಸಿಯಾಗುತ್ತವೆ ಎನ್ನುತ್ತಾರೆ ಗ್ರಾಮಸ್ಥರಾದ ಮಂಜಣ್ಣ. ಮಹದೇವ ರೆಡ್ಡಿ. ಅರವಿಂದ್ ಪಾಟೀಲ್.ಹೊನ್ನೂರಪ್ಪ. ಜಾನಪದ ಕಲೆಗಳಾದ ನಂದಿಕೋಲು ತಮಟೆ. ಮೇಳ. ಕೀಲುಕುದುರೆ. ವೇಷ ಭೂಷಣದೊಂದಿಗೆ ಗ್ರಾಮಸ್ಥರು ನೃತ್ಯ ವಿಶೇಷವಾಗಿ ಹೆಣ್ಣುಮಕ್ಕಳು ತಮಟೆ ಬಾರಿಸುವು ದು ಮತ್ತು ಹಿಂದೂ -ಮುಸ್ಲಿಂ ಬಾಂಧವರು ಅಲಾಯಿ ಕುಣಿ ಸುತ್ತ ತಮಟೆಗಳ ಸುದ್ದುಗಳ ಹೆಜ್ಜೆ ಹಾಕಿ ಕುಣಿ ಯುವ ಮೂಲಕ ಸರ್ವ ಜನಾಂಗದವರು ಸೇರಿ ಮೊಹರಂ ಹಬ್ಬ ಮಾಡುವ ಮೂಲಕ ಹಿಂದು-ಮುಸ್ಲಿಂ ಭಾವೈಕ್ಯದ ಮೊಹರಂ ಹಬ್ಬದ ಸೊಬಗನ್ನು ಪಡೆಯುತ್ತಾರೆ.ಮೊಹರಂ ಹಬ್ಬದ ಕಡೆಯ ದಿನ ಬೆಳಿಗ್ಗೆಯಿಂದಲೇ ಹೊನ್ನೂರ್ ಸ್ವಾಮಿಯ ಗುಮ್ಮಟ ಮತ್ತು ದೇವರ ವಿಗ್ರಹಗಳು ಊರಿನ ಪ್ರತಿಯೊಂದು ಮನೆಗೆ ಹೋಗುತ್ತವೆ ಆ ಸಂದರ್ಭದಲ್ಲಿ ಮನೆಯವರು ಸಕ್ಕರೆ.ಬೆಲ್ಲ ಕಡಲೆ ಲೋಬಾನ ಕೊಟ್ಟು ಪ್ರಾರ್ಥನೆ ಸಲ್ಲಿಸಿ ಹೊನ್ನೂರ್ ಸ್ವಾಮಿಯ ಗುಮ್ಮಟದ ಕೆಳಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಅಡ್ಡಬಿದ್ದು ನಮಸ್ಕರಿಸುತ್ತಾರೆ ನಂತರ ಮಧ್ಯಾಹ್ನದ ವೇಳೆಗೆ ಗುಮ್ಮಟ ಹರಕೆಯ ಕುರುಹುಗಳನ್ನು ತೋರಿಸುವ ಮುಖಾಂತರ ಊರನ್ನು ಪ್ರದಕ್ಷಿಣೆ ಹಾಕಿ ಬಿಡುತ್ತದೆ