ಬಾರ್ ಸ್ಥಳಾಂತರಕ್ಕೆ ಒತ್ತಾಯಿಸಿ ಜು.೧೯ ರಂದು ಪ್ರತಿಭಟನೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೧೭; ಇಲ್ಲಿನ ವಿನೋಬ ನಗರ, 4ನೇ ಮುಖ್ಯ ರಸ್ತೆಯಲ್ಲಿರುವ ಕೆ.ಎಸ್.ವೈನ್ ಲ್ಯಾಂಡ್ ಸ್ಥಾಳಾಂತರಿಸುವುದಕ್ಕಾಗಿ ನಿರಂತರವಾಗಿ ಸುಮಾರು ಬಾರಿ ಅಬಕಾರಿ ಇಲಾಖೆಯ ಗಮನಕ್ಕೆ ತಂದರೂ ಸಹ ಇದಕ್ಕೆ ಕಿವಿಗೊಡದೆ ನಿರ್ಲಕ್ಷ ವಹಿಸಿದ್ದಾರೆ ಈ ಕೂಡಲೇ ಬಾರ್ ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿ ಜು.೧೯ ರಂದು ಬೆಳಗ್ಗೆ ೧೧.೩೦ ಕ್ಕೆ ಬಾರ್ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ವಿನೋಬನಗರ ನಿವಾಸಿಯಾದ ಅನುಪಮ ರವಿಕುಮಾರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಮಧ್ಯದ ಅಂಗಡಿಯು ದಾವಣಗೆರೆ ಸಿಟಿ, ವಿನೋಬ ನಗರ. 4ನೇ ಮುಖ್ಯ ರಸ್ತೆ ಹೆಬ್ಬಾಗಿನಲ್ಲಿದು, ಈ ರಸ್ತೆಯು ವಿನೋಬ ನಗರ, ಯಲ್ಲಮ್ಮ ನಗರ, ಶಾಂತಿ ನಗರಕ್ಕೆ ಹೋಗುವ ನಿವಾಸಿಗಳಿಗೆ ಬಹಳಷ್ಟು ತೊಂದರೆಗಳಾಗುತ್ತಿವೆ.   ಈ ಅಂಗಡಿಯು ಹೆಬ್ಬಗಿಲಿನಲ್ಲಿರುವ ಕಾರಣ ಮದ್ಯಪಾನ ಸೇವಿಸುವವರು ರಸ್ತೆಯ ಮೇಲೆ, ರಸ್ತೆಯ ಬದಿಗೆ ಕುಡಿದು  ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುವುದು. ಹಾಗೂ ಮದ್ಯಪಾನದ ನಶೆಯಲ್ಲಿ ಪರಸ್ಪರ ಜಗಳ ಮಾಡಿ  ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತದೆ ಎಂದರು.ಇದಲ್ಲದೇ ಕುಡಿತದ ನಶೆಯಲ್ಲಿ ಅಕ್ಕ ಪಕ್ಕ ಇರುವಂತಹ ವಾಸ ಸ್ಥಳಗಳ ಮುಂದೆ ಮೂತ್ರ ವಿಸರ್ಜನೆ ಮಾಡುವುದು, ವಾಂತಿ ಮಾಡುವುದು ಮನೆಯಲ್ಲಿರುವ ವಿದ್ಯಾರ್ಥಿಗಳಿಗೆ ಇದರಿಂದ ಬಹಳ ತೊಂದರೆಯಾಗುತ್ತದೆ. ಹಾಗೂ ಅಕ್ಕ ಪಕ್ಕದ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಮನೆಯಿಂದ ಹೊರಗೆ ಬರಲು ಇರಿಸು ಮುರುಸಾಗಿರುತ್ತದೆ. ಇದಲ್ಲದೇ ನಶೆಯಲ್ಲಿ ತಮ್ಮ ವಾಹನಗಳನ್ನು ಅಕ್ಕ ಪಕ್ಕದ ಮನೆಗಳ ಮುಂದೆ ನಿಲ್ಲಿಸಿ ತೊಂದರೆ ಕೊಡುವುದು ಸಾಮಾನ್ಯವಾಗಿದೆ ಎಂದು ಆರೋಪಿಸಿದರು.ಈ ಹಿಂದೆ  ಬಡಾವಣೆ ಪೊಲೀಸ್ ಠಾಣೆಯಲ್ಲಿ ಖುದ್ದು ಈ ಮದ್ಯದ ಅಂಗಡಿ ಮಾಲೀಕರು  ಅಂಗಡಿಯನ್ನು ಸ್ಥಾಳಾಂತರಿಸುವುದಾಗಿ ಲಿಖಿತ ರೂಪದಲ್ಲಿ ಪತ್ರ ನೀಡಿದ್ದರು. ಆದರೂ ಸಹ ಅಬಕಾರಿ ಇಲಾಖೆಯವರು ಈ ಮಧ್ಯದ ಅಂಗಡಿಯನ್ನು ಸ್ಥಳಾಂತರಿಸದೆ ಪರವಾನಿಗೆಯನ್ನು ನವೀಕರಿಸಿದ್ದಾರೆ. ಆದುದರಿಂದ ಜು.19 ರಂದು ಬೆಳಗ್ಗೆ 11-30ಕ್ಕೆ ದಾವಣಗೆರೆ ಸಿಟಿ, ವಿನೋಬ ನಗರ, 4ನೇ ಮುಖ್ಯ ರಸ್ತೆಯನ್ನು ರಸ್ತೆ ತಡೆ ಮಾಡುವುದರ ಮೂಲಕ ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದೇವೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ವಿಜಯಲಕ್ಷ್ಮೀ ನಿರಂಜನ್,ಭಾಗೀರಥಿ ಪಾಂಡುರಂಗ,ಸರೋಜ ವಿಜಯಕುಮಾರ್, ಷಂಷದ್ ಸೈಯದ್ ಸೈಫುಲ್ಲಾ,ನಿವೇದಿತಾ ಸಚ್ಚಿನ್,ವಿಜಯಮ್ಮ ಶೀಲವಂತ್ ಉಪಸ್ಥಿತರಿದ್ದರು.