ಎಸ್ ಜೆವಿಪಿ ಕಾಲೇಜಿನ‌ ಮುಂಭಾಗದ ರಸ್ತೆ ದುರಸ್ಥಿಗೆ ಒತ್ತಾಯ
ಸಂಜೆವಾಣಿ ವಾರ್ತೆಹರಿಹರ. ಜು.೧೭;  ನಗರದ ಪ್ರಮುಖ ರಸ್ತೆಯಾಗಿರುವ ಬೀರೂರು ಸಮ್ಮಸ್ಸಗಿ ರಾಜ್ಯ ಹೆದ್ದಾರಿಯಲ್ಲಿ ಬರುವ ಎಸ್ ಜೆವಿಪಿ ಕಾಲೇಜಿನ ಮುಂಭಾಗದಲ್ಲಿ ಮಳೆ ಬಂದರೆ ಸಾಕು ಇಲ್ಲಿನ ವಿದ್ಯಾರ್ಥಿಗಳಿಗೆ ಮತ್ತು ಪೊಷಕರಿಗೆ, ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತದೆ,ಕಾಲೇಜಿನ ಮುಂದೆ ಪಿಡ್ಲ್ಯೂಡಿ  ಇಲಾಖೆಯವರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳದೆ ಇರುವುದರಿಂದ ಅನೇಕ ತೊಂದರೆಗಳು ಉಂಟಾಗುತ್ತವೆ ನಗರದ ಮಧ್ಯದಲ್ಲಿ  ಹಾದು ಹೊಗಿರುವ ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹಗಳ ಸಂಚಾರ ಮಾಡುತ್ತಿದ್ದು ಮಳೆಗಾಲದಲ್ಲಿ ರಸ್ತೆಯಲ್ಲಿ ಓಡಾಡುವ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಕೆಸರಿನ ಸಿಂಚನವಾಗುತ್ತಿದೆ,ಜೊತೆಗೆ ತೆರೆದ ಚರಂಡಿಯಲ್ಲಿ ಮಾಂಸದ ಅಂಗಡಿಗಳ ತ್ಯಾಜ್ಯ ,ಮನೆಗಳಲ್ಲಿನ ಕಸ ತಂದು ಸುರಿಯುವುದು ಸಾಮಾನ್ಯ ಆಗಿದೆ, ಈ ಚರಂಡಿಯಲ್ಲಿ‌ ಸತ್ತ ಪ್ರಾಣಿಗಳನ್ನು ತಂದು ಹಾಕುವುದು ಪ್ಲಾಸ್ಟಿಕ್ ಚೀಲಗಳಲ್ಲಿ ಕಸ ಸುರಿಯುವುದನ್ನು ನಿರಂತರವಾಗಿ ಮಾಡಲಾಗುತ್ತಿದೆ.  ಸಿ.ಸಿ ರಸ್ತೆ ಮಾಡುವ ಮುಂಚೆ ರಸ್ತೆಯ ಎರಡು ಬದಿಯಲ್ಲಿ ಸಿ.ಸಿ ಕಾಲುವೆಗಳನ್ನು ಮಾಡಬೇಕು ಎಂಬುದನ್ನು ಸ್ಥಳಿಯ ಅಧಿಕಾರಿಗಳು ಮರೆತಂತಾಗಿದೆ. ಮಾರಕ ಡೆಂಘಿ ಮತ್ತು ಕಾಲರ ಇರುವ ಈಗಿನ ವಾತವರಣದಲ್ಲಿ ನೈರ್ಮಲ್ಯತೆ ಇಲ್ಲಿ ಮರಿಚಿಕೆ ಆಗಿದ್ದು  ಈ ರಸ್ತೆಯಲ್ಲಿ ಎಸ್ ಜೆವಿಪಿ ವಿದ್ಯಾಸಂಸ್ಥೆ ಇದ್ದು ಇಲ್ಲಿನ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಆಗುತ್ತಿರುವ ಕಾರಣ ಹರಿಹರ ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆಯವರು ತಕ್ಷಣವೇ ಈ ಬಗ್ಗೆ ಗಮನವನ್ನು ಹರಿಸಿ ಸಮಸ್ಯೆಯನ್ನು ಪರಿಹರಿಸಬೇಕೆಂದು ಒತ್ತಾಯಿಸಿದ್ದಾರೆ.