ಮಾಸಿಕ ಪಿಂಚಣಿ ಹೆಚ್ಚಿಸುವಂತೆ ವಿಕಲಚೇತನರ ಪಾಲಕರ ಒಕ್ಕೂಟದಿಂದ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಸೆ.28 ವಿಕ¯ಚೇತನರ ಮಾಸಿಕ ಪಿಂಚಣಿ 10ಸಾವಿರ ರೂ.ಗಳಿಗೆ ಹೆಚ್ಚಿಸಬೇಕೆಂದು ಆಗ್ರಹಿಸಿ, ಪಟ್ಟಣದ ಬಸವೇಶ್ವರ ವೃತ್ತದಲ್ಲಿ, ಅಂಗವಿಕಲರ ಪಾಲಕರ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಸಿ, ಪದಾಧಿಕಾರಿಗಳಿಂದ ತಹಸೀಲ್ದಾರ್‍ರಿಗೆ ಮನವಿಪತ್ರ ಸಲ್ಲಿಸಿದರು.
ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ್ ಮಾತನಾಡಿ, ಬೇರೆಲ್ಲ ರಾಜ್ಯಗಳಲ್ಲಿ ಅಂಗವಿಕಲರಿಗೆ 6ಸಾವಿರ ರೂ.ಗಳ ತಿಂಗಳ ವೇತನ ನೀಡಲಾಗುತ್ತಿದೆ.  ಬುಂದಿಮಾಂಧ್ಯ ಮಕ್ಕಳ ಪೋಷಕರಿಗೆ 16ಸಾವಿರ ರೂ.ಗಳನ್ನು ಕೊಡುತಿದ್ದಾರೆ, ಅದೇ ಕರ್ನಾಟಕದಲ್ಲಿ ಕೇವಲ 800ರಿಂದ 2ಸಾವಿರ ರೂ.ಗಳವರೆಗೂ ವಿವಿಧ ರೀತಿಯಲ್ಲಿ ಫೆನ್ಸನ್‍ಗಳನ್ನು ನೀಡುತ್ತಿದ್ದಾರೆ. ಇದರಿಂದ ಜೀವನ ನಿರ್ವಹಣೆ ಬೆಲೆ ಏರಿಕೆಯಲ್ಲಿ ಕಷ್ಟಸಾಧ್ಯವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಮತ್ತು ಮಹಿಳೆಯರಿಗಾಗಿ ಗ್ಯಾರಂಟಿಗಳ ಯೋಜನೆಯಲ್ಲಿ ಹಣ ನೀಡಲಾಗುತ್ತಿದೆ. ಅದೇ ಸರ್ಕಾರಗಳು ಅಂಗವಿಕಲರನ್ನು ಸಂಪೂರ್ಣ ನಿರ್ಲಕ್ಷಿಸಿವೆ ಎಂದು ದೂರಿದರು. ಅಲ್ಲದೆ, ಕಳೆದೊಂದು ವರ್ಷದಿಂದ ಫೆನ್ಸನ್ ನಿಂತಿದ್ದು, ಆ ಹಣ ಮತ್ತೇ ಬರುವುದು ಕಷ್ಟವಾಗುತ್ತದೆ. ನಿಲ್ಲಿಸದಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಗ್ರಾ.ಪಂ.ಗಳಲ್ಲಿ ಅಂಗವಿಕಲರ ಕಲ್ಯಾಣಕ್ಕಾಗಿ ಇರುವ ಅನುದಾನವನ್ನು, ಇತರೆ ಕೆಲಸಗಳಿಗೆ ಬಳಸುತ್ತಿರುವುದನ್ನು ಖಂಡಿಸುತ್ತೇವೆ. ಶಾಸಕರು ಕಾಳಜಿ ವಹಿಸಿ ಅಂಗವಿಕಲರ ಕಲ್ಯಾಣಕ್ಕಾಗಿಯೇ ಇರುವ ಮೊತ್ತವನ್ನು ಅವರಿಗಾಗಿಯೇ ಬಳಸಬೇಕು ಎಂದು ಒತ್ತಾಯಿಸಿದರು. ಇತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.
ಉಪತಹಸೀಲ್ದಾರ್ ಶಿವಕುಮಾರ್ ಮನವಿ ಸ್ವೀಕರಿಸಿದರು. ಬೆಂಬಲ ನೀಡಿ ಪ್ರಾಂತರೈತ ಸಂಘದ ಕೊಟಿಗಿ ಮಲ್ಲಿಕಾರ್ಜುನ, ಜನವಾದಿ ಮಹಿಳಾ ಸಂಘದ ಸರ್ದಾರ್ ಹುಲಿಗೆಮ್ಮ, ರಾಜ್ಯ ರೈತ ಸಂಘದ ಶೀಗೇನಹಳ್ಳಿ ನಾಗರಾಜ್, ಕೊರವರ ಗಂಗಾಧರ ಮಾತನಾಡಿದರು. ಒಕ್ಕೂಟದ ತಾಲೂಕು ಕಾರ್ಯದರ್ಶಿ ಡಿ.ಕಲೀಲ್‍ಭಾಷ, ತಾಲೂಕು ಅಧ್ಯಕ್ಷೆ ಬಿ.ರೇಣುಕಾ, ಪ್ರಮುಖರಾದ ಜವಳಿ ಕೊಟ್ರೇಶಪ್ಪ, ಸೋಗಿ ಬಸವರಾಜ್, ಸಾಲ್ಮೂರಳ್ಳಿ ಗಂಗಮ್ಮ, ಅಂಕಸಮುದ್ರದ ನಾಗರಾಜ್, ಮಾರುತಿ, ಬಸವರಾಜ್ ಇದ್ದರು.