ರಾಷ್ಟ್ರೀಯ ಮಾಧ್ಯಮ ಪ್ರೌಡ ಶಾಲೆಯ ನಿರ್ಮಾಣಕ್ಕೆ  ಶಾಸಕರಿಂದ ಭೂಮಿ ಪೂಜೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಸೆ.28 ತಾಲೂಕಿನ ಚಿಲುಗೋಡು ಗ್ರಾಮದ ಹೊರವಲಯದಲ್ಲಿ ರಾಷ್ಟ್ರೀಯ ಮಾಧ್ಯಮ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಕೆ.ನೇಮಿರಾಜ್‍ನಾಯ್ಕ್ ಗುರುವಾರ ಭೂಮಿ ಪೂಜೆ ನೆರವೇರಿಸದರು.
ಬಳಿಕ ಅವರು ಮಾತನಾಡಿ, ಇಲ್ಲಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಹಾಗೂ ಸರ್ಕಾರಿ ಪ್ರೌಢಶಾಲೆಯ ಉನ್ನತೀಕರಣದ ಹಿನ್ನೆಲೆಯಲ್ಲಿ, ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿಯಲ್ಲಿ 1.32 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಕೊಠಡಿಗಳು ನಿರ್ಮಾಣವಾಗಲಿವೆ ಎಂದರು.
ಚಿಲುಗೋಡು ಗ್ರಾಮದ ಶಕ್ತಿ ದೇವತೆಯಾದ ಕರಿಯಮ್ಮ ದೇವಿಯ ದೇಗುಲಕ್ಕೆ ಸೇರಿದ ಭೂಮಿಯಲ್ಲಿ, 5ಎಕರೆ ಭೂಮಿಯನ್ನು ಶಾಲೆಗಾಗಿ ಬಳಕೆಮಾಡಿಕೊಳ್ಳಲಾಗುತ್ತೆ. ಕಾಮಗಾರಿ ಸಂಪೂರ್ಣ ಗುಣಮಟ್ಟದಿಂದ ಕೂಡಿರಬೇಕು. ಗುಣಮಟ್ಟದ ಸಾಮಗ್ರಿಗಳ ಬಳಕೆಯಾಗಬೇಕು ಎಂದು ನಿರ್ವಹಣೆಯ ಹೊಣೆ ಹೊತ್ತಿರುವ ಗುತ್ತಗೆದಾರ ಇಂಜಿನಿಯರ್‍ಉಮಾಪತಿಗೆ ತಿಳಿಸಿದರು.
ಪುರಸಭೆ ಸದಸ್ಯ ಜನ್ನುನಾಗರಾಜ್, ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಮುಖಂಡರಾದ ಹೋಟಲ್ ಸಿದ್ದರಾಜು, ಬೋವಿ ಬಸವರಾಜ್, ಮಾಲವಿ ಬಸವರಾಜ್ ಜಡಿಯನ್ನವರ ಭೀಮಪ್ಪ, ಕೋರಿ ಸಂಗಪ್ಪ, ಶರಣು, ಮಂಜುನಾಥ, ಎಂ.ವೀರಪ್ಪ,ಬಿಆರ್‍ಸಿ ಸಮನ್ವಯಾಧಿಕಾರಿ ಪ್ರಭಾಕರ್ ಹಾಗೂ ಶಾಲಾ ಸಿಬ್ಬಂದಿ ಇದ್ದರು.