ಬಳ್ಳಾರಿಯಲ್ಲಿ ಸಾಂಸ್ಕೃತಿಕ ಕಲಾ ಸೌರಭ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.28: ನಗರದ ಶ್ರೀ ಮಾರುತಿ ತೊಗಲುಗೊಂಬೆ ಕಲಾಟ್ರಸ್ಟ್ ನಿಂದ ಇಲ್ಲಿನ  ಬ್ಯಾಂಕರ್ಸ್ ಕಾಲೋನಿ ಪಾರ್ಕ್ ನ ಬಯಲು ವೇದಿಕೆಯಲ್ಲಿ  ನಿನ್ನೆ ಸಾಂಸ್ಕೃತಿಕ ಕಲಾ ಸೌರಭ ನಡೆಯಿತು.
ಕಾರ್ಯಕ್ರಮದಲ್ಲಿ ವೀರೇಶ್ ದಳವಾಯಿ ಇವರಿಂದ ವಚನಗಾಯನ, ಹೆಚ್ ತಿಪ್ಪೇಸ್ವಾಮಿ ರಂಗಗೀತೆ ಗಾಯನ, ಪಿ.ಸಣ್ಣ ಹೊನ್ನೂರ್ ಸಾಬ್ ಶಂಕರ ಬಂಡೆ ಅವರಿಂದ  ಜಾನಪದ ಹಾಡುಗಾರಿಕೆ ನಡೆಯಿತು.
ಗಣೇಶ ತಂಡದಿಂದ ರಾವಣ ಸಂಹಾರ ತೊಗಲು ಗೊಂಬೆಯಾಟ ಪ್ರದರ್ಶನಗೊಂಡಿತು.
ಕಾರ್ಯಕ್ರಮವನ್ನು ಪತ್ರಕರ್ತ ಕೆ. ಎಂ ಮಂಜುನಾಥಸ್ವಾಮಿ ಮದ್ದಲೆ ಬಾರಿಸುವದರ ಮೂಲಕ ಉದ್ಘಾಟಿಸಿ, ಜನಸಂದಣಿ ನೋಡಿ ಪ್ರತಿ ತಿಂಗಳು ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲಿ ನಡೆದರೆ ಕಲಾ ಪ್ರೊತ್ಸಾಹ ಖಂಡಿತವಾಗಿ ಸಿಗುತ್ತೆ ಎಂದರು.
ಯಲ್ಲನಗೌಡ ಶಂಕರ ಬಂಡೆ ಅಧ್ಯಕ್ಷತೆವಹಿಸಿದ್ದರು. ಅತಿಥಿಗಳಾಗಿ. ಹೆಚ್. ತಿಪ್ಪೆಸ್ವಾಮಿ ಹೆಚ್ .ಪಾಂಡುರಂಗಪ್ಪ, ಎಂ.ಎಸ್.ಮಹಾಂತಯ್ಯಾ ನಿವೃತ್ತ ಬ್ಯಾಂಕ್ ಸೌಕರರು ಭಾಗವಹಿಸಿದ್ದರು.
ಸುಬ್ಬಣ್ಣ ಅಧ್ಯಕ್ಷರು ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ಇವರು ಕಾರ್ಯಕ್ರಮ ನಿರೂಪಣೆ ಮಾಡಿ,  ವಂದನಾರ್ಪಣೆ ಸಲ್ಲಿಸಿದರು.