ಸನ್ಮಾನ ಸಮಾರಂಭ
ಲಕ್ಷ್ಮೇಶ್ವರ,ಸೆ28: ತಾಲೂಕಿನ ಗೊಜನೂರು ಗ್ರಾಮದಲ್ಲಿ ಕೃಷಿಕ ಸಮಾಜ ನವದೆಹಲಿ ರಾಷ್ಟ್ರೀಯ ರೈತ ಸಂಘಟನೆ ತಾಲೂಕ ಘಟಕದ ಅಧ್ಯಕ್ಷರಾದ ಚೆನ್ನಪ್ಪ ಷಣ್ಮುಖಿಯವರ ನಿವಾಸದಲ್ಲಿ ತೋಟಗಾರಿಕಾ ಇಲಾಖೆಯ ನಿವೃತ್ತ ಹಿರಿಯ ಸಹಾಯಕ ನಿರ್ದೇಶಕರಾದ ಸುರೇಶ್ ಕುಂಬಾರ್ ಅವರನ್ನು ವಿಶಿಷ್ಟವಾದ ರೀತಿಯಲ್ಲಿ ಸನ್ಮಾನಿಸಲಾಯಿತು.
ರೈತ ಮುಖಂಡ ಚೆನ್ನಪ್ಪ ಷಣ್ಮುಖಿ ಅವರು ತಮ್ಮ ಜಮೀನಿನಲ್ಲಿ ಬೆಳೆದ ಹೆಸರು ಉದ್ದು ಗುರೆಳ್ಳು ಅಲಸಂದಿ ಮತ್ತು ಶೇಂಗಾ ಇವುಗಳನ್ನು ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ತಾರಾಮಣಿ ಅವರು ಮಾತನಾಡಿ ಸರ್ಕಾರಿ ಸೇವೆಯಿಂದ ನಿವೃತ್ತರಾಗುವ ಅಧಿಕಾರಿಗಳಿಗೆ ಫಲ ಪುಷ್ಪ ನೀಡಿ ಶಾಲುಹೊದಿಸಿ ಸನ್ಮಾನಿಸುವದು ಸರ್ವೇಸಾಮಾನ್ಯ ಆದರೆ ರೈತ ಚೆನ್ನಪ್ಪ ಅವರು ಜನಾನುರಾಗಿ ಮತ್ತು ರೈತ ಮಿತ್ರನಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಸುರೇಶ್ ಕುಂಬಾರ್ ಅವರನ್ನು ತಮ್ಮ ಜಮೀನಿನಲ್ಲಿಯೇ ಬೆಳದ ದವಸ ಧಾನ್ಯಗಳನ್ನು ನೀಡಿ ಸತ್ಕಾರ ಮಾಡಿರುವುದು ಅತ್ಯಂತ ವಿಶೇಷ ಎಂದರು.
ನಿವೃತ್ತ ಅಧಿಕಾರಿ ಸುರೇಶ್ ಕುಂಬಾರ ಅವರನ್ನು ಚೆನ್ನಪ್ಪ ಷಣ್ಮುಖಿ ದಂಪತಿಗಳು ಮತ್ತು ಅಧಿಕಾರಿಗಳು ಈ ವಿಶೇಷ ಕಾರ್ಯಕ್ರಮ ಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕರಾದ ಸ್ಪೂರ್ತಿ ಸಹಾಯಕ ಕೃಷಿ ನಿರ್ದೇಶಕರಾದ ರೇವಣಪ್ಪ ಮನಗೂಳಿ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರಾದ ರಮೇಶ ಹಾವರೆಡ್ಡಿ ಎಸ್‍ಬಿಐನ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕರಾದ ಸುಬ್ಬಾರೆಡ್ಡಿ ಹೆಸ್ಕಾಂ ಅಧಿಕಾರಿ ಗುರುರಾಜ ಸೇರಿದಂತೆ ನಿವೃತ್ತ ಅಧಿಕಾರಿ ಸಿಪಿ ಮಾಡಳ್ಳಿ ಚಂದ್ರ ಗೌಡ್ರು ದೊಡ್ಡಗೌಡ್ರ ಶಿವಪುತ್ರಪ್ಪ ತಾರಿಕೊಪ್ಪ ನಾಗಪ್ಪ ಶಿವಶಿಂಪೇರ ರುದ್ರಪ್ಪ ಮುರುಳಿ ಶಿವಪ್ಪ ಶಿವಶಿಂಪೇರ ರೈತ ಸಂಘಟನೆಯ ರಾಜ್ಯಾಧ್ಯಕ್ಷೆ ಮಾಣಿಕ್ಯ ಚಿಲ್ಲೂರು ಸೇರಿದಂತೆ ಅನೇಕರಿದ್ದರು.