ಭದ್ರಾ ಡ್ಯಾಂನಿಂದ ದಿನ  600 ಕ್ಯೂಸೆಕ್ಸ್ ನಷ್ಟು ನೀರು ಪೋಲು
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.18: ಭದ್ರಾ ಡ್ಯಾಂನಿAದ ದಿನಾಲು ಸುಮಾರು 600 ಕ್ಯೂಸೆಕ್ಸ್ ನಷ್ಟು ನೀರು ಪೋಲಾಗುತ್ತಿದ್ದು ಕೂಡಲೇ ಶಾಶ್ವತವಾಗಿ ನೀರು ನಿಲ್ಲಿಸುವ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಚಿವ ಎಂ.ಪಿ.ರೇಣುಕಾಚಾರ್ಯ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸುಮಾರು ಸಾವಿರ ಕೆರೆಗಳಿಗೆ ನೀರು ತುಂಬಿಸುವಷ್ಟು ನೀರು ಪೋಲಾಗಿ ಹೋಗಿದೆ. ದಿನಂಪ್ರತಿ 4 ರಿಂದ 5 ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಹರಿದು ಹೋಗಿತ್ತು. ನಂತರ ನಾವು ಹೋರಾಟ ಮಾಡುತ್ತೇವೆಂದು ಅಧಿಕಾರಿಗಳು ರಾತ್ರೋರಾತ್ರಿ ತೇಪೆ ಹಚ್ಚುವ ಕೆಲಸ ಮಾಡಿ, ನೀರು ಪೋಲಾಗುತ್ತಿರುವ ಗೇಟನ್ನು ಸಂಪೂರ್ಣ ಮುಚ್ಚಿದ್ದೇವೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದರು. ಆದರೆ ನೀರು ಸಂಪೂರ್ಣವಾಗಿ ಬಂದ್ ಆಗದೇ ಈಗಲೂ ಪ್ರತಿದಿನ 600 ಕ್ಯೂಸೆಕ್ಸ್ ನಷ್ಟು ನದಿಗೆ ಹರಿಯುತ್ತಿದೆ ಎಂದು ಆರೋಪಿಸಿದರು.ಮೊದಲೇ 2 ಬೆಳೆ ಸರಿಯಾಗಿ ಮಳೆಬೆಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಇದರ ಚಿಂತೆ ಇಲ್ಲದೇ ಅಧಿಕಾರಿಗಳು ಡ್ಯಾಂ ನಿರ್ಚಹಣೆಯಲ್ಲಿ ನಿರ್ಲಕ್ಷ ತೊರಿದ್ದಾರೆ. ಸರ್ಕಾರಕ್ಕೂ ರೈತನ ಸಮಸ್ಯೆಗಳನ್ನು ಕೇಳುವುದಕ್ಕೆ ಸಮಯವಿಲ್ಲದೇ ಬರಿ ಗ್ಯಾರಂಟಿಗಳಿಗೆ ಹಣ ಹೊಂದಿಸುವುದಕ್ಕೆ ಹೆಣಗಾಡುತ್ತಿದೆ. ಇನ್ನಾದರು ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು. ಭದ್ರ ಡ್ಯಾಂ ತುಂಬಿದರೆ ಮಾತ್ರ ಅಪ್ಪರ್ ಭದ್ರಕ್ಕೆ ನೀರು ಬಿಡಬೇಕು ಆದರೆ ಡ್ಯಾಂ ಇನ್ನೂ ಭರ್ತಿ ಆಗದಿದ್ದರು ಕಳ್ಳತನದಲ್ಲಿ ಅಪ್ಪರ್ ಭದ್ರಗೆ ನೀರು ಬಿಡಲಾಗಿದೆ. ಇದು ಸರಿಯಲ್ಲ ಅಧಿಕಾರಿಗಳು ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಡ್ಯಾಂನ ನೀರು ಪೋಲಾಗುವುದನ್ನು ತಡೆಯಲು, ಗೇಟ್ಗಳ ದುರಸ್ಥಿ ಮಾಡಿಸಲು, ಸಿಮೆಂಟ್ ಬೆಡ್‌ಗಳನ್ನು ನಿರ್ಮಿಸಲು ಒಟ್ಟಾರೆ ಡ್ಯಾಂನ ದುರಸ್ಥಿ ಕಾರ್ಯಕ್ಕೆ ಸರ್ಕಾರ ಕೂಡಲೇ 150 ಕೋಟಿ ಹಣ ಬಿಡುಗಡೆ ಮಾಡಿ ಶಾಶ್ವತ ಪರಿಹಾರ ಕಾರ್ಯ ಮಾಡಬೇಕು. ಇಲ್ಲಾವಾದರೆ ಈ ಬಾಗದ ರೈತರು ರಾಷ್ಟಿçÃಯ ಹೆದ್ದಾರಿ ಬಂದ್ ಮಾಡುವುದರÀ ಮೂಲಕ ಹಂತ ಹಂತವಾಗಿ ಉಗ್ರ ಹೋರಾಟ ನಡೆಸಲಾಗುವುದು ಹಾಗೂ ನ್ಯಾಯಂಗ ತನಿಖೆಗೂ ಒತ್ತಾಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.