ಮೋಮಿನಪೂರ ಹಾಜಿವಾಡಿಯಲ್ಲಿ ಸಂಭ್ರಮದ ಮೋಹರಂ ಆಚರಣೆ
ಕಲಬುರಗಿ:ಜು.17: ತ್ಯಾಗ, ಭಾವೈಕ್ಯತೆಯ ಸಂಕೇತವಾದ ಮೋಹರಂ ಹಬ್ಬವನ್ನು ನಗರದ ಮೋಮಿನಪುರ ಹಾಜಿವಾಡಿ ಬಡಾವಣೆಯಲ್ಲಿ ಸಂಭ್ರಮದಿಂದ ಬುಧವಾರ ಆಚರಿಸಲಾಯಿತು. ಇಮಾಮಸಾಬ್ ಮತ್ತು ಲಾಲ್ ಹೈದರ್ ಅಲೈಪೀರ್‍ಗಳನ್ನು ಸ್ಥಾಪಿಸಿ, ಮೆರವಣಿಗೆ ಮಾಡಲಾಯಿತು. ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಅಲೈಪೀರ್‍ಗಳಿಗೆ ಗೌರವಿಸಲಾಯಿತು.
ಇಸ್ಲಾಂ ಭಾಂದವರಿಗೆ ಶುಭಾಷಯ ಕೋರಲಾಯಿತು. ಈ ಸಂದರ್ಭದಲ್ಲಿ ಮಹಮ್ಮಸ್ ಉಸ್ಮಾನ್, ಮಹಮ್ಮದ್ ಅಫ್ಜಲ್. ನಜೀರ್ ಅಹಮ್ಮದ್, ಓವೆಜಾ ಅಹಮ್ಮದ್, ಎಚ್.ಬಿ.ಪಾಟೀಲ, ಡಾ.ಸುನೀಲಕುಮಾರ ಎಚ್.ವಂಟಿ, ಅಸ್ಲಾಂ ಶೇಖ್, ಬಸಯ್ಯಸ್ವಾಮಿ ಹೊದಲೂರ, ಶಿವಯೋಗೆಪ್ಪಾ ಎಸ್.ಬಿರಾದಾರ, ದೇವೇಂದ್ರಪ್ಪ ಗಣಮುಖಿ ಸೇರಿದಂತೆ ಇನ್ನಿತರರಿದ್ದರು.