ಮನೆ ಬೀಗ ಮುರಿದು 5.20 ಲಕ್ಷ ನಗನಾಣ್ಯ ಕಳವು
ಕಲಬುರಗಿ,ಜು.17-ಮನೆ ಬೀಗ ಮುರಿದು 5.20 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿಕೊಂಡು ಹೋಗಿರುವ ಘಟನೆ ನಗರದ ಅಬೂಬಕರ್ ಕಾಲೋನಿಯಲ್ಲಿ ನಡೆದಿದೆ.
ಸೈಯದ್ ಯುಸುಫ್ ಎಂಬುವವರ ಮನೆಯೇ ಕಳವಾಗಿದ್ದು, ಇವರು ಕುಟುಂಬ ಸಮೇತ ಶಹಾಪುರ ತಾಲ್ಲೂಕಿನ ಮಹಲ್ ರೋಜ ಗ್ರಾಮಕ್ಕೆ ಮೊಹರಂ ಹಬ್ಬಕ್ಕೆಂದು ಹೋದಾಗ ಮನೆ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.
ಮನೆ ಬೀಗ ಮುರಿದ ಕಳ್ಳರು ಮನೆಯೊಳಗಿದ್ದ 1.75 ಲಕ್ಷ ರೂ.ಮೌಲ್ಯದ 2ವರೆ ತೊಲೆ ಬಂಗಾರದ ನೆಕ್ಲೆಸ್, 1.05 ಲಕ್ಷ ರೂ.ಮೌಲ್ಯದ 1 ವರೆ ತೊಲೆ ಬಂಗಾರದ ನೆಕ್ಲೆಸ್, 35 ಸಾವಿರ ರೂ.ಮೌಲ್ಯದ 6 ಗ್ರಾಂ.ಬಂಗಾರದ ಸುತ್ತುಂಗರ, 35 ಸಾವಿರ ರೂ.ಮೌಲ್ಯದ 6 ಗ್ರಾಂ.ಬಂಗಾರದ ಸುತ್ತುಂಗರ, 35 ಸಾವಿರ ರೂ.ಮೌಲ್ಯದ 6 ಗ್ರಾಂ.ಬಂಗಾರದ ಕಿವಿಯಲ್ಲಿಯ ರಿಂಗ್, 35 ಸಾವಿರ ರೂ.ಮೌಲ್ಯದ 6 ಗ್ರಾಂ.ಬಂಗಾರದ ಕಿವಿಯಲ್ಲಿಯ ರಿಂಗ್, 1 ಲಕ್ಷ ರೂ.ನಗದು ಸೇರಿ 5.20 ಲಕ್ಷ ರೂ.ನಗನಾಣ್ಯ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಸೈಯದ್ ಯುಸುಫ್ ಅವರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.