ದಾದಾ ಅಲಿ ಅಬ್ಬಾಸ್ ಜಾತ್ರಾ ಮಹೋತ್ಸವ
ಕಾಳಗಿ,ಜು.17-ತಾಲೂಕಿನ ಸುಕ್ಷೇತ್ರ ಗೊಟೂರ್ ಗ್ರಾಮದ ದಾದಾ ಅಲಿ ಅಬ್ಬಾಸ ಜಾತ್ರಾ ಮೊಹೋತ್ಸವವು ಅದ್ದೂರಿಯಾಗಿ ಆಚರಿಸಲಾಯಿತು.
ಅಬ್ಬಾಸ ಅಲಿ ಮುತ್ಯಾ ಅವರ ಮನೆಯಿಂದ ಜಾಮಿಯಾ ಮಸ್ಜಿದ ಮುಖಾಂತರ ಶ್ರೀ ಗಂಧ ಸಂದಲ ಉತ್ಸವ ನಡೆಯಿತು. ಇದೊಂದು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಹಬ್ಬವಾಗಿ ಆಚರಿಸಲಾಯಿತು. ಮಧ್ಯಾಹ್ನ 1 ಘಂಟೆಗೆ ಸಲಾಂ ದರುದ ಶರೀಫ ಮುಖಾಂತರ ಸಂದಾಲ ಗಂಧೋತ್ಸವ ಆಚರಿಸಲಾಯಿತು ಈ ಸಂಧರ್ಭದಲ್ಲಿ ಮಲಕಪ್ಪ ಜಮಾದಾರ, ಅಂಬಣ್ಣ ಆರ್ನತ್ತಿ, ಸಿಧಾರ್ಥ ಸಾಗರ್, ಮಲ್ಲಿಕಾರ್ಜುನ ಸಿಂಗೆ, ಸಾಹೇಬಲಿ ಮಂಗಲಗಿ, ಇಸ್ಮಾಯಿಲ ಪಾಸ್ತಾಪುರ, ಇಮಾಮಸಾಬ್ ಕೊಹಿರ್, ಮುದಾಸಿರ ಕೊಹಿರ್, ಅರಿಪ್ ಕೊಹಿರ್, ಶಬ್ಬೀರ್ ಮಹಾಗಾವ್, ಸುನಿಲ್ ಬುಡನೂರ್, ಸಿದ್ದು ಬುಡ್ಡನೂರ್, ಶಿವಪುತ್ರ ಸುಲೇಪೇಟ, ದತ್ತು ಇನ್ನಿತರರು ಇದ್ದರು.