ಜೂಜಾಟ: 9 ಜನರ ಬಂಧನ
ಕಲಬುರಗಿ,ಜು.17-ನಗರದ ವಿರೇಂದ್ರ ಪಾಟೀಲ ಬಡಾವಣೆಯ 3ನೇ ಹಂತದ ಹನುಮಾನ ದೇವಸ್ಥಾನದ ಗಾರ್ಡ್‍ನಲ್ಲಿ ಕುಳಿತು ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಎಂ.ಬಿ.ನಗರ ಪೊಲೀಸ್ ಠಾಣೆ ಪಿಎಸ್‍ಐ ಕವಿತಾಬಾಯಿ, ಸಿಬ್ಬಂದಿಗಳಾದ ಅಶೋಕ, ಬಸಪ್ಪಾ, ಲಿಂಬಾಜಿ, ಹಣಮಂತ ತೋಟದ ಮತ್ತು ಗುರುರಾಜ ಅವರು ಪಂಚರೊಂದಿಗೆ ದಾಳಿ ನಡೆಸಿ 9 ಜನರನ್ನು ಬಂಧಿಸಿದ್ದಾರೆ.
ಜೂಜಾಟದಲ್ಲಿ ತೊಡಗಿದ್ದ ಬಸವರಾಜ ಪಾಟೀಲ, ಜಗದೇವಪ್ಪ ಹೊಸಗೌಡ, ಕರಣಪ್ಪ ರಾವೂರ, ಬಾಬುರಾವ ಬಿರಾದಾರ, ಶಿವರುದ್ರಪ್ಪ ಗಡ್ಡದ, ಮಲ್ಲಿನಾಥ ಡೊನ್ನೂರು, ಮನೋಹರ ಸುತ್ತಾರ, ಶಂಭುಲಿಂಗಯ್ಯ ನಂದಿಕೋಲ, ಸೂರ್ಯಕಾಂತ ಕಲ್ಲೂರ ಎಂಬುವವರನ್ನು ಬಂಧಿಸಿ 5175 ರೂ.ನಗದು, 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ಎಂ.ಬಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ: ಬಂಧನ
ಹೀರಾಪುರದ ಧರ್ಮಶಾಲೆ ಹಿಂದುಗಡೆ ಇರುವ ಖುಲ್ಲಾ ಜಾಗದಲ್ಲಿ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಅಶೋಕನಗರ ಪೊಲೀಸ್ ಠಾಣೆಯ ಪಿಐ ಅರುಣಕುಮಾರ, ಸಿಬ್ಬಂದಿಗಳಾದ ವೈಜನಾಥ, ಗುರುಮೂರ್ತಿ ಮತ್ತು ಶಿವರಾಜ ಅವರು ದಾಳಿ ನಡೆಸಿ ಹೀರಾಪುರದ ಹಣಮಂತ ಕಬತಿ (42) ಎಂಬಾತನನ್ನು ಬಂಧಿಸಿ 1,170 ರೂ.ನಗದು, ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ ಜಪ್ತಿ ಮಾಡಿದ್ದಾರೆ.