ಬೀಗ ಮುರಿದು ಮನೆಗಳ್ಳತನ:ಅಪಾರ ಪ್ರಮಾಣದ ಚಿನ್ನಾಭರಣ ಅಪಹರಣ
ವಿಜಯಪುರ,ಜು.17:ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಕಾಲೋನಿಯಲ್ಲಿ ಬೀಗ ಹಾಕಿದ್ದ ಮನೆಗಳ್ಳತನ ಮಾಡಿ ಕಳ್ಳರು ಪರಾರಿಯಾಗಿದ್ದಾರೆ.
ಮುದ್ದೇಬಿಹಾಳದ ಮಹಮದ್ ಹುಸೇನ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ.
ಮಹಮ್ಮದ ಹುಸೇನ್ ಕುಟುಂಬದವರು ಮನೆಗೆ ಬೀಗ ಹಾಕಿ ಬೇರೆ ಊರಿಗೆ ತೆರಳಿದ್ದರು. ಇದನ್ನು ಗಮನಿಸಿದ ಕಳ್ಳರು ಸಮಯ ಸಾಧಿಸಿ ಮನೆ ಬೀಗ ಮುರಿದು ಒಳ ನುಗ್ಗಿ ಚಿನ್ನಾಭರಣ, ಬೆಳ್ಳಿಆಭರಣ ಹಾಗೂ ನಗದು ಕದ್ದು ಕದೀಮರು ಪರಾರಿಯಾಗಿದ್ದಾರೆ.
ಸುದ್ದಿ ತಿಳಿದ ತಕ್ಷಣ ಮುದ್ದೇಬಿಹಾಳ ಪೆÇಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಕಳ್ಳರ ಪತ್ತೆಗೆ ಪೆÇಲೀಸರು ಜಾಲ ಬೀಸಿದ್ದಾರೆ.
ಮುದ್ದೇಬಿಹಾಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.