ವಿದ್ಯುತ್ ತಗುಲಿ ಆಟಿಕೆ ವಸ್ತುಗಳ ವ್ಯಾಪಾರಿ ಸಾವು
ವಿಜಯಪುರ,ಜು.17:ಮೊಹರಂ ಹಬ್ಬದ ನಿಮಿತ್ತ ಆಟಿಕೆ ವಸ್ತುಗಳು ಹಾಗೂ ಇತರೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ತಳ್ಳುವ ಗಾಡಿ ವಿದ್ಯುತ್ ಟಿಸಿಗೆ ತಗುಲಿ ವ್ಯಾಪಾರಿ ಸ್ಥಳದಲ್ಲೇ ಮೃತಪಟ್ಟ ಅವಘಡ ನಗರದ ಮೆಹತರ ಮಹಲ್ ಬಳಿ ನಡೆದಿದೆ.
ನಗರದ ಮೊಹಮ್ಮದ್ ಇನಾಂದಾರ್ (40) ಮೃತಪಟ್ಟ ವ್ಯಾಪಾರಿ.
ತಳ್ಳುವ ಗಾಡಿ ಕಬ್ಬಿಣದಾಗಿದ್ದು, ಟಿಸಿಗೆ ತಾಗಿದ ಕಾರಣ ವಿದ್ಯುತ್ ಪ್ರವಹಿಸಿ ಕರೆಂಟ್ ಶಾಕ್ ನಿಂದ ಮೊಹಮ್ಮದ್ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.
ಮೊಹರಂ ಹಬ್ಬದ ಮೆರವಣಿಗೆಯ ಮುಂದೆ ಮೊಹಮ್ಮದ್ ಆಟಿಕೆ ವಸ್ತುಗಳನ್ನು ಮಾರಾಟ ಮಾಡುವ ತಳ್ಳುವ ಗಾಡಿಯೊಂದಿಗೆ ತೆರಳುತ್ತಿದ್ದ
ಈ ವೇಳೆ ಕಾರಿಗೆ ದಾರಿ ಬಿಡುವ ಭರದಲ್ಲಿ ವಿದ್ಯುತ್ ಟಿಸಿಗೆ ತಳ್ಳುವ ಗಾಡಿ ತಾಗಿದ್ದರಿಂದ ವಿದ್ಯುತ್ ಪ್ರವಹಿಸಿ ನೋಡು ನೋಡುತ್ತಿದ್ದಂತೆಯೇ ವ್ಯಕ್ತಿ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದಾನೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಗೋಲಗುಂಬಜ್ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗೋಲಗುಂಬಜ್ ಪೆÇಲೀಸ್ ಠಾಣಾ ವ್ಯಾಪ್ತಿ ಈ ಘಟನೆ ನಡೆದಿದೆ.