ಕೆ.ಯು.ಡಬ್ಲು.ಜೆ ಜಂಟಿ ಸಹಯೋಗದಲ್ಲಿಯೇ ಪತ್ರಿಕಾ ದಿನ ಆಚರಣೆ: ಬಸವರಾಜ ಕಾಮಶೆಟ್ಟಿ
ಬೀದರ್:ಜು.17: ಈ ತಿಂಗಳ 28ರಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಹಾಗೂ ಮಾನ್ಯತೆ ಪಡೆದ ಸಂಪಾದಕರ ಸಂಘಗಳ ಸಹಯೋಗದಲ್ಲಿಯೇ ಈ ವರ್ಷದ ಪತ್ರಿಕಾ ದಿನಾಚರಣೆ ಜರುಗುವುದೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಬಸವರಾಜ ಕಾಮಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಸೋಮವಾರ ಅಶೋಕಕುಮಾರ ಕರಂಜಿ ಅವರು ಪ್ರತ್ಯೇಕ ಪತ್ರಿಕಾ ದಿನಾಚರಣೆ ಆಚರಿಸುವ ಬಗ್ಗೆ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಸಂಗತಿ. ಸೋಮವಾರ ಪತ್ರಿಕಾ ಭವನದಲ್ಲಿ ಜರುಗಿದ ಸಭೆಯಲ್ಲಿ ನಿರ್ಧಾರವಾದಂತೆ ಮೇಲಿನ ಮೂರು ಸಂಘಟನೆಗಳು ಕೂಡಿಕೊಂಡೆ ಪತ್ರಿಕಾ ದಿನಾಚರಣೆ ಆಚರಿಸುವವು. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರನ್ನು ಕರೆಯಿಸಿ ಪತ್ರಿಕಾ ದಿನಾಚರಣೆ ಆಯೋಜಿಸಲು ಸಭೆಯಲ್ಲಿ ಒಮ್ಮತದ ನಿರ್ಧಾರವಾದ ಬಳಿಕ ಕರಂಜಿ ಅವರ ಪ್ರತ್ಯೇಕ ಹೇಳಿಕೆ ಅದು ಅವರ ವಯಕ್ತಿಕ ಹೇಳಿಕೆ ಅಷ್ಟೆ. ಸಂಘಕ್ಕೂ ಅವರ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ. ಡಿ.ಕೆ ಗಣಪತಿ ಅವರನ್ನು ಕೆ.ಯು.ಡನ್ಲು??.ಜೆ ರಾಜ್ಯ ಘಟಕ ಜಿಲ್ಲಾಧ್ಯಕ್ಷರೆಂದು ನೇಮಿಸಿ ಆದೇಶ ಸಹ ಹೊರಡಿಸಿರುವಾಗ ತಾನು ಅಧ್ಯಕ್ಷನೆಂದು ಹೇಳಿಕೊಳ್ಳುತ್ತಿರುವ ಅಶೋಕ ಕರಂಜಿ ಜಿಲ್ಲೆಯ ಪತ್ರಕರ್ತರಲ್ಲಿ ಗೊಂದಲ ಮೂಡಿಸುವುದು ನಿಲ್ಲಿಸಲಿ ಎಂದು ತಿಳಿಸಿದ್ದಾರೆ.
ಇತ್ತಿಚೀಗೆ ತನ್ನ(ರಾಜ್ಯ ಕಾರ್ಯಕಾರಿಣಿ ಸದಸ್ಯರು) ಹಾಗೂ ನಮ್ಮ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ಹೆಸರು ಇಲ್ಲದ ನಕಲಿ ಲೆಟರ್ ಹೆಡ್ ತಯ್ಯಾರಿಸಿ ಬಳಿಕೆ ಮಾಡಿರುವುದು ಆಕ್ಷಮ್ಯ ಅಪರಾಧ. ಈ ಕುರಿತು ಕರಂಜಿ ಅವರ ವಿರೂದ್ಧ ನ್ಯಾಯಾಲಯದಲ್ಲಿ ಖಟ್ಲೆ ಹೂಡಲಾಗುವುದೆಂದು ಎಚ್ಚರಿಸಿದ್ದಾರೆ.
ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಘಟಕದ ಅಧಿನ ಸಂಘ, ರಾಜ್ಯ ಸಂಘದ ಆದೇಶವೇ ಅಂತಿಮ, ರಾಜ್ಯ ಸಂಘದ ವಿರೂದ್ಧ ನ್ಯಾಯಾಲಯಕ್ಕೆ ಹೋದವರು ಮತ್ತೆ ಇದೆ ಸಂಘದ ಅಧ್ಯಕ್ಷರೆಂದು ಹೇಳಿಕೊಳ್ಳುತ್ತಿರುವುದು ಮೂರ್ಖತನದ ಪರಮಾವಧಿ. ಅಧ್ಯಕ್ಷರ ವಿಚಾರವಾಗಿ ಬೆಂಗಳೂರು ಸೀಟಿ ಸಿವಿಲ್ ನ್ಯಾಯಾಲಯದಲ್ಲಿ ವ್ಯಾಜ್ಯ ಬಾಕಿ ಇದೆ. ಆಗಸ್ಟ್ 8ರಂದು ತೀರ್ಪು ಹೊರ ಬರಬೇಕಿದೆ. ಇವರು(ಅಶೋಕ ಕರಂಜಿ) ಈ ವರ್ಷ ನಮ್ಮ ಸಂಘದ ಸದಸ್ಯರೆ ಇಲ್ಲ, ಮೇಲಾಗಿ ಡಿ.ಕೆ ಗಣಪತಿ ಜಿಲ್ಲಾ ಅಧ್ಯಕ್ಷರು ಎಂದು ಏಪ್ರಿಲ್ 5ರಂದು ರಾಜ್ಯ ಸಂಘದ ಸಮಕ್ಷಮದಲ್ಲಿ ಖುದ್ದಾಗಿ ಇವರೆ ಬರೆದುಕೊಟ್ಡು ತಾನು ಅಧ್ಯಕ್ಷ ಎಂದು ಹೇಳಿಕೊಳ್ಳುತ್ತಿರುವುದು ತಪ್ಪು ಎಂಬುದು ಎಲ್ಲ ತಾಲೂಕಿನ ಅಧ್ಯಕ್ಷ-ಪ್ರಧಾನ ಕಾರ್ಯದರ್ಶಿಗಳು ಮತ್ತು ಅಲ್ಲಿಯ ಇತರೆ ಪದಾಧಿಕಾರಿಗಳು, ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲ ಗೌರವಾನ್ವಿತ ಸದಸ್ಯರು ಅರ್ಥಮಾಡಿಕೊಳ್ಳಲಿ ಎಂದ ಅವರು, ತಾಲೂಕು ಮಟ್ಟದಲ್ಲಿ ಜರುಗುವ ಪತ್ರಿಕಾ ದಿನಾಚರಣೆಗಳಿಗೆ ತಮ್ಮನ್ನು,(ರಾಜ್ಯ ಕಾರ್ಯಕಾರಿಣಿ ಸದಸ್ಯರು) ಜಿಲ್ಲಾ ಉಪಾಧ್ಯಕ್ಷರುಗಳು, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಖಜಾಂಚಿಗಳನ್ನು ಅವ್ಹಾನಿಸಿ ಕಾರ್ಯಕ್ರಮ ಆಯೋಜಿಸಬೇಕು, ಹೆಚ್ಚಿನ ಮಾಹಿತಿಗಾಗಿ ರಾಜ್ಯ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಸಂಪರ್ಕಿಸಿ, ಅಶೋಕ ಕರಂಜಿ ಅವರ ಗೊಡ್ಡು ಹೆದರಿಕೆಗೆ ಸೊಪ್ಪು ಹಾಕಬಾರದೆಂದು ಕಾಮಶೆಟ್ಟಿ ತಿಳಿಸಿದ್ದಾರೆ.