ಒಂದೇ ಕೈಯಿಂದ ಚಪ್ಪಾಳೆ ಹಾಕಲಾಗದು:ಸಿದ್ದಲಿಂಗಶ್ರೀ
ತಾಳಿಕೋಟೆ:ಜು.17: ಎಡಕೈಗೆ ಭಲಕೈ ಬೇಕು ಭಲಕೈ ಎಡಕೈಬೇಕು ಅಂದರೆ ಚಪ್ಪಾಳೆ ಹಾಕಲು ಸಾದ್ಯವಾಗುತ್ತದೆ ಒಂದು ವೇಳೆ ಒಂದೇ ಕೈಯಿಂದ ಚಪ್ಪಾಳೆ ಹಾಕಲು ಪ್ರಯತ್ನಿಸಿದರೆ ಅದು ಹಾಕಲು ಸಾದ್ಯವಿಲ್ಲಾ ಚಪ್ಪಾಳೆ ಎಂಬ ಶಬ್ದ ಹೊರಹೊಮ್ಮುವದಿಲ್ಲಾವೆಂದು ಶ್ರೀ ಖಾಸ್ಗತೇಶ್ವರಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.
ಸೋಮವಾರರಂದು ಮೋಹರಂ ಹಬ್ಬದ ನಿಮಿತ್ಯವಾಗಿ ಪಟ್ಟಣದ ಮಹಲ್ ಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾದ ಕಾಳಗಿ ಫೀರಾ ಎಂಬ ದೇವರಿಗೆ ಹಾಗೂ ದೇವರು ಹಿಡಿಯುವ ಇಮಾಮಸಾಬ ಕಾಳಗಿ ಎಂಬವರಿಗೆ ಪುಷ್ಪಹಾರ ಹಾಕಿ ಗೌರವಿಸಿ ಮಾತನಾಡಿದ ಶ್ರೀಗಳು ಈ ಹಿಂದಿನ ತಲೆ ಮಾರಿನಿಂದಲೂ ಶ್ರೀಮಠದ ಮೇಲೆ ಪ್ರೀತಿ ವಾತ್ಸಲ್ಯ ತೋರುತ್ತಾ ಬಂದ ಮುಸ್ಲಿಂ ಬಾಂದವರ ನಡೆ ನುಡಿ ಬಹಳೇ ಆದರ್ಶಮಯವಾಗಿದೆ ಈ ಹಿಂದಿನ ಹಿರಿಯರು ಹಾಕಿಕೊಟ್ಟ ಮಾರ್ಗದಂತೆ ನಾವು ಕೂಡಾ ಈಗೀನ ಯುವಕರೊಂದಿಗೆ ಪ್ರೀತಿ, ಪ್ರೇಮ ವಾತ್ಸಲ್ಯ ತೋರುವದರೊಂದಿಗೆ ಯಾವುದೇ ಬೇದ ಭಾವವಿಲ್ಲದೇ ಮುಂದುವರೆಯುತ್ತೇವೆ ಭಾವೈಕ್ಯತೆ ಎಂಬುದು ಹಿಂದಿನಿಂದ ಬಂದ ಹಿರಿಯರು ಹಾಕಿಕೊಟ್ಟ ಮಾರ್ಗ ಇದಾಗಿದ್ದು ಭಾವೈಕ್ಯತೆ ಎಂಬ ಬೆಸುಗೆ ಉಳಿಯುವ ಕಾರ್ಯವಾಗಬೇಕು ಎಂಬ ನಮ್ಮ ಆಸೆಯಾಗಿದೆ ಇಂತಹದ್ದನ್ನು ನಮ್ಮ ಫಿಳಿಗೆಯೂ ಅರ್ಥೈಸಿಕೊಂಡು ಅನುಸರಿಸುವಂತಹ ಕಾರ್ಯವಾಗಬೇಕು ಕಾರಣ ಎರಡು ಕೋಮಿನವರು ಹಿರಿಯರ ಮಾರ್ಗದರ್ಶನವೆಂಬುದನ್ನು ಪಾಲಿಸುತ್ತಾ ಸಾಗೋಣವೆಂದರು.
ಇನ್ನೋರ್ವ ಮುಸ್ಲಿಂ ಧಾರ್ಮಿಕ ಮುಖಂಡ ಸೈಯದಶಕೀಲಅಹ್ಮದ ಖಾಜಿ ಅವರು ಮಾತನಾಡಿ ಶ್ರೀ ಖಾಸ್ಗತರ ಮಠದೊಂದಿಗೆ ಈ ಹಿಂದೆ ನಮ್ಮೆಲ್ಲಾ ಹಿರಿಯರು ಬಹಳೇ ಗೌರವದೊಂದಿಗೆ ನಡೆದುಕೊಳ್ಳುತ್ತಾ ಬಂದಿದ್ದಾರೆ ಅದನ್ನೇ ನಾವು ಪಾಲಿಸುತ್ತಾ ಸಾಗಿಬಂದಿದ್ದೇವೆ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವ ಮೋಹರಂ ಹಬ್ಬ ಎರಡೂ ಕೂಡಿ ಬಂದರೂ ನಾವೇಲ್ಲರೂ ಭಾವೈಕ್ಯತೆಯೊಂದಿಗೆ ಸಾಗುತ್ತೇವೆ ಅಂತಹದ್ದನ್ನೇ ಪಾಲಿಸಿಕೊಂಡು ಯಾವುದೇ ಬೇಧಭಾವವಿಲ್ಲದೇ ಜಾತ್ರೋತ್ಸವವನ್ನು ಯಶಸ್ವಿಯತ್ತ ಕೊಂಡೊಯುವ ಕಾರ್ಯ ಮಾಡೋಣವೆಂದು ಶ್ರೀ ಖಾಸ್ಗತೇಶ್ವರ ಮಠದ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.
ಇದೇ ಸಮಯದಲ್ಲಿ ಕಾಳಗಿ ಫೀರಾ ಎಂಬ ದೇವರನ್ನು ಹಿಡಿಯುವ ಇಮಾಮಸಾಬ ಕಾಳಗಿ ಅವರಿಗೆ ಶ್ರೀಗಳು ಸನ್ಮಾನಿಸಿ ಗೌರವಿಸಿದರು. ಶ್ರೀಗಳಿಗೂ ಕೂಡಾ ಮುಸ್ಲಿಂ ಸಮಾಜದ ಎಲ್ಲರೂ ಸನ್ಮಾನಿಸಿ ಗೌರವಿಸಿದರು.
ಈ ಸಮಯದಲ್ಲಿ ಹಿರಿಯರಾದ ಗನಿಸಾಬ ಲಾಹೋರಿ, ಹಸನಸಾಬ ಕೊರ್ಕಿ, ಖಾಜಾಹುಸೇನ ಕಟ್ಟಿ, ರಫೀಕ್ ಲಾಹೋರಿ, ನಬಿರಸೂಲ ಲಾಹೋರಿ, ಮೊದಲಾದವರು ಪಾಲ್ಗೊಂಡಿದ್ದರು.