ನಗರದಲ್ಲಿನ ಸಮಸ್ಯೆಗಳಿಗೆ ವಾರದಲ್ಲಿ ಪರಿಹರಿಸುವ ಪ್ರಯತ್ನ: ಶರಣಯ್ಯ ಸ್ವಾಮಿ
ಸೇಡಂ, ಜು,17: ವೈಯಕ್ತಿಕ ಶೌಚಾಲಯ ಹಾಗೂ ಸಾಮೂಹಿಕ ಶೌಚಾಲಯ ನಿರ್ಮಾಣ, ಮತ್ತು ಬೀದಿ ದೀಪ ಅಳವಡಿಕೆ ತ್ಯಾಜ್ಯ ವಿಲೇವಾರಿ, ಮತ್ತು ಇನ್ನಿತರ ಕಾಮಗಾರಿಗಳು ಸೇರಿದಂತೆ ನಗರದಲ್ಲಿನ ವಿವಿಧ ಸಮಸ್ಯೆಗಳಿಗೆ ವಾರದಲ್ಲಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಪುರಸಭೆಯ ಮುಖ್ಯಾಧಿಕಾರಿ ಶರಣಯ್ಯ ಸ್ವಾಮಿ ಭರವಸೆ ನೀಡಿದರು. ಪಟ್ಟಣದಲ್ಲಿನ ವಿವಿಧ ಬಡಾವಣೆಗಳಲ್ಲಿ ಪುರಸಭೆ ವತಿಯಿಂದ ಜನಸ್ಪಂದನಾ ಕಾರ್ಯಕ್ರಮ ಅಂಗವಾಗಿ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರಿ ಅವರು ಮಾತನಾಡಿ ಭರವಸೆ ನೀಡಿದರು.
ಈ ವೇಳೆಯಲ್ಲಿ ಪುರಸಭೆಯ ಮಹಿಳಾ ಅಧಿಕಾರಿ ಪೂಜಾ ಚಿತ್ತಾಪುರ,ದತ್ತಾತ್ರೇಯ ಐನಾಪುರ್, ಮನೋಜ್ ಬಗಾಡ ಸೇರಿದಂತೆ ಹಲವರು ಇದ್ದರು.