ಗ್ರಾಪಂಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಿ ತಾಪಂಗೆ ಮನವಿ
ಸೇಡಂ, ಜು,17:ತಾಲೂಕಿನಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಡೆಂಗ್ಯು,ಕಾಲರಾ,ಮಲೇರಿಯಾ ರೋಗಗಳು ನಿಯಂತ್ರಣಕ್ಕೆ ಗ್ರಾಮ ಪಂಚಾಯಿತಿಗಳು ವಿಫಲವಾಗಿದ್ದು, ಸಾರ್ವಜನಿಕರು ಹೆದರುವ ಭೀತಿ ಎದುರಾಗಿದ್ದು,ಗ್ರಾಮೀಣ ಆಡಳಿತ ಸಂಪೂರ್ಣ ನಿಷ್ಕ್ರಿಯವಾಗಿದ್ದು ಕೂಡಲೇ ವಾರಕ್ಕೊಮ್ಮೆ ಸ್ವಚ್ಛತೆ ಕಾರ್ಯ ಕೈಗೊಳ್ಳಬೇಕು ಹಳ್ಳಿಗಳಲ್ಲಿ ಚರಂಡಿ ನೀರು ತುಂಬಾ ಹರಿಯುತ್ತಿದ್ದರು, ಸರಕಾರದ ನಿಯಮದಂತೆ ವಾರಕ್ಕೊಮ್ಮೆ ಚರಂಡಿ ತ್ಯಾಜ್ಯ ಸ್ವಚ್ಛಗೊಳಿಸುವ ಸೊಳ್ಳೆಗಳ ನಿಯಂತ್ರಣಕ್ಕೆ ಪಾಗಿಂಗ್ ಮಾಡಲು ನಿಯಮವಿದ್ದರುಅಲ್ಲಿನ ಗ್ರಾಮ ಪಂಚಾಯತಿಗಳಲ್ಲಿನ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಯಾವುದೇ ಸ್ವಚ್ಛತೆಯ ಕಾರ್ಯಕ್ಕೆ ಮುಂದಾಗಿಲ್ಲ ಬ್ಲೀಚಿಂಗ್ ಪೌಡರ್ ಹಾಕುವುದಿಲ್ಲ ಮಳೆ ಬಂದರೆ ಸಾಕು ನೀರಿನ ಟ್ಯಾಂಕರ್ ಗಳಿಗೆ ಸರಬರಾಜು ಆಗುವ ಬೋರವೇಲ್ ಇದ್ದ ಸ್ಥಳದಲ್ಲಿ ತಿಪ್ಪೆಗುಂಡಿಗಳ ತ್ಯಾಜ್ಯ ಮಲ ವಿಸರ್ಜನೆ ಮಾಡಿದ ಸ್ಥಳದಲ್ಲಿ ಬೋರ್ವೆಲ್ ನೀರು ಸರಬರಾಜು ನಳದ ಪೈಪ್ ಲೈನ್ ಒಳಗೆ ಸೇರಿ ಅದೇ ನೀರು ಸರಬರಾಜಾಗುತ್ತಿದೆ ಎಂದು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚನ್ನಪ್ಪ ರಾಯಣ್ಣನವರ ರವರಿಗೆ ಅಂಬೇಡ್ಕರ್ ಯುವ ಸೇನೆ ತಾಲೂಕ ಅಧ್ಯಕ್ಷ ಗೋಪಾಲ ಎಲ್.ನಾಟೇಕಾರ ಅವರು ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು. ಈ ವೇಳೆಯಲ್ಲಿ ಅಂಬೇಡ್ಕರ್ ಯುವ ಸೇನೆ ಮುಧೋಳ ವಲಯ ಅಧ್ಯಕ್ಷ ನರೇಶ್ ಮೌರ್ಯ, ಉಪಾಧ್ಯಕ್ಷರು ಕೈಲಾಸ ಮೌರ್ಯ ಭೀಮು,ಹಣಮಂತು ಇದ್ದರು.