ಆಷಾಡ ಉತ್ಸವ ನಿಮಿತ್ತ ಶುಕ್ಲಾ ಶಾಲೆಯ ಮಕ್ಕಳು ವಿಠ್ಠಲ ಮತ್ತು ರುಕ್ಮಿಣಿ ವೇಷದಲ್ಲಿ
ಕಲಬುರಗಿ:ಜು.17: ನಗರದ ಶಾಹಬಜಾರಲ್ಲಿರುವ ಶುಕ್ಲಾ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಕ್ರೊದನಾಮ ಸಂವತ್ಸರ ದಕ್ಷಿಣಾಯಣ ಗ್ರೀಷ್ಮಖುತು ಆಷಾಡ್ ಮಾಸ ಶುಕ್ಲಪಕ್ಷ ದಶಮಿಯ ವಿಶಾಲ ನಕ್ಷತ್ರದ ದಿನದ ಆಷಾಡ ಉತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆ ಮಕ್ಕಳು ವಿಠ್ಠಲ ಮತ್ತು ರುಕ್ಮಿಣಿ ಪಾತ್ರಧಾರಿಗಳಾಗಿದರು. ವಾರಕಾರಿ ಭಜನೆ, ವಿಠ್ಠನ ಪಲ್ಲಕಿ ಉತ್ಸವ ನಡೆಯಿತು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ವಿನಯ್ ಶುಕ್ಲಾ, ಕಾರ್ಯದರ್ಶಿ ವರ್ಷಾ ಶುಕ್ಲಾ, ಶಾಲೆಯ ಮುಖ್ಯೋಪಾಧ್ಯಾಯ ವಸಂತರಾವ್ ಕದಂ ಖಾನೆ ಸೇರಿದಂತೆ ಶಿಕ್ಷಕಿಯರು, ನರ್ಸರಿ, ಎಲ್‍ಕೆಜಿ, ಯುಕೆಜಿ ಮಕ್ಕಳು ಇದ್ದರು.