ಕಾರ್ಮಿಕರ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ಬೀದರ: ಜು.17:ಜಿಲ್ಲಾ ಕಟ್ಟಡ ಇತರೆ ನಿರ್ಮಾಣ ಕಾರ್ಮಿಕರ ಸಂಘಗಳ ಒಕ್ಕೂಟ ಸಂಘ ವತಿಯಿಂದ ಬೀದರ ಜಿಲ್ಲಾದ್ಯಂತ ಕಾರ್ಮಿಕರ ಸದಸ್ಯತ್ವ ಅಭಿಯಾನ ಒಕ್ಕೂಟದ ನಡೆದ ಕಾರ್ಮಿಕರ ಕಡೆ ವತಿಯಿಂದ ಜುಲೈ 16 ರಂದು ಡಾ. ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ಒಕ್ಕೂಟದ ಅಧ್ಯಕ್ಷರಾದ ಪಂಡರಿ ಪೂಜಾರಿಯವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.
ಒಕ್ಕೂಟದ ಅಧ್ಯಕ್ಷರಾದ ಪಂಡರಿ ಪೂಜಾರಿಯವರು ಮಾತನಾಡಿ, ಈ ಒಕ್ಕೂಟವು ಜಿಲ್ಲಾದ್ಯಂತ ಕಟ್ಟಡ ಕಾರ್ಮಿಕರ ಏಳಿಗೆಗಾಗಿ ಹಾಗೂ ಕಾರ್ಮಿಕರನ್ನು ಆರ್ಥಿಕವಾಗಿ ಬಲಪಡಿಸುವ ನಿಟ್ಟಿನಲ್ಲಿ ಕಾರ್ಮಿಕರು, ಕಾರ್ಮಿಕ ಇಲಾಖೆಯ ಸೌಲತ್ತುಗಳನ್ನು ಕಾರ್ಮಿಕರ ಮನೆಬಾಗಿಲಿಗೆ ತಲುಪಿಸಿ, ಕಾರ್ಮಿಕರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಈ ಒಕ್ಕೂಟ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಕಾರ್ಮಿಕರು ಒಕ್ಕೂಟಕ್ಕೆ ಸದಸ್ಯತ್ವ ಪಡೆದುಕೊಳ್ಳುವುದು ಕಡ್ಡಾಯವೆಂದು ತಿಳಿಸಿದರು.
ಗೌರವ ಅಧ್ಯಕ್ಷರಾದ ರಾಜಕುಮಾರ ಕಾಂಬಳೆ, ಉಪಾಧ್ಯಕ್ಷರಾದ ತುಕಾರಾಮ ಗೌರೆ, ಸಂಘಟನಾ ಸಂಚಾಲಕರಾದ ಅನೀಲಕುಮಾರ ಗಂಜಕರ್, ಒಕ್ಕೂಟದ ಹಿರಿಯ ಮುಖಂಡರಾದ ಪ್ರಕಾಶ ಚಿಕಪೇಟಕರ್, ಕೋಶಾಧ್ಯಕ್ಷರಾದ ಸೂರ್ಯಕಾಂತ ಸಾದುರೆ, ಪ್ರಧಾನ ಕಾರ್ಯದರ್ಶಿಯಾದ ಅಶೋಕ ವಗ್ಗೆ, ಸಂತೋಷ ಕೆ. ಸಿಂಧೆ ಸಹ ಕಾರ್ಯದರ್ಶಿ, ನ್ಯಾಯಯುತ ಹೋರಾಟಗಾರರಾದ ಕ.ದ.ಸಂ.ಸ. ರಾಜ್ಯ ಸಂಘಟನಾ ಸಂಚಾಲಕರಾದ ರಾಜಕುಮಾರ ಮೂಲಭಾರತಿ, ಬಸವರಾಜ ಮಿಠಾರೆ ಜಿಲ್ಲಾ ಸಂಚಾಲಕರು ದ.ಸಂ.ಸ. ಮತ್ತು ಅನೇಕ ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.