ಕೆಂಪು ಕುದುರೆ ಗಗನಕ್ಕೆ ಹಾರಿತು” : ಮೊಹರಂ ಸಿದ್ದಪ್ಪ ತಾತನ ಹೇಳಿಕೆ
ಕಂಪ್ಲಿ:-ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಕತ್ತಲ ರಾತ್ರಿ ಮೊಹರಂ ಹಬ್ಬವನ್ನು ಪಲ್ಲಕ್ಕಿ ಉತ್ಸವವನ್ನು ಶ್ರೀ ಸಿದ್ದಪ್ಪ ತಾತನ ಮೂರ್ತಿಯನ್ನು ಕೂರಿಸಿಕೊಂಡು ಊರಿಂದ ಅರ್ಧಕೀಲೋ ಮೀಟರ್ ದೂರದಲ್ಲಿರುವ ಶ್ರೀ ಸಿದ್ದಪ್ಪ ತಾತನ ಗುಡಿಗೆ ಸಣ್ಣ ಸಣ್ಣ ಬಾಲಕಿಯರು ಕಳಸ ಹಿಡಿದುಕೊಂಡು ಉಲ್ಲಾಸದಿಂದ ಬರುವುದು ಬಹಳಷ್ಟು ಅಚ್ಚುಕಟ್ಟಾಗಿ ಕಾಣುವುದು ನಂತರ  ದೇವರು ಬರುವಂತವರ ನಾಣ್ನುಡಿ ಹೇಳಿಕೆ “ಮಾನವ ಜನ್ಮ ಅರಿತು ನಡೆಯಬೇಕು” “ಕೆಂಪು ಕುದುರೆ ಗಗನಕ್ಕೆ ಹಾರಿತು” “ಬಿಳಿ ಕುದುರೆ ಮಂಡಿ ಊರಿತು”ಎಂಬ ದೇವರುಗಳು ನಾಣ್ನುಡಿ ಈ ಬಾರಿ ಈ ನುಡಿಯಂತೆ ರೈತಾರು ಕೆಂಪು ಧಾನ್ಯಗಳನ್ನು ಒಳಗೊಂಡ ಬೆಳೆಗಳಿಗೆ ಒಳ್ಳೆಯ ಮಾರುಕಟ್ಟೆ ಇದೆ ಎಂಬುದು ತಿಳಿಯಲಾಯಿತು, ಅಲಾಯಿ ಕುಣಿಯಲ್ಲಿ ಬೆಂಕಿ ತುಳಿಯುತ್ತಾ  ಹೇಳಿಕೆಯನ್ನು ನುಡಿದರು. ಊರಿನಲ್ಲಿ ಶ್ರೀ ಹೊನ್ನುರಸ್ವಾಮಿ, ಶೀ ಸಿದ್ದಪ್ಪ ತಾತ,ಶ್ರೀ ನೀಲಗಿರಿ ದೇವರು, ಮೂರು ಕಣ್ಣಿನ ದೇವರು, ಒಂದು ಕಣ್ಣಿನ ದೇವರು,ಸೂರ್ಯ ದೇವರು, ಚಂದ್ರ ದೇವರು ಗ್ರಾಮದಲ್ಲಿ ಮೆರವಣಿಗೆ ಬೆಳಗಿನ ಜಾವ ಮೂರು ಗಂಟೆ ಮೂವತ್ತು ನಿಮಿಷಕ್ಕೆ ಮತ್ತು ಶ್ರೀ ಹೊನ್ನುರಸ್ವಾಮಿ ಮತ್ತು ಶ್ರೀ ಸಿದ್ದಪ್ಪ ತಾತನ ದೇವರು ತೆಗೆದುಕೊಂಡು ಗ್ರಾಮದೊಳಗೆ ಯಾವುದೇ ರೀತಿಯ ದುಷ್ಟಶಕ್ತಿಗಳು ಗ್ರಾಮದೊಳಗೆ ಪ್ರವೇಶವಾಗದಂತೆ ಊರು ಸುತ್ತ ಮುತ್ತಾ ಮತ್ತು ಊರೊಳಗೆ “ಹಾಲ ಪತ್ರಿಯನ್ನು ಕಟ್ಟಲಾಯಿತು”. ಸಮಸ್ತ ಸಾರ್ವಜನಿಕರು ಊರಿನ ಗುರು ಹಿರಿಯರ, ರೈತ ಬಾಂದವರು ಭಾಗವಹಿಸಿದ್ದರು.