ವೀರಶೈವ ಮಹಾಸಭಾ ಚುನಾವಣೆಗ್ರಾಮೀಣದಲ್ಲಿ ಸಿದ್ದಲಿಂಗ ಶ್ರೀಗಳ ತಂಡ ಮತಯಾಚನೆ
ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.17: ಅಖಿಲ ಭಾರತ ವೀರಶೈವ ಮಹಾಸಭಾದ ಬಳ್ಳಾರಿ ಜಿಲ್ಲಾ ಘಟಕಕ್ಕೆ 5 ವರ್ಷಗಳ ಅವಧಿಗೆ ನಡೆಯುತ್ತಿರುವ  ಚುನಾವಣೆಯ ನಿಮಿತ್ತ  ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ತಂಡದ  ಪಂಚಾಕ್ಷರಪ್ಪ ಬಿಚ್ಚಗಲ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹಾಗೂ  ಕಾರ್ಯಕಾರಿ ಸಮಿತಿ ಸ್ಥಾನದ ಅಭ್ಯರ್ಥಿಗಳು ತಂಡದ ಪರವಾಗಿ ಬಾಣಾಪುರ ನಾಗರಾಜ್ ಗೌಡ ನೇತೃತ್ವದಲ್ಲಿ ಇಂದು, ಕುಡಿತಿನಿ, ಚಿಕ್ಕ ಅಂತಾಪುರ, ರಾಜಾಪುರ ಕೋಡಾಲು, ಚೋರನೂರು, ಯಶವಂತ್ ನಗರ, ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ಮಹಾಸಭಾ ಸದಸ್ಯರು ಹಾಗೂ ಪ್ರಮುಖ ವೀರಶೈವ ಮುಖಂಡರುಗಳನ್ನು ಭೇಟಿ ಮಾಡಿ ನಮ್ಮ ತಂಡಕ್ಕೆ ಬೆಂಬಲಿಸಿ ಇನ್ನು ಹೆಚ್ಚಿನ ಮಟ್ಟಿಗೆ ಸಮಾಜದ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಮನವಿ ಮಾಡಿ ತಂಡದ
ಧೇಯೋದ್ದೇಶಗಳನ್ನು ತಿಳಿಸಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮದಿರೆ ಕುಮಾರಸ್ವಾಮಿ, ದಾಸಪುರ ಅರುಣ್ ಕುಮಾರ್ , ಕಮ್ಮರಚೇಡು ಮಂಜುನಾಥ, ಜೋಳದ ರಾಶಿ ಲೋಕೇಶ್ ರೆಡ್ಡಿ ಪ್ರಭುಶೇಖರ ಗೌಡ, ದೀಪಾ ಸಿರಿಗೇರಿ, ಬಿ. ಜೆ. ಮಂಜುಳಾ, ಕೊಡಲು ಮಂಜು, ಕರಡಿ ಮರಿಸ್ವಾಮಿ ಕರಿಬಸಪ್ಪ ವೀರನಗೌಡ   ಮುಂತಾದವರು ಉಪಸ್ಥಿತರಿದ್ದರು.