ಸುಳ್ಳು ದಾಖಲಾತಿ ಸೃಷ್ಟಿಸಿದ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮನವಿ
ಬೀದರ:ಜು.17: ಬೀದರ ನಗರದ ನಿವಾಸಿಯಾದ ಎಮ.ಎ.ಸಮದ ತಂದೆ ಎಂ.ಡ.ವಾಹಿದ ಎಂಬ ವ್ಯಕ್ತಿಯು ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಬೀದರ ತಾಲೂಕಿನ ಸಿಪ್ಪಲಗೇತಾ ಹಾಗೂ ಕಬೀರವಾಡಾ ಗ್ರಾಮದ ಭೂಮಿ ಸರ್ವೇ ನಂ. 7 ರಲ್ಲಿ 1954-55ರ ಖಾಸ್ತ್ರ ಪಹಣಿಯಂತೆ 99- ಎಕರೆ 04-ಗುಂಟೆ ಜಮೀನಿನ ಪೈಕಿ 09-ಎಕರೆ 01-ಗುಂಟೆ ಜಮೀನು ತನ್ನ ಪಿತ್ರಾರ್ಜಿತ ಆಸ್ತಿ ಎಂದು ಸುಳ್ಳು ದಾಖಲಾತಿಗಳನ್ನು ಮಾಡಿಕೊಟ್ಟ ಅಧಿಕಾರಿಗಳ ಮೇಲೆ ಹಾಗೂ ಪುರಾತತ್ವ ಇಲಾಖೆಗೆ ಸೇರಿದ ಕಟ್ಟಡವನ್ನು ದ್ವಂಸಗೊಳಿಸಿ ಮಸಿದಿ ನಿರ್ಮಾಣ ಮಾಡುತ್ತಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಆ ವ್ಯಕ್ತಿಯ ಬೆಂಬಲಾರ್ಥಕ್ಕೆ ನಿಂತಿರುವ ಅಧಿಕಾರಿಗಳನ್ನು ಹಾಗೂ ಪುರಾತತ್ವ ಇಲಾಖೆಗೆ ಸೇರಿದ ಕಟ್ಟಡದ ಹತ್ತಿರ ದಿನಾಲೂ ಬಂದು ಗ್ರಾಮದಲ್ಲಿ ಗೊಂದಲವನ್ನು ಮಾಡುತ್ತಿರುವ ಅಲ್ಲದೆ ಕಬೀರವಾಡಾ ಗ್ರಾಮದ ಪರಿಶಿಷ್ಟ ಜಾತಿಯ ವ್ಯಾಪ್ತಿಯಲ್ಲಿ ಬರುವ ಹೊಲೆಯ ಮಾದಿಗ ಜನಾಂಗಕ್ಕೆ ಸೇರಿದ ವಾಸ ಮಾಡುತ್ತಿರುವ ಬಡಾವಣೆಯಲ್ಲಿ ನಿಜಾಂನ ಆಳ್ವಿಕೆಯಲ್ಲಿ ಕುದುರೆಗಳ ವಾಸಸ್ಥಳಕ್ಕಾಗಿ ಕಟ್ಟಿರುವ ಕಟ್ಟಡವನ್ನು ದ್ವಂಸ ಮಾಡಿ ಸದರಿ ಜಾಗದಲ್ಲಿ ಮಸಿದಿ ಕಟ್ಟುವ ಹುನ್ನಾರ ನಡೆಸಿ ಕಟ್ಟಡದ ಮೇಲೆ ಚಿಕ್ ಶೀಟ್ ಹಾಕಿ ಶಾಂತಿ ನೆಮ್ಮದಿಯಿಂದ ಬದುಕುತ್ತಿರುವ ಗ್ರಾಮದಲ್ಲಿ ಅಶಾಂತಿ ನಿರ್ಮಾಣ ಮಾಡುವ ಹುನ್ನಾರ ಎರಿ.ಎ.ಸಮದ ಎಂಬ ವ್ಯಕ್ತಿ ಹುನ್ನಾರ ನಡೆಸಿದ್ದಾನೆ.
ಗ್ರಾಮದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಒಂದೋ ಕುಟುಂಬ ಇಲ್ಲದಿದ್ದರೂ ಕೂಡ ಸದರಿ ಗ್ರಾಮದಲ್ಲಿರುವ ಪುರಾತತ್ವಕ್ಕೆ ಇಲಾಖೆಗೆ ಸೇರಿದ ಹಳೆ ಕಟ್ಟಡವನ್ನು ಕೆಡವಿ ಮಸಿದಿ ಕಟ್ಟುತ್ತಿರುವುದು ಕಾನೂನು ಬಾಹಿರವಾಗಿ ಈ ಕೃತ್ಯ ನಡೆಸುತ್ತಿರುವುದು ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಸಹ ಇಲ್ಲಿವರೆಗೂ ಯಾವುದೇ ಪ್ರಯೋಜವಾಗಿರುವುದಿಲ್ಲ.
ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಿಪ್ಪಲಗೇರಾ & ಕಬೀರವಾಡಾ ಗ್ರಾಮಸ್ಥರು ಸೇರಿ ನಗರದ ಪ್ರವಾಸಿ ಮಂದಿರದಿಂದ ಡಾ? ಅಂಬೇಡ್ಕರ್ ವೃತ್ತದ ಮೂಲಕ ಹಾದು ಭಗತಸಿಂಗ್ ವೃತ್ತದ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ಮಾಡುವುದರ ಮುಖಾಂತರ ಮನವಿ ಪತ್ರ ಸಲ್ಲಿಸಿದ್ದಾರೆ
15 ದಿವಸಗಳಲ್ಲಿ ಬಗೆ ಹರಿಸದೆ ಹೋದಲ್ಲಿ ದಿನಾಂಕ 14-08-2024 ರಂದು ಜಿಲ್ಲಾಧಿಕಾರಿಗಳ ಕಛೇರಿ ಎದುರುಗಡೆ ಅಮರಣಾಂತ ಸತ್ಯಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಸಿಪ್ಪಲಗೇರಾ & ಕಬೀರವಾಡಾ ಗ್ರಾಮಸ್ಥರು ಮನವಿ ಮಾಡಿದ್ದಾರೆ.