ಶ್ರೀಧರಗಡ್ಡೆ ಪಿಡಿಓ ಪ್ರಾಣೇಶ್ ಲೋಕಾಯುಕ್ತ ಬಲೆಗೆ2 ಲಕ್ಷ ರೂ ಲಂಚ ಸ್ವೀಕಾರ ಆರೋಪ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.17: ಲೇಔಟ್ ಹಸ್ತಾಂತರಕ್ಜೆ ಸಂಬಂಧಿಸಿ 7 ಲಕ್ಷ ರೂ  ಲಂಚಕ್ಕೆ ಬೇಡಿಕೆ ಇಟ್ಟು. 2 ಲಕ್ಷ ರೂ  ಸ್ವೀಕರಿಸುವಾಗ ತಾಲೂಕಿನ ಶ್ರೀಧರಗಡ್ಡೆ ಗ್ರಾಮ ಪಂಚಾಯ್ತಿಯ ಪಿಡಿಓ ಪ್ರಾಣೇಶ್  ನಿನ್ನೆ ಸಂಜೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ದೂರದಾರ ವೀರೇಶ್ ಎನ್ನುವವರು  ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು. ದೂರುದಾರನಿಂದ 2 ಲಕ್ಷದ ಹಣವನ್ನು  ನಗರದ ಕಪ್ಪಗಲ್ ರಸ್ತೆಯ  ಬಲ ಬದಿಯ 7 ನೇ ಕ್ರಾಸ್ ನಲ್ಲಿರುವ  ಖಾಸಗಿ ವ್ಯಕ್ತಿ ಶಂಕರ್  ಅವರ ಡಿಟಿಪಿ ಸೆಂಟರ್ ನಲ್ಲಿ ಮನೆಯಲ್ಲಿ  ಸ್ವೀಕರಿಸುವಾಗ ದಾಳಿ ಮಾಡಲಾಗಿದೆ.