ರಕ್ತದಾನ ಶ್ರೇಷ್ಟವಾದುದು: ನಂದೀಶ್
ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.17: ರಕ್ತದಾನ ಶ್ರೇಷ್ಠ ದಾನ.ರಕ್ತದಾನ ಯಾರೇ ಮಾಡಿದರು ಇನ್ನೊಬ್ಬರ ಜೀವ ಉಳಿಸಿದಂತೆ ಎಂದು ಮೇಯರ್ ಮುಲ್ಲಂಗಿ ನಂದೀಶ್ ಹೇಳಿದರು.
 ನಗರದ ರಾಘವೇಂದ್ರ ಕಾಲೋನಿ ಎರಡನೇ ಹಂತದಲ್ಲಿರುವ ಗೀಹೋನ್ ಮಿನಿಷ್ಟ್ರಿ ಟ್ರಸ್ಟ್ ಹಾಗೂ ಸ್ಪಂದನ ರಕ್ತ ನಿಧಿ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಅವರು ಇಂದು  ಉದ್ಘಾಟಿಸಿ ಮಾತನಾಡುತ್ತ ರಕ್ತದಾನ ಮಾಡಿದವರು ದೇವರ ಸಮಾನರೆಂದರು. ಪಾಲಿಕೆಯ ಸದಸ್ಯ ಪೇರಂ ವಿವೇಕ್ (ವಿಕ್ಕಿ) ಮಾತನಾಡಿ ಒಬ್ಬರು ರಕ್ತದಾನ ಮಾಡುವುದರಿಂದ ಇಬ್ಬರ ಪ್ರಾಣ ಉಳಿಸಿದಂತೆ.
ಯುವಕರು ರಕ್ತದಾನ ಮಾಡಲು ಮುಂದಾಗಬೇಕು. ಆರೋಗ್ಯ ವಂತವ್ಯಕ್ತಿ ಪ್ರತಿ ಮೂರು ತಿಂಗಳಿಗೊಮ್ಮೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ,ಪ್ರಾಣಾಪಾಯದಿಂದ ಕಾಪಾಡಬೇಕೆಂದರು.
ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ 29ನೇ ಸಾರಿ ಸ್ವಯಂ ಪ್ರೇರಿತ ಉಚಿತ ರಕ್ತದಾನ ಮಾಡಿದರು.
ಡಿ.ರತ್ನ ಕುಮಾರ್, ರೇಗನ್ ಪಾಲ್,ಸುದರ್ಶನ್, ಆಂಜನೇಯ,ವಿನೋದ್ ಸಂಗನಕಲ್ಲು, ಅಂಬರೀಶ್, ಎರ್ರಿ,ಮುರಳಿ ಜಿ,ಲೋಕೇಶ್ ಸ್ಪಂದನ ರಕ್ತ ನಿಧಿಯ ಡಾ.ಪ್ರಕಾಶ ಪಾಟೀಲ್ ಮಾಲ್ಯಂ  ಮುಂತಾದವರು ಉಪಸ್ಥಿತರಿದ್ದರು.
One attachment • Scanned by Gmail