ವಿದ್ಯೆ ಬೋಧಿಸಿದ ಗುರುವಿನ ಸ್ಮರಣೆ, ಕಲಿತ ಶಾಲೆಗೆ ಸಹಕರಿಸಿ: ಪಾಟೀಲ
ಆಳಂದ:ಜು.17: ಜನ್ಮ ನೀಡಿದ ತಂದೆ, ತಾಯಿಯನ್ನು ಸದಾ ಗೌರವಿಸಿ. ವಿದ್ಯೆ ಕಲಿಸಿದ ಗುರುವಿಗೆ ಸ್ಮರಿಸಿ ಕಲಿತ ಶಾಲೆ ಹಿಂದುರಿಗಿ ನೋಡಿ ಎಂದು ಮುಖ್ಯಮಂತ್ರಿ ಸಲಹೆಗಾರ ಶಾಸಕ ಬಿ.ಆರ್.ಪಾಟೀಲ್ ಅವರು ಮಾಜಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಾಲೂಕಿನ ಸರಸಂಬಾ ಗ್ರಾಮದ ಕ್ರಾಂತಿವೀರ ದಿ. ರಾಮಚಂದ್ರಪ್ಪ ಪಾಟೀಲ್ ಹಿರಿಯ ಪ್ರಾಥಮಿಕ ಶಾಲೆ, ಎಸ್.ನಿಜಲಿಂಗಪ್ಪ ಗ್ರಾಮೀಣ ವಸತಿ ಪ್ರೌಢಶಾಲೆಯ 1994-95 ನೇ ಪ್ರಥಮ ವರ್ಷದ ಮಾಜಿ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿರು.
ಗ್ರಾಮೀಣ ಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು ಉನ್ನತ ಶಿಕ್ಷಣ ಪಡೆದು ಸರಕಾರಿ ಮತ್ತು ಖಾಸಗಿ ಹುದ್ದೆಗಳು ಪಡೆದು ಆದರ್ಶ ಬದುಕು ಸಾಗಿಸುತ್ತಿರುವ ವಿದ್ಯಾರ್ಥಿ ಸಮೂಹ ಕಲಿಸಿದ ಗುರುಗಳಿಗೆ ಗುರುವಂದನೆ ಸಲ್ಲಿಸಿ ಗೌರವಿಸುವ ಪರಿಪಾಠ ಆರೋಗ್ಯಕರ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.
ಸಮತಾ ಲೋಕ ಶಿಕ್ಷಣ ಸಮಿತಿ ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡಿ ಶೈಕ್ಷಣಿಕ ರಂಗದಲ್ಲಿ ಕ್ರಾಂತಿಗೆ ಮುನ್ನುಡಿ ಬರೆದ ಅಂದಿನ ಶಿಕ್ಷಕರ ಶ್ರಮ ಮತ್ತು ವಿದ್ಯಾರ್ಥಿಗಳ ಛಲದಿಂದ ಗುರಿಮುಟ್ಟಲು ಸಾಧ್ಯವಾಗಿದೆ. ಹತ್ತು ದೇವರನ್ನು ಪೂಜಿಸುವುದಕಿಂತ ಹೆತ್ತವರನ್ನು, ಗುರು, ಹಿರಿಯರನ್ನು ಗೌರವಿಸುವ ಗುಣ ಮೈಗೂಡಿಸಕೊಳ್ಳಬೇಕು ಎಂದರು.
ಶಿಕ್ಷಕ ಡಿ.ಎಂ.ಪಾಟೀಲ್, ಬಸವರಾಜ ಕೋರಳ್ಳಿ, ಮಾಣಿಕ ಘೋಡಕೆ, ರಮೇಶ ಖಾನಾಪೂರೆ, ಮಾಜಿ ವಿದ್ಯಾರ್ಥಿ ಅನೀತಾ ಡಿ. ಭಕರೆ, ಕರುಣಾ ಪಾಟೀಲ್ ಇವರು ಸಭೆಯಲ್ಲಿ ಮಾತನಾಡಿದರು.
ಜಿಪಂ ಮಾಜಿ ಸದಸ್ಯ ಸಿದ್ದರಾಮ ಪ್ಯಾಟಿ, ಮುಖಂಡ ಪಂಡಿತ ಜಿಡಗೆ, ಜಗನ್ನಾಥ ದೇಶಮುಖ, ಗುರುಲಿಂಗಪ್ಪ ಪಾಟೀಲ್, ಹಜರತ ಪಟೇಲ್, ಪಂಡಿತ ಖಾನಾಪೂರೆ, ಸಿದ್ರಾಮಪ್ಪ ಮಡ್ಡೆ, ವಿಜಯಕುಮಾರ ಮಾಶಾಳೆ, ಅಣ್ಣಾರಾವ ಬುರಾಣಪೂರೆ, ಸಂದೀಪ ಕಾಸಾರ, ಸಚಿನ ಭಕರೆ,ಜಲಜಾಕ್ಷಿ ಕೋರೆ, ಸುವರ್ಣ ಕಿಣಗಿ, ಸುಮಿತ್ರಾ ಖಾನಾಪೂರೆ , ವಿಜಯಕುಮಾರ ಗುಂಜುಟಿ, ರವಿಚಂದ್ರ ಪೈಲವಾನ ಇತರರು ಇದ್ದರು.
ಸಿದ್ದೇಶ್ವರಿ ಭಿಕಮಾಳೆ ಸ್ವಾಗತಿಸಿದರು. ಮಲ್ಲಿನಾಥ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಗುರು ವಿಠ್ಠಲ ಹವಲ್ದಾರ ನಿರೂಪಿಸಿದರು. ಹುಸೇನಭಾಷಾ ಶೇಖ್ ವಂದಿಸಿದರು. ಮಾಜಿ ವಿದ್ಯಾರ್ಥಿಗಳು ಗುರುಗಳಿಗೆ ಗುಲಾಬಿ ಹೂವಿನಿಂದ ಸ್ವಾಗತಿಸಿ ಸ್ಮರಣಿಕೆ ನೀಡಿ ಗೌರವಿಸಿ ಗುರುವಂದನೆ ಸಲ್ಲಿಸಿದರು.