ಕನ್ನಡ ನಾಮಪಲಕಗಳನ್ನು ಕಡ್ಡಾಯಗೊಳಿಸಲು ಶಿಫಾರಸ್ಸು ಮಾಡಿ :ಬಡಿಗೇರ
ಕಲಬುರಗಿ, ಜು.17: ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನದಲ್ಲಿರುವ ಕಲಬುರ್ಗಿ ನಗರದಲ್ಲಿ ದಿನದಿಂದ ದಿನಕ್ಕೆ ಆಂಗ್ಲ ನಾಮಫಲಕಗಳು ಹೆಚ್ಚಾಗುತ್ತಿವೆ. ಅಂಗಡಿ ಮುಗ್ಗಟ್ಟು ಮಾಲೀಕರು ಹಾಕುವ ನಾಮಫಲಕದಲ್ಲಿ ಶೇಕಡ 60ರಷ್ಟು ಕನ್ನಡ ಭಾಷೆಯ ಅಕ್ಷರಗಳನ್ನು ಬರೆಸಲು ರಾಜ್ಯ ಸರಕಾರದ ಆದೇಶ ಇದ್ದರು, ಅದನ್ನು ಪಾಲಿಸದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಇಂದಿಲ್ಲಿ ಆಗ್ರಹಿಸಿದರು.
ನಗರದ ನೂತನ ಅತಿಥಿ ಗ್ರಹದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಡಾ.ಪುರುಷೋತ್ತಮ ಎಳ್ಳಿಮಲೆ ಅವರು ಆಯೋಜಿಸಿದ ಕನ್ನಡಪರ ಹೋರಾಟಗಾರರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಮುಂಬರುವ ನ. 1. ರ ಒಳಗಾಗಿ ಕಲ್ಬುರ್ಗಿ ಜಿಲ್ಲೆಯ ಎಲ್ಲಾ ನಾಮಫಲಕಗಳಲ್ಲಿ ಶೇಕಡಾ 60ರಷ್ಟು ಕನ್ನಡ ಭಾಷೆಯ ಅಕ್ಷರಗಳನ್ನು ಇರಬೇಕು ಮತ್ತು ಕನ್ನಡಪರ ಸಂಘಟನೆಯ ಮುಖಂಡರ ಮೇಲೆ ಇರುವ ಎಲ್ಲಾ ಕೇಸುಗಳನ್ನು ಸರಕಾರ ವಾಪಸ್ಸು ಪಡೆಯಬೇಕೆಂದು ಹೇಳಿದರು. ಕನ್ನಡ ಹೊರತುಪಡಿಸಿ ಅನ್ಯ ಭಾಷೆಗಳ ವಿರೋಧಿಗಳು ನಾವಲ್ಲ ಎಂದು ಹೇಳಿದ ಬಡಿಗೇರ ಅವರು, ನಗರದಲ್ಲಿರುವ ಬ್ಯಾಂಕ್ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕನ್ನಡದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ಸರ್ಕಾರ ನೇಮಿಸಬೇಕೆಂದು ಸಲಹೆ ನೀಡಿದರು ನಂತರ ಪ್ರತಿಕ್ರಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾದ ಡಾ. ಪುರುಷೋತ್ತಮ ಎಲಿಮಲೆ ಅವರು, ಕನ್ನಡಪರ ಸಂಘಟನೆಯ ಮುಖಂಡರು ವ್ಯಕ್ತಪಡಿಸಿರುವ ಎಲ್ಲಾ ಆಗ್ರಹಗಳನ್ನು ಮತ್ತು ಮನವಿಗಳನ್ನು ಸರ್ಕಾರದ ಜೊತೆ ಮಾತನಾಡಿ ಬಗೆಹರಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾಗಿರುವ ಡಾಕ್ಟರ್ ಸಂತೋಷ್ ಹಾನಗಲ್ ಸೇರಿದಂತೆ ಕನ್ನಡಪರ ಸಂಘಟನೆ ಮುಖಂಡರು ಮತ್ತು ವಿವಿಧ ಕನ್ನಡ ಭಾಷಾ ಪ್ರೇಮಿಗಳು ಸಾಹಿತಿಗಳು ಉಪಸ್ಥಿತರಿದ್ದರು.