ಹಾರಕೂಡ ಶ್ರೀಗಳಿಂದ ಪೀರ್ ದೇವರಿಗೆ ಗೌರವ ಸಮರ್ಪಣೆ
ಬೀದರ್: ಜು.17:ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಗ್ರಾಮದಲ್ಲಿ ಮೊಹರಂ ಹಬ್ಬದ ನಿಮಿತ್ಯ ಶ್ರೀ ಮಠಕ್ಕೆ ಆಗಮಿಸಿದ ಪೀರ್ ದೇವರನ್ನು ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಶಾಲು ಹೊದಿಸಿ ಗೌರವ ಸಮರ್ಪಿಸಿದರು.
ಶ್ರೀ ಮಲ್ಲಿನಾಥ ಹಿರೇಮಠ ಹಾರಕೂಡ, ಲಾಲಅಹ್ಮದ್ ಬಾವಾ, ಬಸವಣಪ್ಪ ಗಿಲಿಗಿಲಿ, ನಾಗಣ್ಣ ಪೀರಜೆ, ವಿಜಯಕುಮಾರ ಅಟೂರೆ ಸೇರಿದಂತೆ ಹಿಂದೂ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.