ಉಪನ್ಯಾಸ ಕಾರ್ಯಕ್ರಮ
ಧಾರವಾಡ,ಜು.17: ಡಾ. ರಾ.ಯ. ಧಾರವಾಡಕರಅವರ ವ್ಯಕ್ತಿತ್ವ ವಿಶಾಲವಾದಆಲದ ಮರವಿದ್ದಂತೆ.ಅದರಡಿಯಲ್ಲಿ ಬೆಳೆದ ಅವರ ಶಿಷ್ಯ ಸಂಪತ್ತುಅಗಾಧವಾದುದುರಸಪ್ರಧಾನವಾದ ವಿಶಿಷ್ಟ ಬೋಧನಾ ಶೈಲಿ ಧೀರೋದಾತ್ತ ಆಡಳಿತ ವೈಖರಿ, ಬಹು ಭಾಷಾ ಪಾಂಡಿತ್ಯ, ಪ್ರಾಮಾಣಿಕತೆ ಮತು ಮಾನವೀಯ ಹೃದಯ ಶ್ರೀಮಂತಿಕೆ ಅವರ ಬಹುಮುಖ ವ್ಯಕ್ತಿತ್ವದ ಆಯಾಮಗಳಾಗಿದ್ದವು ಎಂದು ಪ್ರೊ. ಹರ್ಷ ಡಂಬಳ ಅವರು ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು.ಡಾ. ರಾ.ಯ. ಧಾರವಾಡಕರದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸಕಾರ್ಯಕ್ರಮದಲ್ಲಿ ಡಾ.ರಾ.ಯ. ಧಾರವಾಡಕರಅವರ ವ್ಯಕ್ತಿತ್ವ ಮತ್ತು ಬರಹ' ವಿಷಯಕುರಿತುಅತಿಥಿಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದಅವರು, ಧಾರವಾಡಕರಅವರುಧಾರವಾಡದ ಪ್ರತಿಷ್ಠಿತಜೆ.ಎಸ್.ಎಸ್. ಕಾಲೇಜಿನ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿಅದರ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸಿದರು.ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ವಿದ್ಯಾವರ್ಧಕ ಸಂಘಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದರು.ಇಪ್ಪತ್ತೈದಕ್ಕೂ ಹೆಚ್ಚು ಕನ್ನಡ ಮೌಲಿಕ ಕೃತಿಗಳನ್ನು ರೂಪಿಸಿದ್ದಾರೆ.ಅವರಕನ್ನಡ ಭಾಷಾಶಾಸ್ತ್ರ’ ಆಧುನಿಕಕನ್ನಡ ಭಾಷಾ ವಿಜ್ಞಾನದ ಬೆಳವಣಿಗೆಗೆ ಭದ್ರಬುನಾದಿ ಹಾಕಿದರೆ ಹೊಸಗನ್ನಡ ಸಾಹಿತ್ಯದಉದಯಕಾಲ, ಹೊಸಗನ್ನಡ ಸಾಹಿತ್ಯಚರಿತ್ರೆಕಟ್ಟಲು ತಳಪಾಯವಾಯಿತೆಂದು ಅವರ ಸಾಹಿತ್ಯಿಕಕೊಡುಗೆಯನ್ನು ಸ್ಮರಿಸಿದರು.
ಡಾ. ರಾ.ಯ. ಧಾರವಾಡಕರಅವರ ಪುತ್ರ ಅನೀಲ ಧಾರವಾಡಕರತಂದೆಯವರ ವ್ಯಕ್ತಿತ್ವ ಬಣ್ಣಿಸಿದರು.ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿ, ಜೆ.ಎಸ್.ಎಸ್. ಕಾಲೇಜಿನ ವಿದ್ಯಾರ್ಥಿಯಾಗಿದ್ದ ದಿನಗಳನ್ನು ನೆನಪಿಸಿಕೊಂಡರು.ವೇದಿಕೆ ಮೇಲೆ ಸಹ ಕಾರ್ಯದರ್ಶಿ ಶಂಕರ ಕುಂಬಿ ಇದ್ದರು.
ಸತೀಶತುರಮರಿ ಸ್ವಾಗತಿಸಿದರು.ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣಒಡ್ಡೀನ ವಂದಿಸಿದರು.ಪ್ರೊ.ಧನವಂತ ಹಾಜವಗೋಳ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಂಕರ ಹಲಗತ್ತಿ, ಡಾ.ಮಹೇಶ ಧ. ಹೊರಕೇರಿ, ಡಾ. ಜಿನದತ್ತ ಹಡಗಲಿ, ಸುಜಾತಾಧಾರವಾಡಕರ ಮನೋಜ ಪಾಟೀಲ, ಹ.ವೆಂ. ಕಾಖಂಡಕಿ, ಡಾ. ಮಾರ್ಕಂಡೇಯದೊಡಮನಿ, ಮಹಾಂತೇಶ ನರೇಗಲ್, ಎಸ್.ಬಿ. ಗುತ್ತಲ, ಬಿರಾದಾರ, ಸೀತಾರಾಮ ಶೆಟ್ಟಿ, ಎಸ್.ಕೆ.ಕುಂದರಗಿ, ವೆಂಕಟೇಶದೇಸಾಯಿ, ಕೃಷ್ಣ ಕಟ್ಟಿ, ಸಿ.ಜಿ. ಹಿರೇಮಠ, ರಮೇಶ ನಾಡಗೀರ, ಸುರೇಶ ಹೊರಕೇರಿ, ಚಂದ್ರಶೇಖರಅಮೀನಗಡ ಸೇರಿದಂತೆ ಉಪಸ್ಥಿತರಿದ್ದರು.