ಉಚಿತ ದಂತ ಚಿಕಿತ್ಸಾ ಶಿಬಿರ
ಬಾಗಲಕೋಟೆ,ಜು17: ಭಾವಸಾರ ವ್ಹಿಜನ್ ಇಂಡಿಯಾ ಬಾಗಲಕೋಟೆ ಏರಿಯಾ-101, ವಿಠ್ಠಲ ರುಕ್ಷ್ಮಿಣಿ ಮಂದಿರ (ರಿ) ಹಾಗೂ ಸಮುದಾಯ ಭವನ ಟ್ರಸ್ಟ ಹಾಗೂ ಬಿ.ವಿ.ವಿ. ಸಂಘದ P.ಒ.ಓ.ಒ. ಡೆಂಟಲ್ ಕಾಲೇಜ ವತಿಯಿಂದ ನವನಗರದ ಸೆಕ್ಟರ ನಂ. 10ರ ಸಮುದಾಯ ಭವನದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಬಿ.ವಿ.ಐ.ನ ಅಧ್ಯಕ್ಷರಾದ ಶ್ರೀಮತಿ ರೂಪಾ ಜಾಧವ, ಕಾರ್ಯದರ್ಶಿ ಜಯಾ ಲಾತೂರಕರ, ವಿಠ್ಠಲ-ರುಕ್ಷ್ಮಿಣಿ ಟ್ರಸ್ಟನ ಅಧ್ಯಕ್ಷರಾದ ಪ್ರಕಾಶ ಶಿಂತ್ರೆ, ಉಪಾಧ್ಯಕ್ಷರಾದ ಬಿ.ಡಿ. ಲೋಖಂಡೆ, ದತ್ತಾತ್ರೇಯ ಚೌಧರಿ, ರಮಾನಂದ ಕರ್ಣೆ ಸೇರಿದಂತೆ ಎಲ್ಲ ಸದಸ್ಯರು ಹಾಗೂ P.ಒ.ಓ.ಒ. ಡೆಂಟಲ್ ಕಾಲೇಜಿನ ವೈದ್ಯರು ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.