ದೊಡ್ಡ ಗರಿಯಾರದ ನವೀಕರಣ ಬಹುತೇಕ ಪೂರ್ಣ
ಸಂಜೆವಾಣಿ ನ್ಯೂಸ್
ಮೈಸೂರು: ಜು.17:- ಮೈಸೂರಿನ ಪಾರಂಪರಿಕ ಹೆಗ್ಗುರುತುಗಳಲ್ಲಿ ಒಂದಾದ ದೊಡ್ಡ ಗಡಿಯಾರದ ನವೀಕರಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, 20 ದಿನಗಳಲ್ಲಿ ತನ್ನ ಕಾರ್ಯ ಮುಂದುವರೆಸಲಿದೆ.
94 ವರ್ಷಗಳ ಇತಿಹಾಸವಿರುವ ದೊಡ್ಡ ಗಡಿಯಾರ ಕಟ್ಟಡ ಶಿಥಿಲವಾಗಿದ್ದಲ್ಲದೇ, ಗಡಿಯಾರವೂ ಕೆಟ್ಟಿತ್ತು. ಈ ಹಿನ್ನೆಲೆ ಮೈಸೂರು ಮಹಾನಗರ ಪಾಲಿಕೆ ಸುಮಾರು 42 ಲP್ಷÀ ರೂ. ಅನುದಾನದಲ್ಲಿ 2023ರ ಆಗ¸್ಟï ತಿಂಗಳಿಂದ ನವೀಕರಣ ಕಾರ್ಯ ಆರಂಭಿಸಿತ್ತು. ಪಾರಂಪರಿಕ ದೊಡ್ಡ ಗಡಿಯಾರ ಕಟ್ಟಡ ಸಂರP್ಷÀಣೆ ಮಾಡುವ ನಿಟ್ಟಿನಲ್ಲಿ ಕಳೆದ ವರ್ಷದಿಂದ ಆರಂಭÀವಾದ ನವೀಕರಣ ಕಾರ್ಯ ಬಹುತೇಕ ಮುಕ್ತಾಯಗೊಂಡಿದ್ದು, ಮಳೆ ಬಿಡುವು ನೀಡಿದರೆ 15-20 ದಿನಗಳಲ್ಲಿ ಕಾಮಗಾರಿ ಸಂಪೂರ್ಣವಾಗಲಿದೆ.
1927ರ ಆಗ¸್ಟï 8ರಂದು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ 25ನೇ ವರ್ಷದ ನೆನಪಿಗಾಗಿ ಪುರಭವನದ ಎದುರು 75 ಅಡಿ ಎತ್ತರದ ಈ ಪಾರಂಪರಿಕ ದೊಡ್ಡ ಗಡಿಯಾರ ನಿರ್ಮಾಣ ಕಾರ್ಯಾರಂಭÀವಾಯಿತು. ಕ್ಲಾಕ್ ಟವರ್‍ನ ನಾಲ್ಕು ಕಡೆಯಲ್ಲೂ ವೃತ್ತಾಕಾರದ ಗಡಿಯಾರವಿದ್ದು, ಕನ್ನಡ ಅಂಕಿಗಳ ಬಳಕೆಯೊಂದಿಗೆ ಭಾಷಾಭಿಮಾನ ಬಿಂಬಿಸುವಂತೆ ನಿರ್ಮಿಸಲಾಗಿತ್ತು.
ಪ್ರತಿ ಗಂಟೆಗೊಮ್ಮೆ ಗಡಿಯಾರದ ಗಂಟೆ ಶಬ್ಧ 5 ಕಿ.ಮೀ. ವರೆಗೆ ಕೇಳಿಸುತ್ತಿತ್ತು. ಕಾಲ ಕ್ರಮೇಣ ಈ ಗಡಿಯಾರ ದುರಸ್ತಿಗೊಳಗಾಗಿದ್ದು, 1990ರ ನಂತರ ಗಡಿಯಾರ ತನ್ನ ಶಬ್ಧವನ್ನು ನಿಲ್ಲಿಸಿತಾದರೂ, ಸಮಯವನ್ನು ಮಾತ್ರ ಸರಿಯಾಗಿ ತೋರಿಸುತ್ತಿತ್ತು. ಕ್ರಮೇಣ ಗಡಿಯಾರವೂ ಕೆಟ್ಟಿತ್ತು.
ಸುಣ್ಣದ ಗಾರೆ, ನದಿ ತಟದ ಮರಳು ಬಳಕೆ:
ಪಾರಂಪರಿಕ ದೊಡ್ಡ ಗಡಿಯಾರ ನವೀಕರಣಕ್ಕೆ ಸುಣ್ಣದ ಗಾರೆ ಹಾಗೂ ನದಿ ತಟದ ಮರಳು ಬಳಕೆ ಮಾಡಲಾಗಿದೆ. ನೆಲದಲ್ಲಿ ಹೆಗ್ಗಣಗಳು ಕೊರೆದಿದ್ದ ಜಾಗವನ್ನು ಮುಚ್ಚಲು ಎಂ-ಸ್ಯಾಂಡ್ ಬಳಕೆ ಮಾಡಲಾಗಿದೆ. ಮೈಸೂರು ಪೆÇೀಸ್ಟಲ್ ಟ್ರೈನಿಂಗ್(ಅಂಚೆ ಪ್ರಶಿP್ಷÀಣ) ಕಾಲೇಜಿನಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿಯಲ್ಲಿಯೂ ಸುಣ್ಣದ ಗಾರೆ ಬಳಸುತ್ತಿದ್ದು, ಅಲ್ಲಿಂದಲೇ ಸುಣ್ಣದ ಗಾರೆ ತಂದು ದೊಡ್ಡ ಗಡಿಯಾರಕ್ಕೆ ಬಳಸಲಾಗುತ್ತಿದೆ.
ತಜ್ಞರ ಸಲಹೆ ಪಡೆಯಲಾಗಿದೆ:
ಜಯಲಕ್ಷ್ಮೀ ಪ್ಯಾಲೆಸ್ ಸಂರP್ಷÀಣೆ ಕಾರ್ಯದಲ್ಲಿರುವ ಡೆಕ್ಕನ್ ಹೆರಿಟೇಜ್ ಅವರ ಸಲಹೆ ಸೇರಿದಂತೆ ಮೈಸೂರಿನ ಪಾರಂಪರಿಕ ತಜ್ಞರ ಸಲಹೆಯನ್ನು ಪಡೆದು ದೊಡ್ಡ ಗಡಿಯಾರ ಸಂರP್ಷÀಣೆ ಮಾಡಲಾಗಿದೆ. ಪಾರಂಪರಿಕ ಶೈಲಿಗೆ ಕಿಂಚಿತ್ತೂ ಧÀಕ್ಕೆ ಬಾರದಂತೆ ಸಂರP್ಷÀಣಾ ಕಾಮಗಾರಿ ನಡೆದಿದೆ. ಅದೇ ರೀತಿ ಪೂರ್ಣಗೊಳ್ಳಲಿದೆ. ಕ್ಲಾಕ್ ಟವರ್‍ನ ಕಿಟಕಿ, ಗಾಜುಗಳು, ಫ್ರೇಂ, ಶಟ್ಟರ್‍ಗಳು, ಪ್ಲಾಟ್ ಫಾರಂ ಮೇಲಿನ ಕಲ್ಲಿನ ನೆಲಹಾಸುಗಳನ್ನು ನಿಗದಿಪಡಿಸಿರುವ ಸಲಕರಣೆಗಳನ್ನೇ ಬಳಸಿಕೊಂಡು ಸಂರP್ಷÀಣೆ ಮಾಡಲಾಗಿದೆ ಎಂದು ಪುರಾತತ್ವ, ವಸ್ತು ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆಯ ಆಯುಕ್ತ ಎ.ದೇವರಾಜು ತಿಳಿಸಿದ್ದಾರೆ.
ನಿರ್ವಹಣೆ ಹೊಣೆ ಪಾಲಿಕೆಗೆ:
ದೊಡ್ಡ ಗಡಿಯಾರ ಕಟ್ಟಡದಲ್ಲಿನ ಗಡಿಯಾರದ ನಿರ್ವಹಣೆ ಹೊಣೆ ಪಾಲಿಕೆ ಮೇಲಿದೆ. ಈ ಮೊದಲೇ ಗಡಿಯಾರ ನಿಂತಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಮತ್ತೆ ನಡೆಯುವಂತೆ ಮಾಡಲಿz್ದÁರೆ. ಗಡಿಯಾರದ ನಿರ್ವಹಣೆಯ ಜವಾಬ್ದಾರಿಯನ್ನು ಈಗಾಗಲೇ ಪಾಲಿಕೆ ತಜ್ಞರಿಗೆ ವಹಿಸಿದೆ ಎಂದು ಮೂಲಗಳು ತಿಳಿಸಿವೆ.
ಪಾರಂಪರಿಕ ತಜ್ಞರ ಆಕ್ಷೇಪ:
ದೊಡ್ಡ ಗಡಿಯಾರ ನವೀಕರಣ ಕಾರ್ಯ ಸರಿಯಾದ ರೀತಿಯಲ್ಲಿ ಆಗಿಲ್ಲ. ಕೆಲ ಭಾಗದಲ್ಲಿ ಹೆಗ್ಗಣಗಳು ಕೊರೆದಿದ್ದ ಜಾಗವನ್ನು ಚಪ್ಪಡಿ ಕಲ್ಲುಗಳನ್ನು ಹಾಕಿ ಮುಚ್ಚಿದ್ದಾರೆ. ಇದರ ಬದಲು ಲಾನ್ ಮಾಡಬಹುದಿತ್ತು. ಆದರೆ ಎಂ-ಸ್ಯಾಂಡ್-ಸಿಮೆಂಟ್ ಬಳಸಿ ಮುಚ್ಚಿz್ದÁರೆ. ಅಲ್ಲದೆ ದೊಡ್ಡ ಗಡಿಯಾರದ ಸುತ್ತಲೂ ಇದ್ದ ಗೋಡೆ ಸಂರP್ಷÀಣೆಗೂ ಎಂ-ಸ್ಯಾಂಡ್ ಬಳಕೆ ಮಾಡಿz್ದÁರೆ. ಹಳೆ ಸುಣ್ಣದ ಗಾರೆಗೆ ಎಂ-ಸ್ಯಾಂಡ್ ಹೊಂದಿಕೊಳ್ಳುವುದಿಲ್ಲ ಎಂದು ಹೇಳಿದರೂ ಗುತ್ತಿಗೆದಾರರು ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಪಾರಂಪರಿಕ ತಜ್ಞ ಪೆÇ್ರ.ಎನ್.ಎಸ್.ರಂಗರಾಜು ಬೇಸರ ವ್ಯಕ್ತಪಡಿಸಿz್ದÁರೆ.
ಸುಣ್ಣ, ಮರಳು, ಮರವಜ್ರ, ಕೋಳಿಮೊಟ್ಟೆ, ಬೆಲ್ಲದ ಪಾಕ, ಅಂಟುವಾಳ ಕಾಯಿ ಸೇರಿಸಿ ಅರೆದ ಸುಣ್ಣದ ಗಾರೆ ತಯಾರಿಸಬೇಕು. ಆದರೆ ಅದನ್ನು ಬಿಟ್ಟು ಎಂ-ಸ್ಯಾಂಡ್ ಮತ್ತು ಸಿಮೆಂಟ್ನಲ್ಲಿಯೇ ಕಾಮಗಾರಿ ನಡೆಸುತ್ತಿz್ದÁರೆ. ಒಟ್ಟಾರೆ ಶಿಘ್ರದಲ್ಲೇ ಪಾರಂಪರಿಕ ದೊಡ್ಡ ಗಡಿಯಾರ ನವೀಕರಣಗೊಂಡು ಜನರನ್ನು ಗಂಟೆಗೊಮ್ಮೆ ಎಚ್ಚರಿಸಲು ಅಣಿಯಾಗುತ್ತಿದೆ.